UTTARASHADHA NAKSHATRA
ಉತ್ತರಾಷಾಢ ನಕ್ಷತ್ರ

1.      The 21st Nakshatra: UTTARA ASHADHA.
2.      ಇದು ನಮ್ಮ ಕೋನ್ಸ್ಟಲ್ಲೇಷನ್ಸಿನಲ್ಲಿ ೨೧ ನೇ ನಕ್ಷತ್ರ
3.      The four quarters are ruled by:
4.      ನಾಲ್ಕು ಪಾದಗಳನ್ನ ಈ ಕೆಳಗಿನ ರೀತಿ ಆಳುತ್ತದೆ.
5.      Guru (Jupiter) - the 1st quarter,
6.      Shani (Saturn) - the 2nd quarter,
7.      Shani (Saturn) - the 3rd quarter,
8.      Guru (Jupiter) - the 4th quarter.
9.      Animal is Mongoose (male).
10. Symbol - a small cot.
11. Devata (Deity) - Vishwadeva.
12. Dosha - Kapha. 
13. They have a fair complexion. A strongly placed Chandra (Moon) in the natal chart of some Uttaraashadha born can give them a fair complexion.
14. ಇವರುಗಳು ಸಾಮಾನ್ಯವಾಗಿ ಫೇರ್ ಕೋಂಪ್ಲೆಕ್ಸಿನವರಾಗಿರುತ್ತಾರೆ.
15. These people are pure-hearted and respect others, especially the elders.
16. ಇವರು ಶುಧ್ಧವಾದ ಹೃದಯದವರು.

17. They are honest in their dealings when it comes to business.

18. ಬಿಸಿನೆಸ್ಸಿಗೆ ಬಂದಾವಾಗ, ಬಹಳ ಕಳಂಕರಹಿತರಾಗಿರುತ್ತಾರೆ. ಈ ಉತ್ತರಾಷಾಢ ನಕ್ಷತ್ರದವರು.

19. But before taking any business decision, they try to consider as many aspects of the situation as possible.

20. ಆದರೆ ಬಿಸಿನೆಸ್ಸ್ ಡಿಸಿಷನ್ಸ್ ತೆಗೀದುಕೊಳ್ಳುವ ಮೊದಲು ಹಲಾವಾರು ವಿಧಗಳಿಂದ, ಕೋನಗಳಿಂದ  ಅದನ್ನ ಅರೆದು ತಿಕ್ಕಿ ನೋಡುತ್ತಾರೆ.

21. This is good, in the sense that a hastily concluded business deal often ends up putting them in a difficult situation.

22. ಇದು ಒಂದು ರೀತಿಯಿಂದ ಬಹಳ ಒಳ್ಳೆಯದೇ. ಕಾರಣ, ಆಮೇಲೆ ಲೋಸ್ ಆಗಿ ತೊಂದರೆ ಪಡುವುದಕ್ಕಿಂತ, ಮೊದಲೇ ಯೋಚನೆ ಮಾಡುವುದು ಬಹಳ ಒಳ್ಳೆಯದೆನ್ನಿ.

23. Uttaraashadha born are natural diplomats. For them, preserving a relationship has the utmost importance.
24. ಇವರುಗಳು ಒಂದು ಬಾರಿ ನಿಮ್ಮೊಡನೆ ಸಂಬಂಧವನ್ನ ಬೆಳೆಸಿದರೆ, ಅದನ್ನ ಹೇಗೆ ಉತ್ತಮವಾಗಿ ನಡೆಸಿಕೊಂಡು ಹೋಗುವುದೂ ಅಂತ ನೋಡುತ್ತಾರೆ.

25. A good Mercury placed in their natal chart can make them a good consultant or adviser in any field.

26. ಒಳ್ಳೇ ಬುಧನು ಇವರಿಗೆ ಬಹಳ ಒಳ್ಳೇಯದನ್ನೇ ಮಾಡುವನು.

27. But on an average, these people enjoy good married life.

28. ಇವರುಗಳ ಮದುವೆ ಜೀವನವು ಒಳ್ಳೇ ರೀತಿಯಲ್ಲಿಯೇ ಸಾಗಿರುತ್ತೆ. ಕಾರಣ, ಸ್ಪೌಸಿನ ಮನೆಯ ಅಧಿಪತಿ ರಾಶಿ ಮಕರವಾದಲ್ಲಿ,ಒಂದೂ ಚಂದ್ರನಾಗಿರುತ್ತಾನೆ, ಇಲ್ಲಾ ಅದು ಕುಂಭ ರಾಶಿಯಾದಲ್ಲಿ. ಸೂರ್ಯನಾಗಿರುತ್ತಾನೆ, 

29. Uttarashadha -1 falls in Sagittarius Rashi, whose lord is Jupiter and Uttarashadha 2,3 and 4 padas falls in Rashi Capricorn, whose lord is Saturn. Hence, Uttarashadha people are having mixed characteristics. Nakshatra Lord is Sun indicating these people are egoistic, administrative, energetic and angry natured people.

30. ಉತ್ತರಾಷಾಢ-ಪಾದ ೧ ಧನೂರ್ ರಾಶಿಗೆ  ಬಂದಿದ್ದು, ಅದು ಗುರುವಿನ ಆಡಳಿತದಡಿ ಬರುತ್ತೆ. ಈ ರಾಶಿಯು ಅಗ್ನಿ ತತ್ವದ್ದಾದರೆ, ರಾಶಿಯ ಅಧಿಪತಿ ಗುರು ಗ್ರಹನು ಆಕಾಷ ತತ್ವದವನಾಗಿರುತ್ತಾನೆ. ಅದೇ ಉತ್ತರಾಷಾಢ ಪಾದ ೪ ರವರೂ ಸಹ ಮೀನಾ ರಾಶಿಗೆ ಬಂದಿದ್ದು, ಅದೂ ಸಹ ಆಕಾಷ ತತ್ವದಡಿ ಬರುತ್ತೆ. ಆದರೆ ಮೀನ ರಾಶಿಯು ಆಳವಾದ ಸಮುದ್ರದ ನೀರಿನ ರಾಶಿ ಆಗಿರುತ್ತದೆ. ಇನ್ನು ಉತ್ತರಾಷಾಢ ೨ ಮತ್ತು ೩ ನೇ ಪಾದಗಳು ಮಕರ ರಾಶಿ ಹಾಗೂ ಕುಂಭ ರಾಶಿಗೆ ಬರುತ್ತವೆ. ಕುಂಭ ರಾಶಿಯು ಪೃಥ್ವೀ ತತ್ವದ್ದಾದರೆ, ಕುಂಭ ರಾಶಿಯು ವಾಯು ತತ್ವದ್ದಾಗಿರುತ್ತದೆ. ಈ ರಾಶಿಗಳ ಅಧಿಪತಿ ವಾಯು ತತ್ವದ ಶನಿ ಗ್ರಹನಾಗುತ್ತಾನೆ. ಉತ್ತಾರಾಷಾಢ ನಕ್ಷತ್ರವು ಸೂರ್ಯನ ನಕ್ಷತ್ರ. ಅಂದರೆ ರವಿ, ಅವನ ಮಗ ಸ್ತ್ತಶನಿಯ ಶತ್ರುವಾಗುತ್ತಾನೆ. ಅದೇ ಗುರು ಗ್ರಹನು ರವಿಯ ಮಿತ್ರನಾಗುತ್ತಾನೆ. ಇಲ್ಲಿ ಆಕಾಷ ತತ್ವ, ವಾಯು ತತ್ವ ಅಗ್ನಿ ತತ್ವ, ಪೃಥ್ವೀ ತತ್ವ ಹಾಗೂ ಜಲತತ್ವದ ಸಮ್ಮಿಷ್ರಣ ನಮಗೆ ನೋಡಲು ಸಿಗುತ್ತವೆ. ಅಂದರೆ ನಮಗೆ ಇವರುಗಳು ಉದಯಿಸುವಂತಹ ಸೂರ್ಯನ ಉದಯಾಗ್ನಿಯನ್ನ ಪಡೆದಿದ್ದು, ಒಳ್ಳೇ ಶಕ್ತಿಶಾಲಿಯಾಗಿ, ದಿನಾಲೂ ಸಮಯಕ್ಕೆ ಸರಿಯಾಗಿ ಪೂರ್ವದ ದಿಗಂತದಲ್ಲಿ ಉದಯಿಸಿ, ಸಂಜೆ ಪಶ್ಚಿಮದಲ್ಲಿಹೇಗೆ ಸೂರ್ಯನು ಮುಳುಗುತ್ತಾನೋ, ಹಾಗೆಯೇ ಕ್ರಮವತ್ತಾಗಿ ತಮ್ಮ ಕೆಲಸವನ್ನ ಮಾಡುವಂತಹ ಶಿಸ್ತಿನ ಸರದಾರರಾಗಿ, ರವಿಯಿಂದ ಅಹಂಕಾರ, ದರ್ಪ, ಹಾಗೂ ಆಡಳಿತವನ್ನ ಪಡೆದಿರುತ್ತಾರೆ. ಸೂರ್ಯನು ಹೇಗೆ ಅಗ್ನಿಯ ಗೋಲದಂತೆ ಪ್ರಕಾಷಮಾನವಾಗಿ ಇಡೀ ಜಗತ್ತಿಗೇ ಬೆಳಕನ್ನ ಕೊಡುವುದೋ, ಹಾಗೆಯೇ, ಇವರೂ ಕೂಡ ಸರ್ವರ ಜೊತೆಯಲ್ಲಿ ಸೇರಿ, ಅವರುಗಳಿಗೆ ಸಹಾಯವನ್ನ ಮಾಡುವಂತ್ರಾವ್ಗರ್ರಾಗ್ತ್ತಿ, ಅವ್ರರುಗಳ ಮೆಚ್ಚುಗೆಗೆ ಪಾತ್ರರಾಗಿರುತ್ತಾರೆ.

31. But, Uttarashadha –Pada 1, since in Sagittarius Rashi, the lord of it is Jupiter. Hence they are very religious, soft spoken, workaholic and very respectable people also! If Uttrashadha-1 Pada is combined with Mars, the name and fame will come to their feet automatically and they need not in search of the same or command for the same as in the case of Venus and Mercury combination people.
32. ಈ ಉತ್ತರಾಷಾಢ ಒಂದನೇ ಪಾದದವರು ಬಹಳ ನಮ್ರತೆ ಇರುವವರು, ಧಾರ್ಮಿಕ ಪ್ರವೃತ್ತಿಯವರು. ಕೆಲಸವನ್ನ ಮಾಡುವವರು. ಮತ್ತು ಸಮಾಜದಲ್ಲಿ ಗೌರವದಿಂದ ಬಾಳುವವರಾಗಿರುತ್ತಾರೆ. ಇದೇ ಉತ್ತರಾಷಾಢ ನಕ್ಷತ್ರದವರೆಲ್ಲಿಯಾದರೂ ಕುಜನೊಡನೆ ಸೇರಿದರೆ, ಇವರುಗಳಿಗೆ ಗೌರವ ಕಾಲಬುಡಕ್ಕೆ ಬಂದು ಬೀಳುತ್ತವೆ. ಕಾರಣ, ಇಲ್ಲಿ ಗುರು-ಕುಜ ಮತ್ತು –ರವಿಯ ಕೋಂಬಿನೇಷನನ್ನ ನೀವುಗಳು ನೋಡಬಹುದು. ಅದೇ ಶುಕ್ರ-ರವಿ ಮತ್ತು ಬುಧನ ಕೋಂಬಿನೇಷನ್ನೆಲ್ಲಿಯಾದರೂ ಇದ್ದರೆ, ಅಲ್ಲಿ ಪವರ್ ಡಿಗ್ನಿಟೀ ಇಂಡೆಕ್ಸ್ ಉಂಟಾಗುತ್ತದೆ. ಅಂದರೆ ಇವರುಗಳಿಗೆ ಗೌರವಕ್ಕಾಗಿ ಕಮ್ಮಾಂಡ್ ಮಾಡಬೇಕಾಗುತ್ತದೆ. ಇವರೂ ಹಾರ್ಡ ವರ್ಕ್ ಮಾಡಿದರೂ ಗೌರವವು ಕಾಲ ಬುಡಕ್ಕೆ ಬರುವುದಿಲ್ಲ! ಇದು ಈ ಕೋಂಬಿನೇಷನ್ನವರ ಹಣೇಬರಹ ಅನ್ನಿ!
33. Same Uttarashadha 2, 3 and 4 padas are very hard working people as well as very cool people. But if they get angry, then you cannot control them so easily! They normally born in a poor family and slowly and steadily they come up in the family as the lord is Saturn. Saturn is the karaka for class IV employees, poor people, stale food, legal matters and for slow in actions! Their color may be little darkish as Saturn is for dark color. They are good at stitching, photography, agriculture fields, gardening etc. In fact Saturn has the characteristics of making them Crorepatis or Crorepatnis!

34. ಅದೇ ಉತ್ತರಾಷಾಢ ನಕ್ಷತ್ರದ ೨ ಮತ್ತು ೩ ನೇ ಪಾದದವರು ಬಹಳ ಹಾರ್ಡ್ ವರ್ಕಿಂಗ್ ಪೀಪಲ್. ಕಾರಣ ಇವರ ಅಧಿಪತಿ ಶನಿ. ಇವರು ನ್ಯಾಯವಾಗಿಯೇ ಹೋಗುವಂತಹ ಜನರು. ಇವರಿಗೆ ಅನ್ಯಾಯ ಆಗೋದೇ ಇಲ್ಲ. ಮತ್ತೆ ಇವರುಗಳು ಕೆಳದರ್ಜೆಯ ಜನರ ಹತ್ತಿರ ಹಾಗೂ ಮುದುಕ ಮತ್ತು ಮುದುಕಿಯರ ಜೊತೆಯಲ್ಲಿ ಚೆನ್ನಾಗಿ ಬೆರೆತು ನಡೆಯುತ್ತಾರೆ. ಕಾರಣ ಶನಿಗೆ ಕ್ಲಾಸ್ ಫೋರ್ ಎಂಪ್ಲಾಯೀಸ್ ಮತ್ತು ಮುದುಕರೆಂದರೆ ಇಷ್ಟ. ಆದರೆ ಇವರಿಗೆಲ್ಲಿಯಾದರೂ ಕೋಪ ಬಂದಿತೆಂದರೆ, ಇವರನ್ನ ಹತೋಟೆಯಲ್ಲಿಡಲು ಬಹಳ ಕಷ್ಟ! ಇವರುಗಳು ಸಾಮಾನ್ಯವಾಗಿ ಬಹಳ ಬಡಸ್ತಿಕೆಯಲ್ಲಿ ಬೆಳೆದಂತಹವರು. ಅಂತಹ ಬಡಸ್ತಿಕೆಯಿಂದ ನಿಧಾನವಾಗಿ ಮೇಲಕ್ಕೆ ಬರುವವರು ಈ ಉತ್ತರಾಷಾಢಾ ಪಾದ ೨ ಮತ್ತು ೩ ರವರು. ಇವರುಗಳು ಹಳಸಿದ ಆಹರವನ್ನೂ ತಿಂದಾರು. ತಣ್ಣಗಿನ ಆಹಾರ, ಅಂದರೆ ಈಗಿನ ಕಾಲದಲ್ಲಿ ಫ್ರಿಡ್ಜನಲ್ಲಿಟ್ಟಂತಹ ಆಹಾರಗಳನ್ನೂ ತಿಂದಾರು. ಕಾರಣ, ಶನಿಯು ಕೋಲ್ಡ್ ಪ್ಲೇನೆಟ್. ಇವರುಗಳು ಬಹಳ ನಿಧಾನ. ಇದಕ್ಕೂ ಶನಿಯೇ ಕಾರಣ. ಇವರುಗಳು ನೀಲಿ ಮತ್ತು ಕಪ್ಪು ಬಣ್ಣವನ್ನ ಲೈಕ್ ಮಾಡುತ್ತಾರೆ. ಇವರುಗಳು ಬಟ್ಟೆ ಹೊಲಿಯುವುದರಲ್ಲಿ, ಕೃಷಿಯಲ್ಲಿ, ತೋಟಗಾರಿಕೆಯಲ್ಲಿ, ಇಂಡಸ್ಟ್ರೀಸಿನಲ್ಲಿ ಹೆಚ್ಚಿಗೆ ಕೆಲಸವನ್ನ ಮಾಡುತ್ತಿರುತ್ತಾರೆ. ಶನಿಯು ಇವರನ್ನ ನಿಧಾನವಾಗಿ ಕೋಟ್ಯಾಧೀಷರನ್ನಾಗಿ ಮಾಡುವರು. ಇವರುಗಳಿಗೆ ಜನ ಸಂಪರ್ಕ ಬಹಲ ಅಂದರೆ ಬಹಳ ಕಡಿಮೆಯಾಗಿರುತ್ತೆ. ಇದು ಅವರಿಗೆ ಕಾಹಿಲೆಗಳು ಬಂದಾವಾಗ ತಿಳಿಯುತ್ತೆ. ಇವರೊಂದು ಒಂಕುಂಟಿ ವ್ಯಕ್ತಿ ಅಂದರೆ ತಪ್ಪಾಗಲಾರದು.

35.   Uttarashadha Nakshatra navamsha falls in Rashi Sagittarius, Capricorn, Aquarius and Pisces. Those who are Uttarashadha Pada-1 and Pada-4 have the common lord as Jupiter and born with the characteristics of what I mentioned above. However there may be slight differences exist between them. It is because of Pisces is deep Jal Rashi and Sagittarius is Fiery Sign Rashi, and Jupiter is Akasha Tatwa Rashi! So Sagittarius people are having angry nature also besides thinking about very big things! It is just because of Akasha Tatwa as well as Jupiter is big planet. Same, Pisces born Uttarashadha Navamsha people may have deep thinking on any matter as well as they may be very dharmik oriented people also! They are more talkative than Sagittarius Navamsha born people! Sagittarius Navamsha born people are little bit adamant and egoistic and serious personality! Whereas, Pisces born navamsha people are very friendly natured, smiley face people!

36.   ಉತ್ತರಾಷಾಢ ನಕ್ಷತ್ರದವರ ಪಾದ ೧ ಮತ್ತು ೪ ರವರ ಅಧಿಪತಿ ಗುರುವಾಗಿರುತ್ತಾನೆ. ಆದರೂ ಸಹ ಇವರ ಮಧ್ಯ ವ್ಯತ್ಯಾಸಗಳುಂಟು. ಅದು ಏನಂತೀರ? ಮೀನ ರಾಶಿಯು ಆಳವಾದ ಜಲ ರಾಶಿ. ಅದೇ ಧನೂರ್ ರಾಶಿಯು ಭಚಕ್ರದ  ಕೊನೆಯ ಅಗ್ನಿ  ತತ್ವದ ರಾಶಿ! ಅದೇ ಗುರು ಗ್ರಹವು ಆಕಾಷ ತತ್ವದ್ದು. ಆದ್ದರಿಂದ ಧನೂರ  ರಾಶಿಯವರಿಗೆ ಕೋಪ ಬರುತ್ತದೆ. ಇವರುಗಳು ಯೋಚನೆಯನ್ನ ಮಾಡುವುದು ಬಹಳ ದೊಡ್ಡದೇ! ಇದು ಯಾಕೆಂದರೆ ಗುರು ಗ್ರಹ ದೊಡ್ಡ ಗ್ರಹ. ಇವರು ಒಂದು ಮನೆಯನ್ನ ತೆಗೆದುಕೊಳ್ಳುವಾಗಲೂ ೨ ಮಲಗುವ ಕೋಣೆಯನ್ನ ಆರಿಸುವ ಬದಲು ೪ ಕೋಣೆಗಳನ್ನ ಆರಿಸುವರು. ಇವರುಗಳು ಎಲ್ಲಿಯಾದರೂ  ಸಣ್ಣ ಕಾರನ್ನ ಹುಡುಕುತ್ತಿರುವಾಗ, ಇವರ ಹೆಂಡತಿಯು ಮಾರುತಿ ಕಾರನ್ನ ಹೆಕ್ಕಲು ಹೋದಲ್ಲಿ , ಈ ಉತ್ತರಾಷಾಢ ನಕ್ಷತ್ರದ ಧನೂರ್ ರಾಶಿಯವರು ಬಿಎಮ್ ಡಬ್ಲ್ಯೂ ಕಾರನ್ನ ನೋಡುತ್ತಿರುತ್ತಾರೆ! ಅದೇ ಮೀನ ರಾಶಿಯ ಉತ್ತರಾಷಾಢ ನಕ್ಷತ್ರದವರು,  ಯಾವುದೇ ವಿಚಾರದಲ್ಲಿ ಬಹಳ ಆಳವಾಗಿ ಯೋಚಿಸುತ್ತಾರೆ.  ಇವರುಗಳು ಬಹಳ ಧಾರ್ಮಿಕ ಸ್ವಭಾವದವರು. ಈ ಮೀನ ರಾಶಿಯ ಉತ್ತರಾಷಾಢ ನಕ್ಷತ್ರದವರು ಬಹಳ ಮಾತನಾಡುವ ಸ್ವಭಾವದವರು. ಕಾರಣ ಮೀನ ರಾಶಿಯೇ ಜಲ ತತ್ವದ ರಾಶಿ.ಈ ಮೀನರಾಶಿಯ ಉತ್ತರಾಷಾಢ ನಕ್ಷತ್ರದವರು ಬಹಳ ಫ್ರೆಂಡ್ಲೀ ನೇಚರ್ ಅವರು ಆಗಿರುತ್ತಾರೆ. ಇವರು ಸದಾ ನಗೆಯಾಡುತ್ತಾ ಇರುತ್ತಾರೆ. ಅದೇ ಧನೂರ್ ರಾಶಿಯ ಉತ್ತರಾಷಾಢ  ನಕ್ಷತ್ರದವರು ಬಹಳ ಅಹಂಕಾರಿಗಳಾಗಿರುತ್ತಾರೆ.

37.   Same Saturn born Navamsha people are very hard work people. They are fit to be lawyers as Saturn is for the judgments!  Saturn will not allow them to perform “Hera Ferry” way of things in the life. They are disciplined people. However since Sun is also involved in the Nakshatra, and Sun and Saturn are enemies and hence they cannot be predicted so easily that they will be same type of persons throughout their life! If you ask me, I call them as “Paagal”, without the combination of Moon and Rahu! If Moon and Rahu joins in the rashis, then cent percent they are emotionally up and down moving people! They are cent percent mad people only! It is because Moon is the Karaka for mind. If Rahu combust or even stays with the Moon also, their nature will be unpredictable. I have seen so many such combination people in my career. They usually behave differently! You may verify their horoscope, if such persons are coming to your notice in your life! If anyone shows somewhat eccentric behaviors, then definitely you may find Rahu and Moon combinations in their horoscope! That too in Capricorn itself!

38.   ಉತ್ತರಾಷಾಢ ನಕ್ಷತ್ರ-ಮಕರ ರಾಶಿ ಹಾಗೂ ಕುಂಭರಾಶಿಯವರು ಬಹಳ ಹಾರ್ಡ್ ವರ್ಕಿಂಗ್ ಪೀಪಲ್. ಇವರುಗಳು ಲಾಯರ್ ಆಗಲು ಬಹಳ ಲಾಯಕ್. ಶನಿಯು ತಾನೂ ಹೇರಾ ಫೇರಿ ಮಾಡುವುದಿಲ್ಲ, ಬೇರವರಿಗೂ ಮಾಡಲು ಬಿಡುವುದಿಲ್ಲ. ಇವರುಗಳು ಬಹಳ ಶಿಸ್ತಿನ ಮನುಷ್ಯರು. ಆಫೀಸಿಗೆ ಹೋಗುವವರಾದಲ್ಲಿ, ಇವರ ಟೈಮಿಂಗ್ಸ್ ಬೆಳಿಗ್ಗೆ ೯ ರಿಂದ ಸಂಜೆ ೬ ಗಂಟೆಯವರೆಗೆ ಆಫೀಸಿನ ಸಮಯವಾದಲ್ಲಿ, ಇವರುಗಳು ಅಂದರೆ  ಈ ಉತ್ತರಾಷಾಢ ನಕ್ಷತ್ರದ ಶನಿಯ ರಾಶಿಗಳಾದ ಮಕರ ಮತ್ತು ಕುಂಭದವರು ಸರಿಯಾಗಿ ೮ .೩೦ ಗಂಟೆಗೇ, ಅಂದರೆ ಒಂದರ್ಧ ಗಂಟೆ ಮುಂಚೇನೇ ಆಫೀಸಿನ ಒಳಗೆ ಹಾಜೀರಾಗಿದ್ದು, ಸಂಜೆ ೬.೩೦ ಗಂಟೆಗೆ ಮನೆಗೆ ವಾಪಾಸಾತಿ ಬರುತ್ತಾರೆ. ಅಷ್ಟೊಂದು ಶಿಸ್ತು ಇವರಲ್ಲಿ. ಆದರೆ ಇಲ್ಲಿ ಸೂರ್ಯನೂ ಬರುವುದರಿಂದ , ಸೂರ್ಯನೂ ಶನಿಯ ವೈರಿ ಆದ ಕಾರಣ, ಇವರುಗಳಿಗೆ ಶಿಸ್ತಿನಿಂದ ನಡೆಯಲು ಬಿಡುವುದಿಲ್ಲ. ಇವರದ್ದು ಒಂದು ರೀತಿಯ ಅಶಿಸ್ತಿನ ಜೀವನವಾಗಿರುತ್ತೆ. ನನ್ನನ್ನ ಕೇಳಿದರೆ, ಇವರನ್ನ ಹುಚ್ಚರೆಂದೇ ಹೇಳುತ್ತೇನೆ. ಇದಕ್ಕೆ ಚಂದ್ರ ಮತ್ತು ರಾಹುವಿನ ಯುಕ್ತಿಯೂ ಬೇಕೆಂತಿಲ್ಲಾ ಅನ್ನಿ. ಅದೇ ಚಂದ್ರ ಮತ್ತು ರಾಹು ಈ ಮಕರ ರಾಶಿ ಅಥವಾ ಕುಂಭ ರಾಶಿಯಲ್ಲೇನಾದರೂ ಇದ್ದಲ್ಲಿ, ಇವರಲ್ಲಿ ಎಮೋಷನಲ್ ಇಂಡೆಕ್ಸ್ ಜಾಸ್ತಿ ಏರು ಪೇರಾಗಿರುತ್ತೆ. ಆವಾಗ ಇವರನ್ನ ಡಿಪ್ರೆಷನ್ ಪೇಷಂಟ್ ಅಂತ ಕರೆಯಬಹುದು. ಇವರುಗಳು ಆತ್ಮಹತ್ಯವನ್ನ ಕೂಡಾ ಮಾಡಿಯಾರು ಜೋಕೆ. ನಾನೇಕೆ ಇಷ್ಟು ಖಡಾ ಖಂಡಿತವಾಗಿ ಹೇಳುತ್ತೇನೆಂದರೆ, ನಾನು ಇಂತಹ ಸುಮಾರು ಕೇಸುಗಳನ್ನ ನೋಡಿರುತ್ತೇನೆ.

39.   I want to share, here, one example of a close friend in my own bank in the top most post. Even in his horoscope also this Moon and Rahu combination is found in Capricorn Rashi! It is surprised to me that though he was my best friend, everyone in Bank used to call him as “Pagal” He himself came one day and told me that if he was my boss, he would have issued charge sheet! To my utter surprise, after one year, he came in the same seat in front of my chair with a copy of dismissal order with pale face! Why I am telling this is you should be very careful to move with those persons in the society. They never think that you are close friend of them. Sometimes they may say that whether I should continue friendship with you or not? You do not know when your respect will go! So, my best advice to you is that keep one hand distance with them! If such combinations are found in ladies horoscope, there may be tendencies of committing suicide also! They do not have control over their emotions! They can do any harm at any time! Please be careful while having friendship with those people or to marry such persons as life partners also!

40.   ನಮ್ಮ ಬೇಂಕಿನಲ್ಲಿಯೇ ಒಬ್ಬ ಡೆಪ್ಯೂಟೀ ಜನರಲ್ ಮೆನೇಜರವರೆಗೆ ಹೋಗಿ, ನಾನು ಪ್ರಾಂಷುಪಾಲನಾಗಿದ್ದಾವಾಗ, ನನಗೇ ಚಾರ್ಜ್ಸೀಟ್ ಕೊಡುತ್ತೇನೆ ಎಂದವನು, ಒಂದು  ವರ್ಷದ ಮೇಲೆ ಅದೇ ನನ್ನ ವಿರುಧ್ಧದ ಆಸನದಲ್ಲಿ ಕುಳಿತು ನನ್ನನ್ನ ಇವತ್ತು ಡಿಸ್ಮಿಸ್ ಮಾಡಿದರು ಕಣೋ ಅಂತ ಬಿಕ್ಕಿ ಬಿಕ್ಕಿ ಅತ್ತವ! ಆತನದ್ದೂ ಸಹ ಮಕರದಲ್ಲಿಯೇ ಚಂದ್ರ ಮತ್ತು ರಾಹುವಿನ ಯುಕ್ತಿ ಹಾಗೂ ಉತ್ತರಾಷಾಢ ನಕ್ಷತ್ರ!  ಈ ಈತಿ ನಾವುಗಳು ಪುಟಗಟ್ಟಲೆ ಬರೆಯಬಹುದು. ಒಂದಂತೂ ಸತ್ಯ. ನಕ್ಷತ್ರವೊಂದೇ, ಆದರೆ ಫಲಗಳು , ಗುಣಗಳು ಬೇರೆ ಬೇರೆ! ಅದನ್ನ ನಿಮಗೆ ಗುರುತಿಲು ಬರಬೇಕಷ್ಟೆ. ಇದೂ ಒಂದು  ಜ್ನಾನವಷ್ಟೆ!



By Dr. P Surendra Upadhya
M.Sc.; Ceritficate course in Jyotishya, Diploma in Jyotishya,
Ph.D (Jyotishya).

21/07/2017

Comments