Chitta Nakshatra ಚಿತ್ತಾ ನಕ್ಷತ್ರ
Chitta Nakshatra
ಚಿತ್ತಾ ನಕ್ಷತ್ರ
1. 1.
Chitra (The
brilliant) (23°20′ Virgo to 6°40′ Libra) Chitra is represented by a single star
known as Spica in the constellation of Virgo.
2. ಚಿತ್ರ, ಬ್ರಿಲ್ಲಿಯಂಟ್ ನಕ್ಷತ್ರ, ೨೩.೨೦ ಡಿಗ್ರಿ ಕನ್ಯಾದಿಂದ ೬.೪೦ ಡಿಗ್ರಿ
ತುಲಾದಲ್ಲಿಬರುತ್ತೆ. ಚಿತ್ರಾ ನಕ್ಷತ್ರವು ಸ್ಪೈಕಾ ಅನ್ನುವ ಸಿಂಗಲ್ ನಕ್ಷತ್ರದಿಂದ
ಗುರುತಿಸಲ್ಪಟ್ಟಿದೆ.
3.
Its ruling
deity :- Vishvakarma
is the celestial architect, who bestow the ability to
create new things out of nothing.
4. ಅದರ ದೇವತೆ ವಿಶ್ವಕರ್ಮ. ವಿಶ್ವಕರ್ಮನು ಇಡೀ ಭೂಮಂಡಲದ ಆಚಾರಿ.
5.
It is one
of the brightest stars in the sky. Known to the Vedic astrologers as the
nakshatra of prosperity, Chitra stands for the ‘big, bright, shining jewel’.
6. ಈ ಚಿತ್ತಾ ನಕ್ಷತ್ರವು ಆಕಾಶದಲ್ಲಿ ಫಳ, ಫಳ ಹೊಳೆಯುವ ನಕ್ಷತ್ರ. ಇದು ನಮ್ಮ
ಜ್ಯೋತಿಷ್ಯಗಾರರಿಗೆ, ಅಭಿವೃಧ್ಧಿಯ ನಕ್ಷತ್ರವಾಗಿರುತ್ತದೆ. ಇದೊಂದು ದೊಡ್ಡ, ಪ್ರಖರವಾದ, ಹೊಳೆಯುವ
ರತ್ನಾ ಎಂದರೂ ತಪ್ಪಿಲ್ಲ.
7.
The name
Chitra translates as "brilliant." In the astrology chart.
8. ಜ್ಯೋತಿಷ್ಯದಲ್ಲಿ ಚಿತ್ತ ನಕ್ಷತ್ರದವರು ಬ್ರಿಲ್ಲಿಯಂಟ್ಸಿಗೆ ಹೋಲಿಸುತ್ತಾರೆ. ಹಾಗೆಯೇ
ಇವರುಗಳು ಬಹಳ ಬಿಲ್ಲಿಯಂಟ್ಸಾಗಿಯೇ ಇದ್ದಾರೆನ್ನಿ
9.
The primary
objective of Chitra is to surmount illusion and maya.
10.
ಈ ಚಿತ್ತಾ ನಕ್ಷತ್ರದವರು ಇಲ್ಲ್ಯೂಷನ್ ಮತ್ತು ಮಾಯೆಯಗಳಿಗಿಂತ ಮೇಲಿನ ನಕ್ಷತ್ರವಾಗಿರುತ್ತೆ.
11.
Under the
Virgo influence, Chitra tries to seek answers for illusions.
12. ಈ ಕನ್ಯಾ- ಚಿತ್ತ ನಕ್ಶತ್ರದವರು ಇದನ್ನ
ಹೋಗಲಾಡಿಸುತ್ತಾರೆ.
13. While Chitra in the Libra zodiac relates to do with
relationship and seeking admiration.
14. ಅದೇ ತುಲಾ -ಚಿತ್ತ ನಕ್ಷತ್ರದವರು ಸಂಬಂಧಗಳ
ಬಗ್ಗೆ ಹಾಗೂ ಅದರ ಮೆಚ್ಚುಗೆಗೆ ಇರುತ್ತಾರೆ.
15. Chitra loves to
understand the mechanism of things and hence it is related to the scientific,
technological and creative fields.
16. ಚಿತ್ತಾ ನಕ್ಷತ್ರದವರ ಹತ್ತಿರ
ವಿಜ್ನಾನಕ್ಕೆ ಸಂಬಂಧಿಸಿದಂತಹ ತಿಳುವಳಿಕೆಗಳು ಹೆಚ್ಚು ಇರುತ್ತದೆ. ಇವರಲ್ಲಿ ಕ್ರಿಯೇಟಿವಿಟಿ
ಶಕ್ತಿಯೂ ಹೆಚ್ಚಿರುತ್ತದೆ. ಇವರುಗಳು ಕಷ್ಟದ ಮೆಕೇನಿಸಮನ್ನ ಬಹಳ ಬೇಗ ತಿಳಿದುಕೊಳ್ಳುತ್ತಾರೆ.
17. On a higher plane, Virgo in Chitra creates the gadget,
while Libra gives polish to the finished object, by understanding the universal
mechanism and coating it with the illusive mantle.
18. ಇನ್ನೂ ಹೆಚ್ಚಿಗೆ ಹೇಳಬೇಕೆಂದರೆ, ಕನ್ಯಾ-
ಚಿತ್ತಾದವರು ಒಂದು ಮೇಕೇನಿಕ್ ಗಾಜೆಟನ್ನ ತೈಯ್ಯಾರು ಮಾಡಿದರೆ, ಅದಕ್ಕೆ ತುಲಾ ಚಿತ್ತ್ರದವರು ಪೋಲಿಷನ್ನ
ಕೊಟ್ಟು ಅದಕ್ಕೆ ಪೂರಾ ಶೇಪನ್ನ ಕೊಟ್ಟು ಮುಗಿಸುತ್ತಾರೆ. ಈ ತುಲಾ ಚಿತ್ತಾದವರಿಗೆ ಪ್ರಪಂಚದ
ಜ್ನಾನ ಬಹಳ ಹೆಚ್ಚಿದೆ. ಇವರದ್ದೇ ಮನಸ್ಸಿನಲ್ಲಿ ಸ್ಕೆಚ್ ಹಾಕಿಕೊಂಡಿರುವ ತರ ಅದಕ್ಕೆ ಕೋಟಿಂಗ್
ಕೊಟ್ಟು ಮುಗಿಸುತ್ತಾರೆ. ಅಂದರೆ ಈ ಚಿತ್ತಾ ನಕ್ಷತ್ರದವರ ತಲೆ, ನಮ್ಮೂರ ಅಣ್ಣಪ್ಪ ಕಾರಂತರ ತಲೆ
ಅಂದರೇನು ತಪ್ಪಿಲ್ಲ ಅನ್ನಿ! ನನ್ನ ಮೊಮ್ಮಗ ಸಿದ್ಧಾಂತ ರಾವ್, ನಯೀ ದೆಹಲಿ ಈ ನಕ್ಷತ್ರದಲ್ಲಿಯೇ ಇರುವನು. ಆತನು ಈಗ ೮ ವರ್ಷದವ. ಆದರೆ,
ಆತನೂ ಅಷ್ಟೆ ಏನೇನೋ ಯೋಚಿಸಿ ಒಂದು ವಸ್ತುವನ್ನ ತೈಯ್ಯಾರಿಸಿ ಬಿಡುತ್ತಾನೆ. ಬಹಳ ತಲೆ ಆತನದ್ದು!
19. While Virgo is concerned with detail, Libra has more
to do with relationship and seeking admiration.
20. ಕನ್ಯಾ ರಾಶಿಯವರಿಗೆ ಒಂದು ವಿಚಾರದ
ಬಗ್ಗೆ ಅಥವಾ ಒಂದು ವಸ್ತುವಿನ ಬಗ್ಗೆ ಹೆಚ್ಚಿನ ವಿವರಗಳು ಬೇಕಾಗಿರುತ್ತೆ. ಅದೇ ತುಲಾದವರು ಅದರ
ಬಗ್ಗೆ ಸಂಬಂಧವನ್ನ ಕಲ್ಪಿಸುವುದು ಹೇಗೆ, ಅದನ್ನ ಎಲ್ಲರೆದುರೂ ಮೆಚ್ಚಿಸುವುದು ಹೇಗೆ? ಅವರ
ಮೆಚ್ಚಿಗೆಗೆ ಹೇಗೆ ತಾನು ಪಾತ್ರನಾಗುವ ಬಗ್ಗೆಯೇ ಯೋಚನೆಯನ್ನ ಮಾಡುತ್ತಿರುತ್ತಾರೆ.
21. Chitra bridges the signs of Virgo and Libra. ಈ ಚಿತ್ತಾ ನಕ್ಷತ್ರದವರು ಕನ್ಯಾ ಮತ್ತು
ತುಲಾಕ್ಕೆ ಒಂದು ಸೇತುವೆಯನ್ನ ಕಟ್ಟಿ ಅವುಗಳನ್ನ ಹತ್ತಿರ ಮಾಡುವಲ್ಲಿ ನಿಸ್ಸೀಮರು!
22. Those born under this nakshatra are fascinated by
beauty, art, and structure. ಯಾರು ಈ ನಕ್ಷತ್ರದಲ್ಲಿ ಜನಿಸಿರುತ್ತಾರೋ, ಅವರುಗಳ ಹತ್ತಿರ ಸುಂದರತೆ, ಕ್ಲಾತ್ಮಕ ಶಕ್ತಿ, ಹಾಗೂ ಅದರ ಆಕಾರದ ಬಗ್ಗೆ ಹೆಚ್ಚು
ಫ಼ಾಸ್ಸಿನೇಟ ಆಗಿ ಯೋಚನೆಯನ್ನ ಮಾಡುತ್ತಿರುತ್ತಾರೆ.
23. Chitra gives the ability to attract the opposite sex,
especially the padas within Libra. ಈ ತುಲಾ ಚಿತ್ತಾದವರು ತಮ್ಮ ವಿರುಧ್ಧದ ಸೆಕ್ಸನ್ನ ತನ್ನ ಕಡೆಗೆ
ಓಲೈಸುವುದು ಹೇಗೇ ಅಂತಲೇ ಇರುತ್ತಾರೆನ್ನಿ!
24. People born under Chitra attempt to appear orderly on
the surface, yet underneath they may be frustrated. ಈ ಚಿತ್ತಾ ನಕ್ಷತ್ರದವರು ತಾವೇನೋ ಕ್ರಮ
ಪ್ರಕಾರ ಇದ್ದಾರೆಂದು ತೋರ್ಪಡಿಕೆಗೆ ತೋರಿಸಿದರೂ, ಒಳೊಗೊಳಗೇ ಅವರೊಬ್ಬರು ನಿರಾಶೆಯ ಮುದ್ದೇ
ಅಂತಲೇ ಒಪ್ಪಬೇಕಾಗುತ್ತೆ!
25. General Characteristics: Intelligent, skillful,
creative, learned, social, attractive, natural leaders. ಸಾಮಾನ್ಯಯವಾಗಿ ಈ ಚಿತ್ತಾ
ನಕ್ಷತ್ರದವರು ಬಹಳ ಬುಧ್ಧಿವಂತರಿರುತ್ತಾರೆ. ಅವರೊಬ್ಬರು ಬಹಳ ನುರಿತ ಜನರಿರುತ್ತಾರೆ.ಅವರಲ್ಲಿ
ಕ್ರಿಯಾತ್ಮಕ ಬುಧ್ಧಿ ಜಾಸ್ತಿ ಇರುತ್ತೆ! ಬಹಳ ಸ್ಕೋಲರ್ ಆಗಿರುತ್ತಾರೆ! ಸಾಮಾಜಿಕವಾಗಿಯೂ ಬಹಳ
ಸೋಸಿಯಲ್ ಅಂತ ಅನ್ನಿಸಿಕೊಳ್ಳುತ್ತಾರೆ. ಇವರೊಬ್ಬರು ಸ್ವಾಭಾವಿಕವಾಗಿ ಒಬ್ಬ ಮುಖ್ಯಾ ಅಂತ
ಹೇಳಬಹುದು.
26. Translation: "Brilliant", "Bright" ಈ ಚಿತ್ತಾ ನಕ್ಷತ್ರದವರೇ ಬಹಳ
ಬ್ರಿಲ್ಲಿಯಂಟ್ಸ್ ಮತ್ತು ಬಹಳ ಬ್ರೈಟ್ ಆಗಿರುತ್ತಾರೆ.
27. Symbol: A bright jewel or A shining light. ಇವರ ಸಿಂಬಲ್ಲೇ ಹೊಳೆಯುವಂತಹ ರತ್ನ ಅಥವಾ
ಹೊಳೆಯುವಂತಹ ಬೆಳಕು!
28. Animal Symbol: Female Tiger. ಇವರ ಪ್ರಾಣಿ ಗುರುತು, ಹೆಣ್ಣು ಹುಲಿ!
29. Controlling Planet: Mars. ಈ ನಕ್ಷತ್ರದ ಹತೋಟಿಯನ್ನ ತರುವಂತಹ ಗ್ರಹ
ಕುಜನು. ಈ ಕುಜನು ಅವರನ್ನ ಒಂದು ಶಿಸ್ತಿನ ಸರ್ದಾರನನ್ನಾಗಿ ಮಾಡಿಸುವನು. ಈತ ಮುಖದ ಮೇಲೆ ಹೇಳುವ
ಕಲೆಯನ್ನ ಪಡೆದಿರುತ್ತಾನೆ/ಳೆ. ಇವರಲ್ಲಿ ಯಾವುದೇ ಹೇರಾ ಫ಼ೇರಿ ಮನೋಭಾವನೆಗಳು ಇರೋದಿಲ್ಲ. ಬರೋದೂ
ಇಲ್ಲ. ಆದರೆ ಬಹಳ ಮುಂಗೋಪಿಷ್ಟ! ಕೋಪವೆಲ್ಲಿಯಾದರೂ ಬಂದಿತೆಂದರೆ, ಆತ ಕೊಡ್ರಿಯಂತೆ
ನಿಗರಿಬಿಡುತ್ತಾನೆ.
30. Ruling Deity of Mars: Muruga. ಅದೇ ಕುಜನನ್ನ ಆಳುವ ದೇವತೆ, ಮೃಗ.
31. Nature: Rakshasa Gana (Demon). ಇವರ ಗಣ ರಾಕ್ಷಸ
32. Mode: Active, ಇವರ ರೀತಿ ಬಹಳ ಏಕ್ಟೀವ್
33. Number: 14, ಇವರ ಸಂಖೆ ೧೪.
34. Gender: Female ಇವರ ಜಂಡರ್ ಹೆಣ್ಣು. ಅಂದರೆ ಚಿತ್ತಾ ನಕ್ಷತ್ರದವರು ಸ್ವಲ್ಪ
ಮಟ್ಟಿಗೆ ಹೆಣ್ಣಿನಂತೆಯೂ ವರ್ತಿಸುತ್ತಾರೆ!. ರಾಶಿ ಬೇರೆ ಕನ್ಯಾ, ಎರಡು ಹೆಣ್ಣಿನ ರಾಶಿ!
ರಾಶ್ಯಾಧಿಪತಿ ನಪುಂಸಕ ಗ್ರಹ ಬುಧ ಬೇರೆ!
35. Dosha: Pitta. ಇವರು ಪಿಥ್ತ ದೋಷದವರು. ಇವರಿಗೆ ಪಿಥ್ಥ ಸಂಬಂಧಿತ
ತೊಂದರೆಗಳು ಗ್ಯಾರಂಟಿ!
36. Guna: Tamasic. ಇವರ ಗುಣ ಸಿಟ್ಟು
37. Element: Fire ಇವರ ಎಲಿಮೆಂಟ್ಸ್ ಬೆಂಕಿ.
38. Seed Sounds: Pe, Po, Ra, Re. ಪೆ, ಪೊ, ರಾ ಮತ್ತು ರೆ ಇವರ
ಪ್ರಥಮಾಕ್ಷರಗಳು.
39. Also related to Planets: Mercury, as the ruler of
Gemini; Venus, as the ruler of Libra, ಬುಧ ಮತ್ತು ಶುಕ್ರರು ಈ ನಕ್ಷತ್ರದ ಅಧಿಪತಿ.
40. Uttara -3, Hasta-4 and Chitta-2 comes to Virgo sign
and rest of 2 Padas will go to Libra Rashi. Means, Chitta Nakshatra is ruled by
both Mercury as well as Venus.ಉತ್ತರ-೩ ಪಾದಗಳು ಹಸ್ತಾ ನಕ್ಷತ್ರ-೪ ಪಾದಗಳು, ಮತ್ತು ಚಿತ್ತಾ
ನಕ್ಷತ್ರದ ೨ ಪಾದಗಳು ಕನ್ಯಾಕ್ಕೆ ಬಂದರೆ, ಉಳಿದ ಚಿತ್ತಾ ನಕ್ಷತ್ರದ ೨ ಪಾದಗಳು ತುಲಾಕ್ಕೆ
ಹೋಗುತ್ತದೆ.
41. Venus has more Jal and Mercury is Vayu Tatwa planet.
Libra is balanced one and Virgo is Business minded. Of course, small business.
All Chikpet and Avenue Road persons are in majority Virgo Rashi / Lagna people.
ಶುಕ್ರನ ಹತ್ತಿರ ಜಲಾಂಶ ಹೆಚ್ಚು ಇದ್ದರೆ, ಬುಧನಲ್ಲಿ
ವಾಯು ತತ್ವ ಜಾಸ್ತಿ. ತುಲಾ ರಾಶಿಯವರು ಸ್ವಲ್ಪ ಸಮತೋಲನವನ್ನ(ಬೇಲೆನ್ಸನ್ನ)
ಮೈನ್ಟೈನ್ ಮಾಡುತ್ತಾರೆ. ಅದೇ ಕನ್ಯಾ ರಾಶಿಯವರು ಸಣ್ಣ ತರಹದ ವ್ಯಾಪಾರಿಗಳು. ನಮ್ಮ
ಬೆಂಗಳೂರಿನಲ್ಲಿ, ಅವೆನ್ಯೂ ರಸ್ಥೆ, ಚಿಕ್ಪೇಟ್, ಬಳೇ ಪೇಟಿನಲ್ಲಿ ಸಿಗುವಂತಹ ಜನರೆಲ್ಲಾ ಈ ಕನ್ಯಾ
ರಾಶಿ ಅಥವಾ ಕನ್ಯಾ ಲಗ್ನದವರೇ ಇರಬೇಕೆನ್ನಿ.
42. Since Venus is also comes into the picture, they are
very materialistic. They give more attention for the look and design type of
things, particularly in decorating house and other things as Venus is for
fashion. ಈ ಕುಜ ತತ್ವ ಇರುವವರು ಮುಂಗೋಪಿಗಳು ಮತ್ತು ಮುಖದ ಮೇಲೆ ಹೊಡೆದು ಮಾತನಾಡುವ ಶಿಸ್ತಿನ
ಸರದಾರರಿದ್ದಲ್ಲಿ, ಶುಕ್ರನ ತತ್ವ ಎಲ್ಲಿ ಇದೆಯೋ, ಅಲ್ಲಿ ಮೋಜ್, ಮಸ್ತಿ ಹಾಗೂ ಏಷ್
ಮಾಡುವಂತಹದ್ದು ಇರುತ್ತೆ. ಎಲ್ಲಿ ಶುಕ್ರನೋ ಅಲ್ಲಿ ಕಾಮನೆಗಳು ಜಾಸ್ತಿ!
43. Since Mercury is also involved in it, they are very
intelligent, interpreter, language translators, business minded, talkative and
even after Revati star, we can call Chitta star persons are very chatter box
type! ಈ
ಚಿತ್ತಾ ನಕ್ಷತ್ರದವರಲ್ಲಿ ಒಂದು ತರಹದ ಬ್ಲೆಂಡ್ ಜಾಸ್ತಿ. ಅದೇನೂ ಅಂತ ಕೇಳುವಿರಾ? ಈ
ನಕ್ಷತ್ರದವರು ಚಂದ್ರ, ಬುಧ ಹಾಗೂ ಶುಕ್ರನ ಮತ್ತು ಕುಜನ ಅಧಿಕಾರದಡಿಯಲ್ಲಿ ಬರುವರು. ಶುಕ್ರ ,ಚಂದ್ರ
ಮತ್ತು ಕುಜನೆಲ್ಲಿ ಇದೆಯೋ, ಅಲ್ಲಿ ಅವರಿಗೆ ಗೌರವವನ್ನ ಬೇಡಬೇಕಾದ ಪ್ರಸಂಗ ಒದಗಿಬರುತ್ತೆ. ಅದೇ
ಶುಕ್ರ, ರವಿ ಮತ್ತು ಚಂದ್ರರೆಲ್ಲಿದ್ದಾರೋ, ಅಲ್ಲಿ ಅವರಿಗೆ ಪವರ್ ಡೀಗ್ನಿಟಿ ಇಂಡೆಕ್ಸ್
ಇರುತ್ತದೆ, ಅಂದರೆ ಅವರಿಗೆ ಗೌರವವು ತನ್ನಿಂದ ತಾನೇ ಬರುತ್ತದೆ. ಆದ್ದರಿಂದಲೇ ಇವರೊಬ್ಬರು ಗಿಳಿ
ಇದ್ದ ಹಾಗೆ. ಇವರು ಅತೀ ಬುಧ್ಧಿವಂತರು. ಇವರೊಬ್ಬರು ಉತ್ತಮ ಜ್ಯೋತಿಷಿಗಳೂ ಕೂಡ. ಇವರೊಬ್ಬರು
ಅನ್ವೇಷಣೆಯನ್ನ ಮಾಡುವಂತಹ ವಿಜ್ನಾನಿಗಳು. ಇವರೊಬ್ಬರು ಇಂಜಿನೀರ್ಸ್. ರೋಹಿಣಿ, ರೇವತೀ ಅವರನ್ನ
ಬಿಟ್ಟಲ್ಲಿ, ಈ ಚಿತ್ತಾ ನಕ್ಷತ್ರದವರು ಮಾತಿನಲ್ಲಿ ಮಲ್ಲಕ್ಕ ಅಥವಾ ಮಲ್ಲಣ್ಣರು ನಿಮಗೆ
ಸಿಗುತ್ತಾರೆ. ಕಾರಣ ಬುಧ ಈ ರಾಶಿಯಲ್ಲಿ ಉಛ್ಚ!
44. Since Mercury is exalted, they have tremendous
potentiality and hence they are workaholic also!ಬುಧನು ಉಛ್ಚನಾದ ಕಾರಣ, ಇವರಲ್ಲಿ ಕೆಲಸವನ್ನ
ಮಾಡುವಂತಹ ಗುಣಗಳು ಅತೀ ವಿಶೇಷವಾಗಿರುತ್ತೆ.
45. Since chitta-1 Pada comes in Leo Rashi, Chitta -2 Pada
comes to Virgo, Chitta-3 Pada comes to Libra and Chitta-4 comes to Scorpio, all
the four Padas born people have different nature! ಚಿತ್ತ -೧ ನೇ ಪಾದವರಿಗೆ ಮೇಜೆಸ್ಟಿ
ಇರುತ್ತೆ, ಅಹಂಕಾರ ಇರುತ್ತೇ ಅನ್ನುವ ಬದಲು ದರ್ಪವಿರುತ್ತೇ ಅನ್ನುವುದು ವಾಸಿ, ಕಾರಣ, ಸಿಂಹ
ರಾಶಿಯ ಅಧಿಪತಿ ಸೂರ್ಯ. ಈ ಸಿಂಹ ರಾಶಿಯ ಚಿತ್ತಾ ನಕ್ಷತ್ರದವರ ಆಹಾರವೂ ಹಾಗೆಯೇ. ಅತೀ ಉತ್ತಮ
ದರ್ಜೆಯ ರಾಜ ಆಹಾರವೇ ಬೇಕು. ಇವರೂ ಕೂಡ ಸಿಂಹನಂತೆ. ಸಿಕ್ಕಿದರೆ ತಿಂದಾರು, ಸಿಗಲಿಲ್ಲ, ಉಪವಾಸ
ಬಿದ್ದಾರು! ಆದರೆ ಸೆಲೆಕ್ಟೆಡ್ ಹೋಟೇಲಿನಲ್ಲಿ ಸೆಲೆಕ್ಟೆಡ್ ಆಹಾರವೇ ಬೇಕು. ಹಣಕ್ಕೇನೂ ಯೋಚಿಸುವ
ಪ್ರಾಣಿ, ಕ್ಷಮಿಸಿ ಸಿಂಹ ಇವರಲ್ಲ! ಉತ್ತಮ ದರ್ಜೆಯ ಫಷ್ಟ್ ಕ್ಲಾಸ್ ವ್ಯಕ್ತಿಗಳು! ಚಿತ್ತ-೧ನೇ
ಪಾದವರಿಗೆ ರವಿ, ಕುಜ ಹಾಗೂ ಚಂದ್ರರು ಕೆಲಸವನ್ನ ಮಾಡುವರು. ಅಂದರೆ ಇವರೊಬ್ಬರು ದರ್ಪದ ಗೋಲ್
ಅಂದರೂ ತಪ್ಪಿಲ್ಲ. ಇವರುಗಳಿಗೆ ಸರ್ಕಾರಿ ಹುದ್ದೆ ಸಿಕ್ಕಿದಲ್ಲಿ ಬಹಳ ಒಳ್ಳೆಯದು. ಕಾರಣ ಅವರ
ದರ್ಪಕ್ಕೆ ಒಂದು ಶೇಪ್ ಸಿಗುತ್ತೆ ಅಲ್ಲಿ. ರವಿಯೂ ಕೂಡ ಸರಕಾರೀ ಹುದ್ದೆಗಾಗಿಯೇ ಕಾರಕ ಗ್ರಹ.
ಆದ್ದರಿಂದ ಇವರೊಬ್ಬರು ಐ.ಏ.ಎಸ್ ಹುದ್ದೆಯನ್ನೂ ಅಲಂಕರಿಸಲು ಸಾಧ್ಯ ಉಂಟು.
46. I will quote here Chitta-4 people are ruled initially
by Mars, also Venus and then comes to Moon! Mostly Chitta-4 people are egoistic
or arrogant. Since Venus and Moon are
there, they go well with Rohini ruled Nakshatra people. In fact other people
should think there is something is going on between Chitta-4 and Rohini -2
people! It is because, chitta-4 is in Scorpio which is again ruled by Mars and
Rohini-2 is ruled by Venus and also Moon and Moon is exalted in Taurus. Both
Venus and Mercury are love planets, and hence people even if they think there
is something between them they are not wrong as per my predictions! ಈ ಚಿತ್ತಾ -೪ನೇ ಪಾದದವರನ್ನ, ಮೊದಲಿಗೆ
ಕುಜನು ಆಳುವನು. ನಂತರ ಶುಕ್ರನಾಳುವನು. ಆಮೇಲೆ ಚಂದ್ರನು ಆಳಲಿಕ್ಕಿರುವನು. ಎಲ್ಲಿ ಶುಕ್ರ ಮತ್ತು
ಚಂದ್ರರು ಸೇರಿದರೋ, ಅಲ್ಲಿ ಆಹಾರದಲ್ಲಿ ವೆರೈಟಿ ಇರಬೇಕು, ಅಲಂಕಾರವಿರಬೇಕು ಹಾಗೂ ಅದಕ್ಕೆ ಒಂದು
ಸುಂದರ ಲುಕ್ ಇರಬೇಕೆನ್ನಿ. ಕುಜನ ಗತ್ತು, ಶುಕ್ರನ ಥಳುಕು ಹಾಗೂ ಚಂದ್ರನ ಚುರುಕುತನ ಎಲ್ಲಾ ಈ
ನಕ್ಷತ್ರದ ಪಾದದಲ್ಲಿ ನೀವು ನೋಡಬಹುದು. ನೀವೆಲ್ಲಿಯಾದರೂ ಚಿತ್ತ-೪ ಹಾಗೂ ರೋಹಿಣಿ-೨ ನೇ
ಪಾದದವರನ್ನ ನೋಡಿದಲ್ಲಿ, ಇವರ ಮಧ್ಯೆ ಏನೋ ಗುಟ್ಟಿನ ವ್ಯವಹಾರಗಳು ನಡೆಯುತ್ತಿವೆಯೋ ಏನೊ ಅಂತ
ಅನ್ನಿಸುತ್ತೆ! ಕಾರಣ ಚಿತ್ತಾ-೪ ಪಾದದವರನ್ನ ಆಳುವಂತಹ ಗ್ರಹ ಕುಜ. ಅದಕ್ಕೇ ಇವರು ಗೋಧೀ
ಬಣ್ಣದವರಾಗಿದ್ದು, ಮುಖದ ಮೇಲೆ ಪಟ್ ಅಂತ ಹೇಳುವ, ಅತೀ ಕಡು ಶಿಸ್ತಿನ ಸರದಾರರು ಅಥವಾ ಸರದಾರಳು
ಆಗಿರುತ್ತಾರೆ. ಅದೇ ರೋಹಿಣಿ-೨ ರವರನ್ನ ಆಳುವ ಗ್ರಹನೂ ಶುಕ್ರ ನಾಗಿದ್ದು, ಇವರು ನೋಡಲು ಬಹಳ
ಸುಂದರ ವ್ಯಕ್ತಿಗಳಾಗಿದ್ದು, ಚಂದ್ರನು ಇಲ್ಲಿ ಉಛ್ಚನಾದ ಕಾರಣ ಇವರಲ್ಲಿ ಒಂದು ರೀತಿಯ
ಎಟ್ರೇಕ್ಷನ್ ಜಾಸ್ತಿ ಇರುತ್ತೆ. ಇವರೂ ಕೂಡ ಬಹಳ ಅಂದರೆ ವಿಪರೀತ ಮಾತನಾಡುವವರ ಜಾತಿಗೆ ಸೇರಿರುತ್ತಾರೆ.
ಇವರಿಗೆ ಗೊತ್ತಿಲ್ಲದ ಕಲೆಗಳಿಲ್ಲ. ಶುಕ್ರನ ೬೪ ಕಲೆಗಳು ಮತ್ತು ರೋಹಿಣಿ ಅಂದರೆ ಕೃಷ್ಣನ ೧೬
ವಿದ್ಯಗಳ ಸರದಾರರು ಇವರು. ಮತ್ತೆ, ಕುಜ ಹಾಗೂ ಶುಕ್ರ ಎಲ್ಲಿ ಸೇರಿದರೋ ಅಲ್ಲಿ ಗಂಜಿ ಬೇಯಲು
ಶುರು! ನೋಡಿ ಇವರಲ್ಲಿ ಏನೋ ಒಂದು ರೀತಿಯ ಸಮ್ಮೋಹನ ಶಕ್ತಿ ಇರುವ ಕಾರಣ, ಇಬ್ಬರೂ ತಮಗೆ
ತಿಳಿಯದೇನೇ ಒಟ್ಟಾಗಿ ಗುಸು ಗುಸು ಚರ್ಚೆ ಅಥವಾ ಮಾತನಾಡುತ್ತಿರುತ್ತಾರೆ. ಈವಾಗಿನ ಡೀಜಿಟಲ್
ಮೀಡಿಯಾದಲ್ಲಿ ವಾಟ್ಸೇಪಿನಲ್ಲಿ ಕಡಿಮೆ ಅಂದರೆ ಒಂದರ್ಧ ಗಂಟೆ ಛಾಟ್ ಮಾಡದೇ ಹೋದಲ್ಲಿ, ನಾನು ಈ
ಬರೆವಣಿಕೆಯನ್ನೇ ನಿಲ್ಲಿಸುತ್ತೇನೆ. ಇದು ಗ್ರಹಗಳ ಆಟವಯ್ಯಾ, ಹಾಗೂ ಮನುಷ್ಯಾ ಎಂಬ ಗೊಂಬೆಯ
ಆಟವಿದು ಅಯ್ಯಾ! ಸುಮ್ಮ ಸುಮ್ಮನೆ ನನಗೆ ಇಲ್ಲಿ ಹೇಳಲು ನನಗೆ ಮರುಳೇ? ಒಂದು ವೇಳೆ ಹೆಣ್ಣಿಗೆಲ್ಲಿಯಾದರೂ
ಮದುವೆ ಆಗಿ ಮಕ್ಕಳಾಗಿ ಒಂದೈವತ್ತು ವರುಷಗಳೇ ಆಯಿತೆನ್ನಿ, ಗಂಡಿಗೂ ಒಂದು ೫೮ ಆಯಿತೆನ್ನಿ, ಆದರೂ
ಸಹ ಇವರ ಮಧ್ಯೆ ಎಕ್ಷ್ಟ್ರಾ ಸಂಬಂಧಗಳು ನಡೆಯುತ್ತಿರುತ್ತವೆ! ಏನು ಇಷ್ಟು ಪರ್ಫೆಕ್ಟ್ ಆಗಿ ಹೇಗೆ
ನೀವು ಹೇಳುತ್ತೀರಾ? ಅಂತ ಕೇಳಬೇಡಿ. ಶುಕ್ರ ಮತ್ತು ಕುಜರೇ ಹಾಗೆ.
47. In fact Rohini is also one type of Chatter box only
and Chitta is also another type chatter box and hence they match with each
other! Suppose Rohini -2 pada is a boy and chitta-4 is a girl, then it is good
match except for the ego of Chitta-4, but Rohini-2 will handle the scene very
carefully and beautifully also! ಇಲ್ಲಿ ನೀವೊಂದು ವಿಚಾರವನ್ನ ತಿಳಿಯ ಬೇಕು. ರೋಹಿಣಿ-೨ ಮತ್ತು
ಚಿತ್ತ-೪ ರವರೆಲ್ಲಿಯಾದರೂ ಸಿಕ್ಕಿದರೆ, ಅವರಿಗೆ ಖಂಡಿತ ಮದುವೆಯನ್ನ ಮಾಡಿಸಿ. ಬಹಳ ಚೆನ್ನಾಗಿ
ದಂಪತಿಗಳು ಜೀವನವನ್ನ ನಡೆಸುವರೆಂದು ನಾನು ಇಲ್ಲಿ ನಿಮಗೆ ಗ್ಯಾರಂಟಿಯನ್ನ ಕೊಡುತ್ತೇನೆ. ಆದರೆ
ಚಿತ್ತಾ-೪ ನಕ್ಷತ್ರದವರಿಗೆ ಅಹಂಕಾರವಿದೆ. ಆದರೆ ತೊಂದರೆ ಇಲ್ಲ. ಕಾರಣ, ರೋಹಿಣಿ-೨ನೇ ಪಾದದವರು ಈ
ಕಲೆಯಲ್ಲಿ ಬಹಳ ನಿಪುಣರಾಗಿರುತ್ತಾರೆ.
48. Suppose if both are married and settled and if they
come across together by any means say in an office or in a class room type of
environment, then also there will be chance of extra marital affairs between
them!
49. Chitta-1 people if they born as a girl, they are of
whitish color, very arrogant, very business minded and number one in their work
and also may travel all over the world also! In fact abroad travelling applies
to all Chitta people as they are extra brilliants. Because of their brilliance
only they become number one in almost all fields! Mercury will be seeing on
their face and fore head also! Their forehead normally long! ಒಂದು ವೇಳೆ ಚಿತ್ತಾ ನಕ್ಷತ್ರ-೧ನೇ
ಪಾದದವರೆಲ್ಲಿಯಾದರೂ ಹೆಣ್ಣಾದ ಪಕ್ಷದಲ್ಲಿ, ಅವರುಗಳು ಬಿಳೀ ಗೋಧಿ ಬಣ್ಣದವರಾಗಿದ್ದು, ಸ್ವಲ್ಪ
ಅಹಂಕಾರಿಗಳೂ ಆಗಿ, ವ್ಯಾಪಾರ ಮನೋಭಾವನೆಯಿಂದ ತುಂಬಿ, ಕೆಲಸ ಕಾರ್ಯಗಳಲ್ಲಿ ಬಹಳ ಶಕ್ತಿಶಾಲಿಯಾಗಿ,
ಪ್ರಪಂಚವನ್ನೆಲ್ಲಾ ಸುತ್ತಿಯಾರು! ಈ ಚಿತ್ತಾ ನಕ್ಷತ್ರದವರೇ ಹಾಗೆ. ಮನೆಯಲ್ಲಿ ಇರೋದಿಲ್ಲ!
ಇದಕ್ಕೆ ಕಾರಣ ಕನ್ಯಾ ರಾಶಿಗೆ ೯ನೇ ಮನೆ ವೃಷಭ ರಾಶಿ. ೯ನೇ ಮನೆಯು ಫಾರಿನ್ ಟ್ರಾವಲ್ಸಿಗೆ. ಮೊದಲೇ
ಬಿಲ್ಲಿಯಂಟ್ ನಕ್ಷತ್ರ, ಬುಧ ಬೇರೆ ಈ ನಕ್ಷತ್ರ ಇರುವ ರಾಶಿಯ ಅಧಿಪತಿ! ಅಂದರೆ ಇವರು
ಓದುವುದರಲ್ಲಿ ನಂಬರ್ ೧ ಅಥವಾ ೨ ಆಗಿಯೇ ಇರ್ತಾರೆ. ಕುಜ ಬೇರೆ ಆಟಕ್ಕೆ ಕಾರಕ ಗ್ರಹ. ಅಂದರೆ,
ಇವರು ಆಟದಲ್ಲಿಯೂ ಬಹಳ ಏಕ್ಟೀವ್ ಆಗಿಯೇ ಮೆಡಲ್ಸ್ಗಳನ್ನ ದೋಚುವವರಾಗಿರುತ್ತಾರೆ. ಇನ್ನೇನು
ಬೇಕಪ್ಪಾ ಇವರ ಅಪ್ಪಾ ಅಮ್ಮನಿಗೇ?
50. Strengths: Sociable; independent; motivated;
high-spirited; elegant; dignified; judicious; well-read; attractive;
well-dressed; drawn to philosophy and social thought; prefers physical
expression of creativity such as sculpture; printmaking; business savvy; deep
spirituality.
51. ಇವರುಗಳ ಶಕ್ತಿ:- ಬಹಳ ಸಾಮಾಜಿಕವಾಗಿ
ಸ್ನೇಹಿತರೊಂದಿಗೆ ಬೆರೆಯುವ ಜನರಿವರು! ಸ್ವತಂತ್ರ ಜೀವಿಗಳಿವರು! ಬಹಳ ಗೌರವಯುತರಾದ
ವ್ಯಕ್ತಿಗಳಿವರು! ಯಾವಾಗಲೂ ಉತ್ಸಾಹಭರಿತರಾಗಿಯೇ ಇರುವವರು! ಯಾವಾಗಲೂ ಕಾನೂನಿನ
ಚೌಕಟ್ಟುಗಳಲ್ಲಿಯೇ ಇರುವವರು! ಒಳ್ಲೇ ಓದಿದವರಾಗಿರುವವರು! ಬಹಳ ಎಟ್ರಾಕ್ಟೀವ್ ಮುಖದವರು!
ಯಾವಾಗಲೂ ಖಡಕ್ ಇಸ್ತ್ರೀ, ಖಡಕ್ ಬೂಟನ್ನ ಧರಿಸುವವರು! ಫಿಲೋಸಫಿಯನ್ನ ಮಾತನಾಡುವವರು!
ಕ್ರಿಯೇಟಿವಿಟಿಯಿಂದ ತುಂಬಿ ತುಳುಕಾಡುವವರು! ವ್ಯಾಪಾರ ಮನೋಭಾವನೆಗಳಿಂದ ತುಂಬಿದವರು, ಅಗಾಧವಾದ
ಭಕ್ತಿಯನ್ನೂ ಇಟ್ಟುಕೊಂಡವರು! ಇದೆಲ್ಲಾ ಈ ನಕ್ಷತ್ರದವರ ಧನಾತ್ಮಕ ಗುಣಗಳು!
52. Weakness: Arrogant; egocentric; easily bored; smug;
argumentative; judgmental; spendthrift; quick to challenge another’s view
point; unethical; attracted to mates who are exciting; but negligent ; lack of
integrity.
53. ಇವರುಗಳ ವೀಕ್ನೆಸ್:- ಅಹಂಕಾರಿಗಳು!
ಮೂಗಿನ ಮೇಲೆಯೇ ಕೋಪ ಬೇರೆ! ಬೇಗನೆ ಒಂದು ಕೆಲಸದಲ್ಲಿ ಬೋರ್ ಹೊಡೆಯುತ್ತಿರುತ್ತದೆ!ವಾದವನ್ನ
ಮಾಡುವವರು! ಖರ್ಚು ವಿಪರೀತ ಮಾಡುವವರು! ಬೇರವರ ದೃಷ್ಟಿಕೋಣವನ್ನ ಸಮಾ ಓರೆಗಲ್ಲಿಗೆ ಹಾಕಿ
ತಿಕ್ಕುವವರು!, ಬೇರವರ ತಪ್ಪನ್ನ ಎತ್ತಿ ಹೇಳುವವರು! ಇಂಟೆಗ್ರಿಟಿ ಇಲ್ಲದವರು!
54. Chitta people should adhore either goddess Lakshmi,
Jai Santoshima, Amaba Bhavani, Mata Annapurneshwari or Lakshmi-Narayana,
Subhramanya, Guru Narasimha to get their ego down and to flourish still good in
their business!
55. ಇವರುಗಳು ಯಾವುದೇ ಹೆಣ್ಣು ದೇವತೆಯನ್ನ
ಅರ್ಚಿಸಬಹುದು. ಉದಾಹರಣೆಗಾಗಿ, ಕಮಲಶಿಲೆ ಅಮ್ಮ ಬ್ರಾಹ್ಮ್ಯ ದುರ್ಗಾಪರಮೇಶ್ವರಿ, ಶ್ರೀ ಆದ್ಯ
ಕಾತ್ಯಾಯನೀ ದೇವಿ, ಕೊಲ್ಲೂರು ಮೂಕಾಂಬಿಕಾ, ಗೊರವನ ಹಳ್ಳೀಯ ಲಕ್ಷ್ಮೀದೇವಿ, ಕೊಲ್ಲಪುರದ ಮಹಾ
ಲಕ್ಷ್ಮಿ, ಮಾ ಜಗದಾಂಬ, ವೈಷ್ಣವೀ ದೇವಿ, ಜೈ ಸಂತೋಷಿ ಮಾತ ಇತ್ಯಾದಿ.
56. ಕುಕ್ಕೇ ಸುಬ್ರ್ಹಮಣ್ಯ, ಮುಕ್ತಿನಾಗ,
ಘಾಟೀ ಸುಬ್ರ್ಹ್ಮಣ್ಯ, ಲಕ್ಷ್ಮೀ ನರಸಿಂಹ, ಗುರು ನರಸಿಂಹ, ಕಾರ್ತಿಕೇಯ. ಹೀಗೆ ಮಾಡಿದರೆ ಇವರ ಅಹಂಕಾರ ಕಮ್ಮಿ, ಅಲಂಕಾರ ಜಾಸ್ತಿ
ಆಗುತ್ತೇ ಅನ್ನುವುದರಲ್ಲಿ ಸಂಶಯವೇ ಬೇಡ.
57. By Dr. P Surendra Upadya, M.Sc. Ph.D (Astrology)
58. 20/07/2017
Comments
Post a Comment