Mula Nakshatra
ಮೂಲಾ ನಕ್ಷತ್ರ
1. Mula is ruled by
Prajapati, the Creator, who also rules Rohini.
2. ಮೂಲಾ ನಕ್ಷತ್ರವನ್ನ ರೋಹಿಣೀ ನಕ್ಷತ್ರವನ್ನಾಳಿದಂತಹ
ಪ್ರಜಾಪತಿಯೇ ಆಳುತ್ತಾನೆ. ಪ್ರಜಾಪತಿ ಬ್ರಹ್ಮನು ಸೃಷ್ಟಿ ಕರ್ತ.
3. This gives Mula
a more creative energy.
4. ಇದರಿಂದಗಿ ಇವರಿಗೆ ಕ್ರಿಯೇಟಿವ್ ಶಕ್ತಿ ಬರುತ್ತೆ.
5. Mula means root, the
root of progeny
6. ಮೂಲ ಅಂದರೆ ಬೇರು, ಮಗುವನ್ನ ಹಾಗೂ ತಯಿಯನ್ನ ಸೇರಿಸುವಂತಹ
ಬಳ್ಳಿ.
7. The deity of Moola
Nakshatra is Nirithi or Alakshmi or the lord of ill luck, the Goddess of
Destruction. She lives in the Kingdom of the Dead and is associated with the
powerful goddess, Kali.
8. ಇದರ ದೇವತೆ ನಿರಿಥಿ ಅಥವಾ ಅಲಕ್ಷ್ಮಿ, ಲಕ್ಶ್ಮಿ ಹುಟ್ಟುವ
ಮುಂಚೆ ಸಮುದ್ರ ಮಂಥನದಲ್ಲಿ ಹುಟ್ಟಿದವಳು. ಇವಳನ್ನ ಕಾಳೀ ಮಾತಾ ಅನ್ನುವರು. ಇರೋದು ಶ್ವಗಳನ್ನ
ಸುಡುವ ಸ್ಮಷಾನದಲ್ಲಿ.
9. Mula has a
rakshasa temperament with a primary motivation of kama."
10.
ಈ
ನಕ್ಷತ್ರದ ಗಣ ರಾಕ್ಷಸ ಗಣ. ಕಾಮವೇ ಇದರ ಪ್ರಥಮ ಗುರಿ.
11.
This Nakshatra is beginning from
zero degrees and ending at 13.20 degrees at Dhanu or Sagittarius zodiac.
12.
ಮೂಲಾ
ನಕ್ಷತ್ರದವರಿಗೆ ಮುಂಚಿನ ಕಾಲದಲ್ಲಿ ಮದುವೇನೇ ಆಗುತ್ತಿರಲಿಲ್ಲ. ಕಾರಣ ಅವರುಗಳು ಹೋದ ಮನೆಗೆ
ದುರದೃಷ್ಟಗಳನ್ನ ತೆಗೆದುಕೋಂಡು ಹೋಗುತ್ತಾರೆನ್ನುವ ಒಂದು ಮೂಢ ನಂಬಿಕೆ ಇದೆ. ಆದರೆ ಕ್ರಮೇ ಣ ಅದು
ಕಡಿಮೆಯಾದರೂ, ಒಂದು ಕೊಟ್ಟು ಇನ್ನೊಂದು ತೆಗೆದುಕೊಳ್ಳುವ ಮಟ್ಟಿಗೆ ಬಂದರು ಅನ್ನುವ ಒಂದು
ನೆಮ್ಮದಿ ಉಂಟು. ಈವಾಗ ಅದೂ ಹೋಗಿ ಮದುವೆಯನ್ನ ಮಾಡಲು ಒಪ್ಪಿಕೊಳ್ಳುತ್ತಾರೆ, ಕಾರಣ ಹೆಣ್ಣುಗಳೇ
ಗಂಡಿಗೆ ಸಿಗುವುದಿಲ್ಲ. ಎಂತಾ ಕಾಲ ಬಂದಿತು ನೋಡಿ. ಇತರ ಜಾತಿಯಾದರೂ ಆಗಬಹುದೆನ್ನುವ
ಮಟ್ಟಿಗೆ ಬಂದಮೇಲೆ ಮೂಲವಾದರೆ ಏನು,
ಆಶ್ಲೇಷವಾದರೆ ಏನು? ಅನ್ನುವ ಮಟ್ಟಕ್ಕೆ ನಮ್ಮ ಜನರು ಬಂದಿರುತ್ತಾರೆ. ಇರಲಿ ಈ ಮೂಲಾ ನಕ್ಷತ್ರ
ಧನೂರ್ ರಾಶಿಯಲ್ಲಿ ಸೊನ್ನೇ ಡಿಗ್ರಿಯಿಂದ ೧೩.೨೦
ಡಿಗ್ರಿಯವರೆಗೆ ಇರುತ್ತದೆ. ಇದರ ಅಧಿಪತಿ ನಿರಿತಿ ಅಥವಾ ಅಲಕ್ಷ್ಮೀ ಅಂತ!
13.
This Moola Nakshatra is ruled by shadow planet Ketu.
It is Hanumantha’s Nakshatra. It means they are experts in dhanvantari Vidya or
Ayurveda Vidya.
14.
ಇದನ್ನ
ಆಳುವಂತಹ ಗ್ರಹ ಕೇತು, ಮೋಕ್ಷಕಾರಕ ಗ್ರಹ ಹಾಗೂ ಹನುಮಂತನ ನಕ್ಷತ್ರ. ಆದ್ದರಿಂದಲೇ ಇವರುಗಳಿಗೆ
ಗಿಡ ಮೂಲಿಕೆಗಳ ಬಗ್ಗೆ, ಆಯುರ್ವೇದದ ಬಗ್ಗೆ ಉಳಿದವರಿಗಿಂತ ಸ್ವಲ್ಪ ಜಾಸ್ತಿಯೇ ಗೊತ್ತಿರುತ್ತದೆ
ಹಾಗೂ ಆಯುರ್ವೇದ ಔಷಧಿಗಳನ್ನ ಮನೆಯಲ್ಲಿ ಮಾಡುತ್ತಾರೆ ಕೂಡ.
15.
Moola 1st Pada falls in Aries, 2nd
Pada falls in Taurs, 3rd Pada falls in Gemini and fourth Pada falls
in Karka Rashi.
16.
ಮೂಲ
ಒಂದನೇ ಪಾದವು ಮೇಶ ರಾಶಿಗೆ ಬಂದಿರುವುದರಿಂದ, ಅವರುಗಳು ಅಗ್ನಿತತ್ವದ ಕುಜನ ಆಡಳಿತದ ಕೆಳಗೆ
ಬರುತ್ತಾರೆ. ಅಂದರೆ ಈ ಜನರು ಮುಖದ ಮೇಲೆ ಫಟ್ ಅಂತ ಬಾರಿಸುವವರ ಹಾಗೆ ಮಾತನಾಡುವರು. ಇವರುಗಳನ್ನ
ನೋಡಿದ ಕೂಡಲೇ, ಅವರ ಬಾಯಿಯಿಂದ ಹೊರಡುವ ಮಾತುಗಳಿಂದಲೇ ನೀವು ಧೃಡೀಕರಿಸಬಹುದು ಇವರು ಮೂಲಾ
ನಕ್ಷತ್ರದವರೂ ಅಂತ. ನಿಮಗೆ ಬೇಡವಾದರೂ ಆ ಚೂರ್ಣ
ತಿನ್ನಿ, ಈ ಚೂರ್ಣ ತಿನ್ನಿ, ಆ ಬೇರನ್ನ ಅರೆದು ಕಶಾಯ ಮಾಡಿ ಕುಡಿಯಿರಿ ಅಂತ ಹೇಳದಿದ್ದರೆ, ಅವರು ಮೂಲಾ
ನಕ್ಷತ್ರದವರೇ ಅಲ್ಲಾ ಅನ್ನಿ. ಈ ಕುಜನ ಅಧಿಕಾರದಲ್ಲಿ ಬರುವವರಿಗೆ ಅಹಂಕಾರ ಬಹಳ ಜಾಸ್ತಿ! ಇವರುಗಳ
ಕೋಪ ಮೂಗಿನ ತುದಿಯಲ್ಲಿರುತ್ತೆ. ಇವರು ಅತೀ ಶಿಸ್ತಿನ ಜನರು. ಮುಯ್ಯಿಗೆ ಮುಯ್ಯಿ ತೀರಿಸುವ
ಜನರಿವರು. ಇವರು ತಲೆಯಿಂದ ಮಾತನಾಡುವವರು! ಅಂದರೆ ಬೇರಾರೂ ತಲೆಯಿಂದ ಮಾತನಾಡುವುದಿಲ್ಲವೇ?
ಹಾಗಲ್ಲ ಇದನ್ನ ಮಾತಿಗೆ ಹೇಳುವ ಸಂಪ್ರದಾಯ.
ಅಂದರೆ ಅತೀ ಬುಧ್ಧಿವಂತಿಕೆಯನ್ನ ಉಪಯೋಗಿಸಿ ಮಾತನಾಡುವ ಜನರು ಇವರಾಗಿಒರುತ್ತಾರೆ.
17.
Hence Moola 1 pada people are having little bit of
angry on their face and also may enter into unnecessary arguments because Janana
Karaka Ketu! Moola 2 Pada people will be very jovial in nature and also making
heavy expenditures as Venus play the role here, Ketu 3 pada people are extra
brilliant because of both jnana karaka Ketu as well as intelligent Karaka
Mercury. They are well versed in accountancy, Mantras and hidden vidyas like Astrology
and Tantra Mantra also
18.
ಅದೇ
ಮೂಲ ೨ನೇ ಪಾದದವರು, ಬಹಳ ಜೋಲೀ ಮನುಷ್ಯರು. ಇವರುಗಳು ಶುಕ್ರನ ದರ್ಬಾರಿನಲ್ಲಿ ಬರುವವರು. ನೋಡಲು
ಮೂಳೆ ಮಾಂಸವಿದ್ದರೂ, ಪೌಡರ್ ಸ್ನೋ ಇಲ್ಲದೇ ಹೊರಗೆ ಹೊರಡುವವರಲ್ಲ! ಸ್ವಲ್ಪ ಜಾಸ್ತಿ ಅಂದರೆ ಘಮ
ಘಮ ಅನ್ನುವ ಸೆಂಟ್ ಹಾಕಿಕೊಂಡು ಹೊರಗೆ ಹೊರಡುತ್ತಾರೆ. ಇವರುಗಳು ಬಹಳಷ್ಟು ಖರ್ಚನ್ನ
ಮಾಡುತ್ತಾರೆ. ಅವರುಗಳು ಹೊಸ ಹೊಸ ಹೋಟೆಲ್ಲಿಗೆ ಹೋಗುತ್ತಾರೆ. ಶುಕ್ರ ಈ ನಕ್ಷತ್ರದವರಿಗೆ ಹಾಗೂ ರಾಶಿಗೆ ಲಾಭದಾಯಕವಾಗಿರುತ್ತೆ. ಇನ್ನು ಮೂಲ ೩ನೇ ಪಾದದವರು
ಮಿಥುನ ರಾಶಿಗೆ ಬರುವುದರಿಂದ, ಬುಧನ ಆಡಳಿತಡಿ ಬರುತ್ತೆ. ಅಂದರೆ ಇವರುಗಳು ಅಸಾಧ್ಯವಾಗಿ
ಬುಧ್ಧಿವಂತರು. ಏತಕ್ಕೇ ಅಂತ ಕೇಳುತ್ತೀರಾ? ಕೇತು ಕೂಡ ಜ್ನಾನ ಕಾರಕ. ಬುಧನೂ ವಿದ್ಯೆಯ ಕಾರಕ
ಗ್ರಹ. ಮತ್ತೆ ಮೂಲಾ ನಕ್ಷತ್ರವಿರುವ ರಾಶಿ ಅಧಿಪತಿ ಗುರು. ನೋಡಿ ಇಲ್ಲೆ. ಗುರು, ಬುಧ ಹಾಗೂ
ಕೇತುವಿನ ಸಂಗಮ ಆಗುತ್ತೆ. ಗುರುವಿನ ಶಿಷ್ಯನಾಗಿದ್ದರೂ ಸಹ, ಗುರು ಮತ್ತು ಬುಧರು ಶತ್ರುಗಳೇ
ಆಗಿದ್ದರೂ ಸಹ, ಇಲ್ಲೆ ಜ್ನಾನ ಉಂಟು. ಇಲ್ಲೆ ಮಾತು ಉಂಟು. ಇಲ್ಲಿ ವ್ಯವಹಾರವುಂಟು. ಇಲ್ಲಿ ಬುಧ್ಧಿವಂತಿಕೆ
ಉಂಟು. ಇಲ್ಲಿ ಅತೀ ವಿದ್ಯಾಭ್ಯಾಸವುಂಟು. ಅಂದರೆ ಇವರಷ್ಟು ಅತೀ ಬುಧ್ಧಿವಂತರು ನಿಮಗೆ
ಸಿಗಲಿಕ್ಕಿಲ್ಲ. ಆದರೆ ಏನೇ ಆದರು, ಕೇತು ನಕ್ಷತ್ರದ ಗುರಿ ಮೋಕ್ಷದತ್ತ. ಇವರುಗಳಿಗೆ ಈ ಧನ
ಸಂಪತ್ತು ಯಾವ ಲೆಕ್ಕವೂ ಇರೋದಿಲ್ಲ. ಒಟ್ತಾರೆ ಜೀವಿಸಬೇಕು. ಇವರಿಗೆ ಇದೆಲ್ಲಾ ಬೇಕು ಅನ್ನುವ
ತತ್ವದವರಷ್ಟೆ!
19.
Moola -4 pada people are of cool in nature and also
nodding their head for each and everything other people say. They will not come
into any controversies.
20.
ಅದೇ
ಮೂಲ ನಕ್ಷತ್ರದ ೪ನೇ ಪಾದದವರು ಶುಧ್ಧ ಜಲ ರಾಶಿಯಾದ ಕರ್ಕಕ್ಕೆ ಬರುತ್ತೆ. ಅಂದರೆ ಇದು ಶುಧ್ಧ ಜಲದ
ರಾಶಿ . ಈ ರಾಶಿಯ ಅಧಿಪತಿ ಬೇರೆ ಚಂದ್ರ. ಆತನೂ ಜಲ ತತ್ವದವನು. ಆಂದರೆ ಈ ಮೂಲಾ ನಕ್ಷತ್ರದ ೪ ನೇ
ಪಾದದವರು ಬಹಳ ಕೂಲ್ ಆಗಿರುತ್ಟಾರೆ. ಇವರುಗಳು ಅಡುಗೆಯಲ್ಲಿ ಎತ್ತಿದ ಕೈ. ಇವರು ಪಟ ಪಟ ಅಂತ
ಮಾತನಾಡುವವರ ಜಾತಿಗೆ ಸೇರುತ್ತಾರೆ. ಚಂದ್ರನೇ ಹಾಗೆ. ಅರಳು ಹೊಟ್ಟುವ ಹಾಗೆ ಮಾತನಾಡುವರು.
ಇವರನ್ನ ನೋಡಲೂ ಚಂದವಾಗಿರುತ್ತಾರೆ.
21.
Moola Nakshatra people are usually hale and healthy
and very energetic people. Though you
may find out somewhat lean, personalities in this Nakshatra, they are mentally
very strong! They never used to afraid of any filthy things happening around
them!
22.
ಇವರುಗಳು
ಯಾವಾಗಲೂ ಆರೋಗ್ಯದಿಂದಲೇ ಇರುತ್ತಾರೆ. ಇವರನ್ನ ನೋಡಲು ಸಪೂರವಾಗಿ ಇದ್ದರೂ ಬಹಳ
ಶಕ್ತಿಯುತಾರಾಗಿರುತ್ಟಾರೆ. ಕಾರಣ ಇವರದ್ದು ಹನುಮಂತನ ನಕ್ಷತ್ರವಲ್ಲವೇ? ಹನುಮಂತ ಬಹಳ
ಶಕ್ತಿಶಾಲಿ. ಏನನ್ನ ಬೇಕಾದರೂ ಸಾಧಿಸಬಲ್ಲ ಹಾಗೂ
ತರಬಲ್ಲ. ಅಂತೆಯೇ ಇವರೂ ಕೂಡ ಹಾಗೇನೇ. ಇವರ ಹತ್ತಿರ ಸಾಧ್ಯವಿಲ್ಲಾ ಅನ್ನುವ ಮಾತೇ ಇಲ್ಲ. ಈ ಮೂಲಾ
ನಕ್ಷತ್ರದವರು ಮೆಂಟಲೀ ಬಹಳ ಸ್ಟ್ರೋಂಗ್ ಆಗಿರುತ್ತಾರೆ.
23.
Ayurveda Medicines are in their top of their tongue.
They exell in this type of medicines. It is a god gift!
24.
ಈ
ಆಯುರ್ವೇದ ಎನ್ನುವುದು ಇವರಿಗೆ ಬಂದಂತಹ ಗೋಡ್
ಗಿಫ್ಟ್!
25.
The male natives of Moola Nakshatra are believed to be
enthusiastic and energetic people who carry immense optimism in their approach
and enjoy their life at its most.
26.
ಈ
ಮೂಲಾ ನಕ್ಷತ್ರದ ಗಂಡು ಸಂತಾನದವರು ಬಹಳ ಹುರುಪಿರುವ ಜನರು ಮತ್ತು ಬಹಳ ಶಕ್ತಿಶಾಲಿ ಮನುಷ್ಯರು. ಇವರುಗಳು
ಜೀವನವನ್ನ ಒಂದು ಸಂತೋಷವಾಗಿ ತೆಗೆದುಕೊಂಡು ಹೋಗುವವರು. ಇವರುಗಳ ಗುರಿ, ಲೈಫನ್ನ ಎನ್ಜೋಯ್
ಮಾಡಬೇಕೆನ್ನುವುದು.
27.
The female natives of Moola Nakshatra are perceived to
be very soft and pure hearted souls
28.
ಅದೇ
ಮೂಲಾ ನಕ್ಷತ್ರದ ಹೆಂಗಸರು ಬಹಳ ಶುಧ್ದ ಹಾಗೂ ಬಹಳ ಮೃದು ಹೃದಯ ಇದ್ದವರು. ಒಂದು ರೀತಿಯ ಕಲ್ಮಷ ಇಲ್ಲದವರು.
29.
Hence, the women natives of Moola Nakshatra are very sensitive
at the core of the heart and possess instability in mind.
30.
ಆದ್ದರಿಂದಲೇ
ಈ ನಕ್ಷತ್ರದ ಹೆಂಗಸರಿಗೆ ತಲೆ ಬೇಲೆನ್ಸ್ ನಲ್ಲಿ ಇರೋದಿಲ್ಲ ಹಾಗೂ ಅವರುಗಳು ಬಹಳ ಸೆನ್ಸಿಟಿವ್
ಆಗಿರುತ್ತಾರೆ.
31.
Male Moola Nakshatra People are usually ever peace
loving personalities at the core of their heart and are affectionate in their
attitude They are the people who usually live in today and not believing in
living in tomorrow!
32.
ಈ
ನಕ್ಷತ್ರದ ಗಂಡಸರಿಗೆ ತಾಳ್ಮೆ ಜಾಸ್ತಿ. ಇವರು ಯಾವಾಗಲೂ ಶಾಂತಿಯನ್ನ ಪ್ರೀತಿಸುವುದು ಜಾಸ್ತಿ.
ಇವರುಗಳು ಗಾಂಧೀ ವಾದಿಗಳು. ಅಹಿಂಸೆಯನ್ನ ಹೆಚ್ಚಿಗೆ
ಪ್ರೀತಿಸುತ್ತಾರೆ. ಇವರುಗಳು ಇವತ್ತು ಜೀವಿಸುವುದು ಹೇಗೇ ಅಂತ ಚಿಂತಿಸುತ್ತಾರೆಯೇ ವಿನಹ
ನಾಳಿನದ್ದಲ್ಲ!
33.
Female Moola Nakshatra people are quiet unpredictable
personalities who lack the required seriousness in their attitude.
34.
ಆದರೆ
ಮೂಲಾ ನಕ್ಷತ್ರದ ಹೆಂಗಸರನ್ನ ನೀವುಗಳು ನಂಬುವಂತಿಲ್ಲ. ಗರ್ಕ್ ಅಂತ ಯಾವಾಗ ನಿಮ್ಮಿಂದ ತಿರುಗುತ್ತಾರೋ
ಗೊತ್ತಿಲ್ಲ!
35.
On the other part, Female Moola Nakshatra people are very
strongly loyal people and strictly expect the same in return.
36.
ಈ
ನಕ್ಷತ್ರದ ಹೆಂಗಸರು ಬಹಳ ಲಾಯಲ್ ಆಗಿರುತ್ತಾರೆ ಅವರೂ ಕೂಡ ಹಾಗೇನೆ. ಅದನ್ನೇ ಬೇರವರಿಂದ ನಿರೀಕ್ಷೆಯನ್ನ
ಮಾಡುತ್ತಿರುತ್ತಾರೆ.
37.
Female Moola Nakshatra people do not like betrayals
and deceit, and this could turn them highly furious and harsh .These type of Female Moola Nakshatra people carry
their morals and principals throughout life.
38.
ಈ
ನಕ್ಷತ್ರದ ಹೆಂಗಸರಿಗೆ ಅಪಮಾನವನ್ನ ಬಿಲ್ಕುಲ್ ಸಹಿಸಲಾರರು. ಇದು ರನ್ನ ಕೋಪಕ್ಕೆ ಎಡಕೊಟ್ಟೀತು!
ಇವರುಗಳು ಈ ತತ್ವವನ್ನೇ ಕೊನೆಯವರೆಗೆ
ಕಾಯ್ದುಕೊಂಡು ಬರುತ್ತಾರೆ.
39.
Like all Ketu-ruled nakshatra, Mula is greatly
strengthened when Ketu occupies Mula - and even it is helpful when Ketu
occupies PurvaAzadha or pada-1 of UttaraAzadha
40.
ಈ
ಮುಲಾ ನಕ್ಷತ್ರಕ್ಕೆ ಯಾವಾಗ ಬಲ ಬರುತ್ತೆ ಅಂದರೆ, ಕೇತು ಗ್ರಹವು ಮೂಲ ನಕ್ಷತ್ರದಲ್ಲಿದಾವಾಗ
ಇದಕ್ಕೆ ಬಲ ಬರುತ್ತೆ. ಅದೇ ಕೇತು ಪೂರ್ವಾಷಾಢ ನಕ್ಷತ್ರ, ಪಾದ ೧ ಮತ್ತು ಉತ್ತರಾಷಾಢಾ
ನಕ್ಷತ್ರಗಳಲ್ಲಿರುವಾಗ.
41.
In fact these Moola Nakshatra whether a male or a
female people will suffer a lot in their married life especially in their
conjugal path which definitely will disturb their peace of mind.
42.
ಒಟ್ಟಾರೆ
ಮುಲಾ ನಕ್ಷತ್ರದವರು ಹೆಣ್ನೇ ಆದರೂ ಸೈ ಇಲ್ಲಾ ಗಂಡಾದರೂ ಸೈ, ಇವರುಗಳು ಮದುವೆ ಜೀವನದಲ್ಲಿ
ಸ್ವಲ್ಪ ಕಷ್ಟವನ್ನೇ ಅನುಭವಿಸುವರು.
43.
These Female Moola Nakshatra people cannot spend a harmonious
life with their husband and children! However, this could be reduced by the
favorable positions of planets in their horoscope, especially in woman’s
kundali!
44.
ಈ
ಮೂಲಾ ನಕ್ಷತ್ರದ ಹೆಂಗಸರು ತಮ್ಮ ಗಂಡನ ಜೊತೆಯಲ್ಲಿ ಅನುಕೂಲಕರ ಜೀವನವನ್ನ ಸಾಗಿಸಲು
ಅಶಕ್ತರಾಗಿರುತ್ತಾರೆ. ಆದರೆ ಇದು
ಕುಂಡಲಿಯಲ್ಲಿರುವ ಬೇರೆ ಗ್ರಹಗಳ ಮೇಲೂ ಆಧಾರಿತವಾಗಿರುತ್ತೆ ಅನ್ನಿ.
By
Dr. P Surendra Upadhya, M.Sc., Ph.D (Astrology)
26/07/2017
Comments
Post a Comment