Ashlesha Nakshatra ಆಶ್ಲೇಷ ನಕ್ಷತ್ರ

Ashlesha Nakshatra
ಆಶ್ಲೇಷ ನಕ್ಷತ್ರ

1.    Ashlesha (Sanskrit: आश्लेषा or Āśleṣā) is the 9th of the 27 nakshatras in Hindu astrology.

2.    ಇದು ೨೭ ನಕ್ಷತ್ರಗಳಲ್ಲಿ ೯ನೆಯದು.

3.    Ashlesha 16-40 to 30-00 Cancer.

4.    ಇದು ಕರ್ಕರಾಶಿಯಲ್ಲಿ ೧೬.೪೦ ಡಿಗ್ರೀಯಿಂದ ೩೦.೦೦ ಡಿಗ್ರೀಯವರೆಗೆ ವಿಸ್ಥಾರವಾಗಿರುತ್ತೆ.

5.    General Characteristics: Motivated by dharma, represents the kundalini or serpent fire located at the base of the spine.

6.    ಧಾರ್ಮಿಕ ಸ್ವಭಾವದ ವ್ಯಕ್ತಿಗಳು, ಕಲ್ಲಿದ್ದರೂ ಕುಂಕುಮ, ಅರಶಿನ ಬಳಿದು ಹೂವನ್ನ ಹಾಕಿ ಪೂಜಯನ್ನ ಮಾಡುವ ಜಾತಿಗೆ ಸೇರಿದವರು, ಇದು ಕುಂಡಿಲಿನಿ ಶಕ್ತಿಯನ್ನ ತೋರಿಸುತ್ತೆ ಮತ್ತು ನಮ್ಮ ಬೆನ್ನು ಮೂಳೆಯ ಪ್ರಥಮ ಗೂಂಜು ಕಾಣಿಸುತ್ತೆ ನೋಡಿ, ಅಲ್ಲಿದೆ.

7.    Symbol: Coiled snake, circle, or wheel.

8.    ಇದರ ಗುರುತು ಸುರುಳಿ ಸುತ್ತಿರುವ ಹಾವು

9.    Ruling Planet: Mercury

10.                       ಇದನ್ನ ಆಳುವಂತಹ ಗ್ರಹ ಬುಧ ಗ್ರಹ.

11.                       Nature: Rakshasa (demon).

12.                       ಇದು ರಾಕ್ಷಸ ಗಣಕ್ಕೆ ಸೇರಿದ ನಕ್ಷತ್ರ. ಈ ವ್ಯಕ್ತಿಗಳೂ ಕೂಡ ಕೆಲವೊಮ್ಮೆ ರಾಕ್ಷರಂತೆ ನಡೆದುಕೊಳ್ಳುತ್ತಾರೆ.

13.                       Presiding deity: Clinging Star or Nāga. or serpent of wisdom

14.                       ಇವರ ದೇವತೆ ನಾಗ.

15.                       Ashlesha Nakshatra comes under Kataka Rashi, which is watery sign and Moon is the lord of it, and the lord of Ashlesha Nakshatra is Mercury!

16.                       ಇದು ಜಲತತ್ವದ ರಾಶಿಯಾದ ಕಟಕ ರಾಶಿಗೆ ಬರುತ್ತೆ.

17.                       Hence these Nakshatra people have excellent communications and also they never sit in a particular space. Always wandering people. Why? Because Moon is the fastest planet and it stays in a Rashi for 2 ½ days! Hence these persons are also like that!

18.                       ಆದ್ದರಿಂದಲೇ ಇವರುಗಳಿಗೆ ಅತೀ ಉತ್ತಮವಾದ ಮಾತುಗಾರಿಕೆ ಉಂಟು. ಇವರು ಸರ್ಪದಂತೆ ಇದ್ದ ಕಡೆ ಇರೋ ಜಾತಿಯಲ್ಲ. ಸುತ್ತೋ ಜಾತಿ. ನೀವು ಎಲ್ಲಿಯಾದರೂ ಆಶ್ಲೇಷ ನಕ್ಷತ್ರದವರನ್ನ ನೋಡಿದರೂ ಸಹ, ನಿಮಗೆ ಹಾಗೆಯೇ ಅನ್ನಿಸುತ್ತೆ. ಏನು ಇವರು ಕಾಲಿಗೆ ಚಕ್ರ ಕಟ್ಟೀ ಕೊಂಡಿದ್ದಾರೋ ಅಂತ ನೀವೇ ನನ್ನನ್ನ ಕೇಳುತ್ತೀರಿ.  ಇವರಿಗೆ ಊರಲ್ಲಿ ಇಲ್ಲದ ಸ್ನೇಹಿತರುಗಳು ಸಾಟಿ! ಕಾರಣ ಬುಧ ಗ್ರಹ ಇದರ ಅಧಿಪತಿ. ಬುಧ ಮಾತುಗಾರಿಕೆಗೆ. ಬುಧ ಕಥೆ ಕಟ್ಟಲು. ಬುಧ ಬುಧ್ಧಿವಂತಿಕೆಗೆ. ಬುಧ ಬಿಸಿನೆಸ್ಸಿಗೆ. ಬುಧ ಮಾತನ್ನ ಬದಲಾಯಿಸುವಿಕೆಗೆ ಇತ್ಯಾದಿ , ಇತ್ಯಾದಿ.

19.                       Ashlesha Nakshatra people have excellent communication like Gemini people! But the negative aspect of them is that even lie also they present it as if it is true!

20.                       ಈ ಮಾತುಗಾರಿಕೆಯ ಋಣಾತ್ಮಕ ಭಾವನೆ ಏನಪ್ಪಾ ಅಂದರೆ, ಇವರು ಸುಳ್ಳನ್ನೂ ಸತ್ಯವೆಂತಲೇ ಸಾಧಿಸುತ್ಟಾರೆ. ಹುಷಾರ್!

21.                       Ashlesha-1st Pada comes to Sagittarius, an Agni Tatwa Rashi, whose lord is Jupiter, an Akasha Tatwa planet.

22.                       ಆಶ್ಲೇಷ- ೧ನೇ ಪಾದವು ಧನುಸ್ಸು ರಾಶಿಗೆ ಬೀಳುತ್ತೆ. ಅಂದರೆ ಇದು ಅಗ್ನಿ ತತ್ವದ ರಾಶಿಯಲ್ಲಿ ಕೊನೆಯ ರಾಶಿ. ಗುರುವಿನಲ್ಲಿ.ದ್ದಂತಹ  ಎಲ್ಲಾ ಕಾರಕತ್ವಗಳೂ ಇವರಿಗೆ ಇವೆ. ಆದರೆ ಬುಧನದ್ದು ಸ್ವಲ್ಪ ಜಾಸ್ತಿ. ಸಿಟ್ಟು ಹೇಗೆ ಬರುತ್ತೇ ಅಂದರೆ, ಇವರು ಎದಿರಿಗಿದ್ದವರನ್ನ ಹೊರಿದು ಸುಟ್ಟು ಹಾಕಿ ಬಿಡುತ್ತಾರೆ, ಹುಷಾರ್!
23.                       Ashlesha -2nd Pada is in Capricorn, whose lord is Saturn, which is Vayu Tatwa Rashi.

24.                       ಆಶ್ಲೇಷ ೨ ಮತ್ತು ಮೂರನೇ ಪಾದಗಳು ಶನಿಯ ರಾಶಿಗಳಾದ ಮಕರ ಮತ್ತು ಕುಂಭಕ್ಕೆ ಬೀಳುತ್ತೆ. ಶನಿಯು ವಾಯು ತತ್ವದ ರಾಶಿ. ಬುಧನೂ ವಾಯು ತತ್ವದ ರಾಶಿ. ಇರೋದು ಜಲ ತತ್ವದ ರಾಶಿ. ಇನ್ನು ಕೇಳಬೇಕೇ? ತೆಕ್ಕೊಳ್ಳಿ ಮಹಾರಾಯರೇ, ಇವರಿಗೆ ಎಲ್ಲಾ ಕೆಳಜಾತಿಯವರೂ ಸ್ನೇಹಿತರೇ. ಇವರದ್ದು ದೊಡ್ಡ ಗುಂಪೇ ಇರುತ್ತೆ. ಇವರು , ಇವರಿರುವ ಜಾಗಕ್ಕೆ ಕೋರ್ಪೊರೇಟರ್ ಆಗಲು ಲಾಯಕ್. ಅಲ್ಲಿನ ಎಲ್ಲಾ ಸಮಸ್ಯಗಳನ್ನ ಇವರ ತಲೆಯ ಮೇಲೆ ಹಾಕಿಕೊಂಡು, ಧಾಳಿ ಮಾಡಿ, ಧರಣಿಯನ್ನ ಮಾಡಿ, ಗುಂಪನ್ನ ಕಟ್ಟಿ ಆ ರಾಜಕೀಯ ವ್ಯಕ್ತಿ ಏನಾದರೂ ಇವರು ಹೇಳಿದ ಕೆಲಸವನ್ನ ಮಾಡಲಿಲ್ಲವೋ, ಅವರ ಬಟ್ಟೆ ಕಳಚಿ ಮೆರವಣಿಗೆಯನ್ನ ಮಾಡಿಸಿಯಾರ್, ಹುಷಾರ್! ಶನಿಯ ರಾಶಿ ಆದ ಕಾರಣ ಇವರು ಇವರಿರುವ ಸ್ಥಳದ ನ್ಯಾಯಾಧೀಶರೂ ಕೂಡ. ಇವರು ಹೇಳಿದ ಮೇಲೆ ಎಂಥವರೂ ಕೇಳಬೇಕೇ ಬೇಕು. ಎಂಥ ವಾಕ್ಚಾತುರ್ಯ! ಇವರುಗಳು ಪತ್ರಿಕೆಯಲ್ಲಿಯೂ ಬರೆಯುತ್ತಾರೆ.

25.                       Ashlesha -3rd Pada is also Vayu Tatwa Rashi and the lord o it also Trikona Sthana’s Shani Mahadev.

26.                       Ashlesha Nakshatra’s 4th Pada is in Pisces, which is deep Jal Rasshi and Shudhdha Jala rashi (Pure Waterery Sign) also, the lord of it also Jupiter, once again is Akasha Tatwa Rashi.

27.                       ಈ ಆಶ್ಲೇಷ ನಕ್ಷತ್ರದ ೪ನೇ ಪಾದವು ಮತ್ತೊಂದು ಜಲರಾಶಿಯಾದ ಮೀನಕ್ಕೆ ಬರುತ್ತೆ. ಮೊದಲೇ ಇವರ ನಕ್ಷತ್ರದ ಅಧಿಪತಿ ಚಂದ್ರ ಜಲತತ್ವದ್ದು. ಇವರು ಇದ್ದ ರಾಶಿಯೂ ಶುಧ್ಧ ನೀರಿನ ಜಲತತ್ವದ ರಾಶಿ. ಈಗ ನವಾಂಶವೂ ಆಳವಾದ ಜಲತತ್ವದ ರಾಶಿ! ಕೇಳಬೇಕೇ? ಇವರೊಬ್ಬರು ಅತ್ಯುತ್ತಮ ಅಡುಗೇದಾರರು. ಇವರ ಅಡುಗೆಯು ಪತ್ರಿಕೆಯಲ್ಲಿಯೂ ಬರುವ ಹಾಗೆ ಆ ಎಡಿಟರನ್ನ ಒಳಹಾಕುವಷ್ಟು ತಾಕತ್ತು ಇವರಿಗಿದೆ ಅನ್ನಿ. ಮೀನ ರಾಶಿಯ ಅಧಿಪತಿ ಗುರು. ಆಂದರೆ ಸಾಕಷ್ಟು ಬುಧ್ಧಿವಂತರೂ ಕೂಡ. ಇವರನ್ನ ಥಳಿಸಲು ಬುಧನ ತತ್ವದವರೇ ಬೇಕಾಗುತ್ತೆ. ಇಲ್ಲಾ ಅಂದ್ರೆ ಇವರನ್ನ ಕಂಟ್ರೋಲ್ ಮಾಡುವುದು ಅಸಾಧ್ಯ. ಆದರೂ ಸಹ ಇವರ ಬಾಯಿಗೆ ಸಿಕ್ಕಿದರೆಂದರೆ, ಅವರೂ ಕೂಡ ಪಡ್ಚ! ಆದ್ದರಿಂದ ಬುಧ್ಧಿವಂತ ನಡಿಗೆ ಅಂದರೆ ಇವರನ್ನ ಬಹಳ ದೂರ ಇಟ್ಟರೇ ನೀವೆಲ್ಲಾ ಗೆದ್ದಿರಿ. ಆದರೆ ವ್ಯಕ್ತಿ ಬಹಳ ಪರೋಪಕಾರಿ ಅನ್ನಿ. ನಿಮ್ಮ ಕೆಲಸವನ್ನ ಎಂತಹ ಕಲ್ಲನ್ನೂ ಮಾತ್ನಾಡಿಸಿ ಮಾಡಿಸಿ ಬರಲಿಲ್ಲಾ ಅಂದರೆ, ಅವರು ಆಶ್ಲೇಷ ನಕ್ಷತ್ರದವರೇ ಅಲ್ಲ! ಅಷ್ಟೊಂದು ತಾಕತ್ತು, ಅಷ್ಟೊಂದು ಸೌರತ್ತು, ಅಷ್ಟೊಂದು ಮಾತುಗಾರಿಕೆ! ಅವರ ಒಂದು ಕಣ್ಣು ನಿಮ್ಮನ್ನ ಅಥವಾ ಎದಿರುಗಡೆ ಇರುವ್ಅವರನ್ನ ಹಿಪ್ನೋಟಿಸಮ್ ಮಾಡಿಸಿಮ್ ಅವರತ್ತ ಸೆಳೆಸದೇ ಇದ್ದರೆ, ಅವರು ಹಾವಿನ ಜಾತಿಯವರೇ ಅಲ್ಲಾ ಅನ್ನಿ! ಅಷ್ಟೊಂದು ಆ ಕಣ್ಣಿನಲ್ಲಿ ಸೆಳೆತ!

28.                       See Nakshatra is same, but characters are different! How? It is because of each Navamsha spreads in different Rasi!

29.                       ನೋಡಿ ನಕ್ಷತ್ರ ಒಂದೇ, ಆದರೆ ಗುಣಗಳು ಬೇರೆ ಬೇರೆ!

30.                       Normally they are business minded persons. They never come to your house without expecting any profit from you is the secret of the Rashi.

31.                       ಸರ್ವೇ ಸಾಮಾನ್ಯವಾಗಿ ಬುಧನ ತತ್ವದವರೆಲ್ಲಾ ವ್ಯಾಪಾರ ಮನೋಭಾವನೆ ಉಳ್ಳವಾರು. ಅವರು ನಿಮ್ಮ ಮನೆಗೆ ಬರಬೇಕೆಂದರೆ ಏನಾದರೂ ಒಂದು ಲಾಭ ಅವರಿಗೆ ಸಿಗಲೇ ಬೇಕು. ಇದು ಈ ನಕ್ಷತ್ರದವರ ಒಳಗುಟ್ಟು! ಬೇರೊಬ್ಬರಿಗೆ ದಯವಿಟ್ಟು ಹೇಳಿ ನನ್ನ ಹೆಸರನ್ನ ಹಾಳುಮಾಡದಿರಿ.

32.                       Ashlesha -4th Pada people are mostly religious people. There is no God or Goddess are left out in their house, which is not worshiped is the chief nature of these people.

33.                       ಆಶ್ಲೇಷಾ ೪ನೇ ಪಾದದವರು ಬಹಳ ಧಾರ್ಮಿಕ ಪ್ರವೃತ್ತಿಯವರು. ಅವರ ಮನೆಗೆಲ್ಲಿಯಾದರೂ ಹೋದಲ್ಲಿ, ಊರಿನಲ್ಲಿಲ್ಲದ ದೇವರ ಫೋಟೋಗಳೆಲ್ಲಾ ಅಲ್ಲಿ ಕಾಣಸಿಗುತ್ತವೆ. ನಿಮಗನ್ನಿಸಬಹುದು, ಇವರು ದೇವರುಗಳ ಎಕ್ಸಿಬಿಷನ್ನೇನಾದರೂ ಇಟ್ಟಿರುವರೋ ಅಂತ!

34.                       They honor each and every person to their level best and as per their stretch and strengths! For honoring persons, you all should learn from Ashlesha-4th Charan People!. If you go to their house, without a piece of Jacket, and coconut, you will not come back to your house is their special characteristics!

35.                       ಆದರೆ ಇವರಲ್ಲಿ ಒಂದು ಧನಾತ್ಮಕ ಗುಣ ನಾನು ಇಷ್ಟಪಡುತ್ತೇನೆ. ಅವರ ಮನೆಗೆ ಯಾರೇ ಹೋಗಲಿ, ಅವರನ್ನ ತಮ್ಮ ತಾಕತ್ತಿಗೆ ಸರಿಯಾಗಿ ಗೌರವಿಸದೇ ಕಳುಹಿಸುವುದಿಲ್ಲ. ಇದನ್ನ ಎಲ್ಲಾ ಶ್ರೀಮಂತರೂ ನೋಡಿ ಕಲಿಯಬೇಕು. ಅಲ್ಲಾ ಶ್ರೀಮಂತರು ಮಾಡುವುದಿಲ್ಲಾ ಅಮ್ತ ನಾನು ಹೇಳಲಿಲ್ಲ. ಈ ನಕ್ಷತ್ರದವರೇ ಹಾಗೆ. ಕೊನೇ ಪಕ್ಷ ಅರಶಿನ ಕುಂಕುಮ ಮತ್ತು ಬ್ಲೌಸ್ ಪೀಸನ್ನ ಕೊಟ್ಟು ಹೆಂಗಸರ ಆಶೀರ್ವಾದವನ್ನೂ ಪಡೆಯುತ್ತಾರೆ. ಅದರ ಜೊತೆಗೆ ಒಂದು ಕಾಯಿ ಕೂಡ.

36.                       Do you know that it is Serpant’s Nakshatra also. If one look on you will be sufficient to attract you by them! So be careful with them. They may go to any extent for influencing you. But this is in case of mostly, Ashlesha –Sauturn ruled Navamsha People. The same may not be true in case of Ashlesha ruled by Jupiter’s Navamsha. i.e. Ashlesha Pada 1 and Pada 4 people.

37.                       Suppose if you come across such ladies or gents as your neighbors, then grow Bamboos across the border of yours as well as them is the secret advice from me!

38.                       ಒಂದು ವೇಳೆ ಆಶ್ಲೇಷ-೪ನೇ ಪಾದದವರೆಲ್ಲಿಯದರೂ ನಿಮ್ಮ ಪಕ್ಕದ ಮನೆಯವರಾದಲ್ಲಿ, ಅವರ ಮನೆಗೂ ನಿಮ್ಮ ನಎಗೂ ಬಂಬುವನ್ನ ನೆಡಿರಿ. ಬಂಬು ಹಾವಿಗೆ ಇಷ್ಟವಿರುವ ಜಾಗ. ಆಗ ನಿಮಗೆ ಯಾವ ದುರದ್ರಷ್ಟವೂ ತಗಲುವುದಿಲ್ಲ!

39.                       One peculiar thing about them is that they never be grateful to you even if you give them your life for your information, one of somebody’s experience, I want to share here. A noted person who gave Ashlesha Nakshatra ruled lady around 50 blouse pieces. But after a month or a two months gap, she started telling what that person has not given anything to her! Since then, that person kept her at a distance of 10 to 15 miles distance from him!

40.                       ಇಲ್ಲಿ ನಿಮ್ಮೊಡನೆ ಒಬ್ಬನ ಅನುಭವವನ್ನ ನಿಮ್ಮೊಡನೆ ಹಂಚಿಕೊಳ್ಳಬೇಕೆಂದಿರುವೆ. ಆಶ್ಲೇಷ ನಕ್ಷತ್ರದ ೪ ನೇ ಪಾದದ ಸ್ತ್ರೀಗೆ ಒಂದೈವತ್ತು ರವಕೇ ಕಣಗಳನ್ನ ಕೊಡಿಸಿದ. ಆದರೆ ಒಂದು ತಿಂಗಳ ಮೇಲೆ ಆಕೆಯೇ ಯಾವುದೇ ಮಾತಿಗೆ, ಎಲ್ಲಿ ನೀವು ಕೊಟ್ರೀ? ನಾನೇನು ಅಷ್ಟು ಕಡು ಬಡವಳೋ? ನಿಮ್ಮಿಂದ ತೆಗೆದುಕೊಂಡೂ ಹೋಗಲು! ಆವತ್ತಿನಿಂದ ಇವತ್ತಿನವರೆಗೆ ಅವಳ ಹತ್ತಿರ ಈತ ಹೋಗೋದೇ ಬಿಟ್ಟುಬಿಟ್ಟಾ ಅನ್ನಿ. ಇದು ಅವರ ಗುಣಗಳು!

41.                       They try to share your grievances in fact with you whenever incidents happen or they come to your house for helping you whenever, marriage or an auspicious functions will take place in your house and pretend to show utmost sincerity. But in reality it is not so! They come with full battalions and after the functions, they take almost all reminiscent including Sugar, Rice, Wheat flour, Coconuts , dhoti, shirt pieces etc.!

42.                       ಅವರು ನಿಮ್ಮ ಮನೆಗೆಲ್ಲಿಆದರೂ ಯಾವುದೇ ಸಮಾರಂಭಕ್ಕೆ ಬರುವುದಾದರೆ, ಆ ಸಮಾರಂಭವು ಮುಗಿದಮೇಲೆ, ಉಳಿದಂತಹ ಕಾಯಿ, ತರಕಾರಿ, ಅಕ್ಕಿ, ಸಕ್ಕರೆ, ಧೋತಿ, ಬ್ಲೌಸ್ ಪೀಸ್ ಹೀಗೆ ಅದೆಲ್ಲವನ್ನೂ ಮೂಟೆ ಕಟ್ಟಿಸಿಕೊಂಡು ತಲೆಯಮೇಲೆ ಹೊತ್ತುಕೊಂಡೂ ಹೋಗಿಲ್ಲಾ, ಅವರು ಆಶ್ಲೇಷಾ ನಕ್ಷತ್ರದ -೪ನೇ ಪಾದದವರೇ ಅಲ್ಲಾ!

43.                       They are also good leaders of their area and this of course is an inborn character of them. One thing you should be careful about them is that they are hypnotism on others also! They are good attractors of people around them with hypocritical words!

44.                       ಅವರುಗಳು ಅವರ ಏರಿಯಾಕ್ಕೆ ಉತ್ತಮ ಲೀಡರ್ ಕೂಡ. ಅವರಲ್ಲಿ ಹಿಪ್ನೋಟಿಸಮ್ ಮಾಡಿಸುವಂತಹ, ಮಂತ್ರ, ಕೃತ್ತಿಮ ಮಾಡಿಸುವಂತಹ, ನಿಂಬೇ ಹಣ್ಣಿಗೆ ಕುಂಕುಮ, ಅರಶಿನ ಹಾಕಿ ಸುಳಿದು ಬಿಸಾಡುವಂತಹ ದುಷ್ಠ ಶಕ್ತಿಗಳೂ ಉಂಟು! ಹಿಷಾರ್!

45.                       But whatever the negative features of Ashlesha Nakshatra people, they are born luckiest, there are many members of the family to support them and they get public support also and also they are popular on their own potentiality and acts is the plus points of Ashlesha Nakshatra.

46.                       ಆದರೆ ನೀವೇನೇ ಹೇಳಿ, ಆಶ್ಲೇಷ ನಕ್ಷತ್ರದ ೪ನೇ ಪಾದದವರು ಬಹಳ ಪುಣ್ಯಾತ್ಮರು. ತಂದೆ ಇರುವಾಗ ಅವರು ಇವರನ್ನ ಎತ್ತಿದರು. ಇನ್ನು ಇವರ ಅಣ್ಣ , ಅಕ್ಕ ಅಥವಾ ತಂಗಿ ಇದ್ದರೆ ಅವರುಗಳು ಎತ್ತುವರು ಹೀಗೆ  ಅವರ ಜನ್ಮ ಸಾರ್ಥಕವಾಗಿ ನಡೆಯುತ್ತಿರುತ್ತವೆ! ಮತ್ತೆ ಸಂಸಾರದಲ್ಲಿ ಅವರನ್ನೇ ಸಪ್ಪೋರ್ಟ್ ಮಾಡುವುದು ಜಾಸ್ತಿ. ಆದ್ದರಿಂದ ಅವರೊಡನೆ ನೀವೆಲ್ಲಿಯಾದರೂ ಪಂಗಾ ತೆಗೆದುಕೊಂಡ್ರೀ ಜೋಕೆ! ಹುಷಾರ್!

I wish them all success

Dr P Surendra Upadhya, M.Sc., Ph.D (Astrology)

26/07/2017, My Wife’s Birth Day today.

Comments