Why Poorvabhadra-4 is more expansive
and Uttara Phalguni-234 is more business oriented?

1.       Purvabhadra Nakshatra lord is Jupiter, which is Akasha tatwa planet. Akasha tatwa is combined influence of all other four Tatwas like Agni, Vayu, Jala and Prithvi Tatwas. Akasha tatwa is very kind hearted and broad minded one. Again Jupiter is big and for the expansion. Jupiter is also for Knowledge, Dharmk activities and rituals, and so on! Hence Poorvabhadra Nakshatra people are very broad minded and very expansive!

2.       ಪೂರ್ವಾಭಾದ್ರ ನಕ್ಷತ್ರದ ಅಧಿಪತಿ ಬ್ರಹಸ್ಪತಿ. ಆತನು ಆಕಾಶತತ್ವದವನೆಂದು ನಿಮಗೆಲ್ಲಾ ತಿಳಿದೇ ಇದೆ ಅನ್ನಿ.ಈ ಆಕಾಶ ತತ್ವ ಎನ್ನುವುದು ಎಲ್ಲಾ ನಾಲ್ಕು ತತ್ವಗಳಾದ ಅಗ್ನಿ, ವಾಯು, ಪೃಥ್ವೀ ಹಾಗೂ ಜಲತತ್ವದ ಮಿಲ, ಜುಲ ತತ್ವದ್ದು! ಈ ಆಕಾಶತತ್ವವು, ಬೇರವರನ್ನ ಕಂಡು ಐಯ್ಯೋ ಪಾಪ ಎನ್ನುವಂತಹ ಹೃದಯವಿರುವವರು, ಹಾಗೂ ವಿಶಾಲ ಮನೋಭಾವನೆಯ, ಅತೀ ತಿಳಿದಂತಹ ಹಾಗೂ ಅತೀ ಬುಧ್ಧಿವಂತದ ತತ್ವವಾಗಿರುತ್ತೆ. ಇವರಲ್ಲಿ ಧಾರ್ಮಿಕ ಮನೋಭಾವನೆ ತುಂಬಿ ತುಳುಕುತ್ತಿರುತ್ತದೆ. ಇವರುಗಳು ಪೌರೋಹಿತ್ಯ ಕೆಲಸಕ್ಕಾಗಿ , ಟೀಚರ್ ವೃತ್ತಿಗಾಗಿ, ಬೇರವರಿಗೆ ಭೋದನೆಯನ್ನ ಮಾಡಲಿಕ್ಕಾಗಿ, ಅತೀ ಜ್ನಾನವಂತ ತತ್ವದವರು.


3.       But Poorvabhadra 1,2,3 padas are in Kumbha, which is Vayu Tatwa rashi and also the ruler ship of it is Saturn who is for hard work, not for” hera feri” activities. For Iron and steel, for employees class, for Agriculture, for hard works and so on! In fact as a whole Poorvabhadra Nakshatra itself is very broad minded people!

4.       ಆದರೆ ಇದೇ ಪೂರ್ವಾಭಾದ್ರ ಪಾದ ೧,೨ ಮತ್ತು ೩ನೇ ಪಾದಗಳು ಕುಂಭರಾಶಿಗೆ ಬೀಳುತ್ತೆ. ಕುಂಭ ರಾಶಿಯು ಫಿಲೋಸಫರ್ಸ್. ಕುಭ್ಹರಾಶಿಯವರು ಸಾಕಷ್ಟು ತಿಳಿದಂತಹವರು. ಕುಂಭದ ಅಧಿಪತಿ ಶನಿಯು ವಾಯು ತತ್ವದವರು. ಅಂದರೆ ಸಾಕಷ್ಟು ಮಾತನಾಡುವವರ ಗುಂಪಿಗೆ ಸೇರುತ್ಟಾರೆ. ಕುಂಭದ ಪೂರ್ವಾಭಾದ್ರದವರು ಕಾನೂನನ್ನ ಮಾತನಾಡುವಂಟಹ ಜನರು. ಇವರುಗಳು  ಹಾರ್ಡ ವರ್ಕರ್ಸ್. ಇವರುಗಳು ಹೇರಾ ಫೇರಿ ಮಾಡದಂತಹ ಅತೀ ಸಾಧು ಜನರ ಗುಂಪಿಗೆ ಸೇರಿದಂತಹವರು. ಇಡೀ ಪೂರ್ವಾಭಾದ್ರ ನಕ್ಷತ್ರದವರು ಬಹಳ ವಿಶಾಲ ಮನೋಭಾವನೆ ಇದ್ದವರು.


5.       See, in Navamsha Poorvabhadra -1 Pada comes in Aries, Poorvabhadra-2 Pada comes to Taurus, Poorvabhadra -3rd Pada falls on Gemini and the Last 4th Pada , Poorvabhadra comes to again a watery sign Cancer or Karka! First three Rashis are Fiery, Earthy and Watery sign respectively. Accordingly nature changes!

6.       ನವಾಂಶದಲ್ಲಿ, ಪೂರ್ವಾಭಾದ್ರ-೧ ಮೇಶದಲ್ಲಿ ಬರುತ್ತೆ. ಪೂರ್ವಾಭಾದ್ರ -೨ ವೃಷಭದಲ್ಲಿರುತ್ತೆ. ಪೂರ್ವಾಭಾದ್ರ-೩ನೇ ಪಾದವು ಮಿಥುನದಲ್ಲಿ ಬರುತ್ತೆ. ಪೂರ್ವಾಭಾದ್ರ-೪ ನೇ ಪಾದವು ಜಲತತ್ವ ರಾಶಿಯಾದ ಕರ್ಕ ರಾಶಿಗೆ ಬೇಳುತ್ತೆ. ಮೊದಲನೇ ಮೂರು ಪಾದಗಳು ಅಗ್ನಿ, ಪೄಥ್ವಿ, ವಾಯು ಮತ್ತು ನಾಲ್ಕನೇ ಪಾದವು ಜಲ ತತ್ವದ್ದಾಗಿದೆ. ಅಂತೆಯೇ ಅವರವರ ಗುಣಲಕ್ಷಣಗಳೂ ಬದಲಾಯಿಸುತ್ತದೆ.


7.        Poorvabhadra –Pada 1 persons are getting angry much! Since Mars and Saturn involved here, they may be fit people for the defence, police departments or for the security jobs. Poorvabhadra -2nd Pada , Navamsha falls in Prithvi Tatwa Rashi, Taurus! So these people are mixture of Venus and Saturn Karkatwas. They are very jolly type. They spend money like anything along with working for the poor!
8.       ಪೂರ್ವಾಭಾದ್ರ ೧ನೇ ಪಾದದವರು ಬಹಳ ಸಿಸ್ತಿನ ಸರದಾರರಾಗಿ ತಮ್ಮ ಕೆಲಸಗಳನ್ನ ಮಾಡೂವರು. ಇವರುಗಳು ತಮ್ಮ ತಲೆಯನ್ನ ಉಪಯೋಗಿಸಿ ಕೆಲಸವನ್ನ ಮಾಡುವರು.ಇವರ್ರುಗಳಿಗೆ ಕೋಪವು ಮೂಗಿನ ತುದಿಯಲ್ಲಿರುತ್ತೆ. ಇವರುಗಳಿಗೆ ಒಂದು ಜವಾಬ್ದಾರಿತನವನ್ನ ಕೊಟ್ಟಲ್ಲಿ ನೀವು ಶಾಂತಿಯುತರಾಗಿ ಕುಳಿತುತೊಳ್ಳಬಹುದು. ಇವರುಗಳಿಗೆ ಗೌರವವು ಕಾಲ ಬುಡಕ್ಕೇ ಬರುತ್ತದೆ. ಎಲ್ಲಿ ಗುರು ಮತ್ತು ಕುಜನಿರುವನೊ>, ಅಲ್ಲಿ ಗೌರವವು ಅವರ ಹತ್ತಿರ ಓಡೋಡಿ ಬರುತ್ತೆ ಅನ್ನಿ!
9.       ಇನ್ನು ಪೂರ್ವಾಭಾದ್ರ ೨ನೇ ಪಾದದವರು,ಪೃಥಿವೀ ತತ್ವದವರಾದುದರಿಂದ, ಇವರುಗಳು ತಿನ್ನುವುದರಲ್ಲಿ, ಹಾಗೂ ಉಣ್ಣುವುದರಲ್ಲಿ ಬಹಳ ಕಾಳಜಿಯನ್ನ ವಹಿಸಬೇಕಾಗುತ್ತೆ. ಕಾರಣ ಇವರುಗಳು ರಾಶಿ ವೃಷಭದವರಂತೆ. ಗೂಳಿಯಂತೆ ತಿನ್ನುವುದು, ಗೂಳಿಯಂತೆ ಸೋಂಬೇರಿತನವನ್ನ ಬೆಳಸುವುದು. ಆದರೆ ಇಲ್ಲಿ ಒಂದು ಚಂದ ಹಾಗೂ ಒಂದು ಆಯಕಟ್ಟಿರುತ್ತೆ ಅವರ ಕೆಲಸ ಕಾರ್ಯಗಳಲ್ಲಿ. ಇವರುಗಳು ಮಾಡುವ ಅಡುಗೆಯಲ್ಲಿ ಒಂದು ರೀತಿಯ ರುಚಿ ಕೂಡ ಇರುತ್ತೆ. ಇವರುಗಳು ಒಳ್ಳೇ ಮಾತ್ನಡುವ ಕೆಟೆಗರಿಗೆ ಸೇರಿದವರಾಗಿರುತ್ತಾರೆ. ಇಲ್ಲಿ ಶನಿ, ಗುರು ಹಾಗೂ ಶುಕ್ರರು ಸೇರಿರುವುದರಿಂದ ಒಂದು ರೀತಿಯ ವಿತಂಡವಾದವೂ ಸೇರಿರುತ್ತೆ. ಇವರಲ್ಲಿ ವಾದವನ್ನ ಮಾಡಿ ಗೆಲ್ಲಲು ಸಾಧ್ಯವಿಲ್ಲ. ಇವರುಗಳು ಬಡ, ಬಗ್ಗರಿಗಾಗಿ ಕೆಲಸಗಳನ್ನ ಮಾಡುತ್ತಿರುತ್ತರೆ. ಕಾರಣ ಶನಿಯು ಬಡವರಿಗಾಗಿಯೇ ಅನ್ನಿ. ಇವರಲ್ಲಿ ಒಂದು ಶಿಸ್ತುಬದ್ಧ ಜೀವನವುಂಟು. ಕಾರಣ ಶನಿಯು ಶಿಸ್ತುಬಧ್ಧ ಜೀವನಕ್ಕೆ. ಇವರುಗಳಲ್ಲಿ ಒಂದು ನ್ಯಾಯ ಉಂಟು. ಕಾರಣ ಶನಿಯು ನ್ಯಾಯಕ್ಕೆ. ಕಾರಣ ಶನಿಯು ನ್ಯಾಯವನ್ನ ಕೊಡುವ , ಕೊಡಿಸುವಂತಹ ಗ್ರಹ. ಇವರಲ್ಲಿ ಧಾರ್ಮಿಕತೆಯೂ ಉಂಟು. ಕಾರಣ ಗುರು ಗ್ರಹ ಧಾರ್ಮಿಕತೆಗೆ. ಇವರುಗಳಲ್ಲಿ ವಿಷಯಗಳ ಭಂಡಾರ ಉಂಟು. ಕಾರನ ಎಲ್ಲಿ ಗುರು ಮತ್ತು ಶುಕ್ರರಂತಹ ಎರಡು ಮಹಾ ದಿಗ್ಗಜರು ಸೇರಿದರೋ, ಅಲ್ಲಿ ಜ್ನಾನಕ್ಕೆ ಕೊರತೆಯೇ ಇರುವುದಿಲ್ಲ.

10.    The 3rd Pada of Poorvabhadra, falls in Gemini Navamsha, which is Vayu Tatwa Rashi. Here both Mercury, the ruler of Gemin and Saturn the ruler of Capricorn and Aquarius are of Vayu Tatwa only! Hence these people are very dangerous indeed. You cannot have trust in them! Their talk will be like talk in the Air only. If they say  I will do it, please do not believe them at all! The same is not in the case of Poorvabhadra -4 , Navamsha people. Because of Jala Tatwa rashi, cancer, they act very fast! Their thinking, their decisions are very quick!

11.    ಪೂರ್ವಾಭಾದ್ರದವರ ಮೂರನೇ ಪಾದವು ಮಿಥುನಕ್ಕೆ ಬೀಳುತ್ತದೆ. ಅಂದರೆ ಇಲ್ಲಿ ಗುರು, ಶ್ನಿ ಮತ್ತು ಬುಧರ ಸಮಾಗಮ ಉಂಟಂತಾಯಿತು. ಇಬ್ಬರು ವಾಯು ತತ್ವದವರು ಹಾಗೂ ಒಬ್ಬ ಆಕಾಶ ತತ್ವದವರ ತ್ರಿವೇಣಿ ಸಂಗಮ ಇಲ್ಲಿಉಂಟು! ಆಗ ಒಂದು ಮಾತಿನ ಸಮ್ಮೇಳನವೇ ಇಲ್ಲಿ ಉಂಟು. ಇಲ್ಲಿ ಜ್ನಾನವು  ಸುಲಭವಾಗಿ ಹರಿಯುತ್ತೆ. ಇಲ್ಲಿ ಜ್ಯೋತಿಷ್ಯದ ಭಂಡಾರವೇ ಇರುತ್ತದೆ. ಇಲ್ಲಿ ನೀವು ಇವರುಗಳನ್ನ ನಂಬುವ ಹಾಗಿಲ್ಲ. ಕಾರಣ ಶನಿ ಮತ್ತು ಬುಧರ ಸಂಯೋಗ! ಎಲ್ಲಾ ಗಾಳಿಯಲ್ಲಿಯೇ ತುಪಾಕಿ ಬಿಡೂವವರ ಗುಂಪು! ಅಲ್ಲಾ ನೀವುಗಳು ಬೇಸರವನ್ನ ಮಾಡಿಕೊಂಡೀರ! ಹಾಗೆ ಮಾಡಬೇಡಿ. ಇದು ನನ್ನ ತಲೆಯೈಂದ ಹೊರಡುವ ಜ್ನಾನದ ಹೊಳೆ. ಅದೆಷ್ಟು ನಾನು ಜ್ನಾನವನ್ನ ಹೀರಿಕೊಂಡೀದ್ದೇನೋ, ಅದೆಷ್ಟು ನನ್ನ ಮೇಲೆ ನನ್ನ ಹಿರಿಯರ ಆಶೀರ್ವಾದಗಳ ಸುರಿಮಳೆ ಉಂಟೋ, ಅದೆಷ್ಟು ದೇವರ ಆಶೀರ್ವಾದವೂ ಉಂಟೋ ಅಷ್ಟೇ ಜ್ನಾನವು ನಿಮ್ಮಗಳಿಗೆ ಸಿಗುತ್ತೇ ಅನ್ನಿ! ಒಂದು ಕಿವಿ ಮಾತು ನಿಮಗೆ ಈ ಪೂರ್ವಾಭಾದ್ರ-ಪಾದ ೩ ರವರು ಎಲ್ಲಿಯಾದರೂ ಸಿಕ್ಕಿ, ನಾನು ಮಾಡುತ್ತೇಬೆಂದು ನಿಮ್ಮ ಕೆಲಸಗಳನ್ನ ತೆಗೆದುಕೊಂಡರೋ?, ಅವರುಗಳ ಮೇಲೆ ಮೂರು ಕನ್ಣೂಗಳನ್ನ ಇಟ್ಟೀರಿ. ಕಾರಣ ಅವರುಗಳನ್ನ ನಂಬಲೇ ಬೇಡಿರಿ! ಇನ್ನು ಪೂರ್ವಾಭಾದ್ರ-೪ನೇ ಪಾದದ ಜನರು ಜಲ ರಶಿಯಾದ ಕರ್ಕಕ್ಕೆ ಬೀಳುವರು. ಇವರುಗಳ ಯೋಚನೆ, ಕೆಲಸ ಬಹಳ ಕ್ವಿಕ್ ಆಗಿರುತ್ತೆ. ಕಾರಣ ಚಂದ್ರನ ಮೂಮೆಂಟ್ಸೇ ಅಷ್ಟೆ. ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಬರೇ ೨ ೧/೨ ದಿನಗಳನ್ನ ಮಾತ್ರ ತೆಗೆದುಕೊಳ್ಳುತ್ತಾನೆ. ಹಾಗೆಯೇ ಇವರ ಕೆಲಸ ಕಾರ್ಯಗಳೂ ಸಹ. ಇವರು ನೋಡಲು ಬಹಳ ಸುಂದರರಾಗಿರುತ್ತಾರೆ. ಗುಂಡಗೆ ಕಾಣಿಸಿಕೊಳ್ಳುತ್ತಾರೆ. ಕಾರಣ ಗುರುವಿನ ನಕ್ಷತ್ರದವರಲ್ಲವೇ? ಚಂದ ಏತಕ್ಕೆ, ಚಮ್ಡ್ರನು ರಶಿಯ ಒಡೆಯ ಅಲ್ಲವೇ?

12.    Equally Saturn and Moon combinations. Saturn is cold planet and so also Moon. SO these people are having problems related to water related, blood related etc. They are pruned to cough and cold problems. They have Phsychological problems also! If they are working in an industry and if they are heading personal departments, definetly there will be more and more show causes and charge sheets and dismissals also! It is because of erratic behavior as well as Saturn’s power of the punishments! Saturn is for the Justice!. But while doing they commit so many mistakes also! Since it is controlled by the fastest moving planet, Moon, there is hasty in their actions! So they may punish sometimes innocents also! This is very dangerous! In our astrological theory, if you do so, you may get their “Shrap” which may force you to receive yourselves ulta Charge Sheets! Be careful!

13.   ಇಲ್ಲಿ ಶನಿ ಮತ್ತು ಚಂದ್ರನ ಸಮಾಗಮ! ಅಂದರೆ ಒಂದು ಕೋಲ್ಡ್ ಪ್ಲೇನೆಟ್, ಹಾಗೂ ಇನ್ನೊಂದು ಕೂಡ ಥಂಡಿ ಪ್ಲೇನೆಟ್! ಕೇಳಬೇಕೇ? ಇವರುಗಳಿಗೆ ಯಾವಾಗಲೂ ಕಂಡರೆ ಕೆಮ್ಮು, ಶೀನು, ನೆಗಡಿ, ಅಸ್ತ್ಮಾ ತೊಂದರೆಗಳು ಸುತ್ತುಕೊಂಡೇ ಇರುತ್ತೆ! ಇವರುಗಳು ಡಿಪ್ರೆಷನ್ ಪೇಷಂಟ್ಸ್ ಅಂತ ನೂರಕ್ಕೆ ನೂರು ಹೇಳಬಹುದು. ಕಾರಣ ಚಂದ್ರ! ಚಂದ್ರನು ಮನೋಕಾರಕನೆಂದು ಇಷ್ಟರಲ್ಲಿಯೆ ನಿಮಗೆಲ್ಲಾ ಮನದಟ್ಟಾಗಿರಬೇಕಲ್ಲಾ? ಇವರುಗಳಲೆಲ್ಲಿಯಾದರೂ ಪೆರ್ಸನಲ್ ಡಿಪಾರ್ಟ್ಸ್ಮೆಂಟನ್ನ ಹೇಂಡಲ್ ಮಾಡುತ್ತಿದ್ದಲ್ಲಿ, ಅಲ್ಲಿ ಜಾಸ್ತಿ ಶೋಕಾಸ್ ನೋಟೀಸುಗಳು, ಚಾರ್ಜ್ ಶೀಟುಗಳಿರುತ್ತವೆ. ಯಾತಕ್ಕೆಂದರೆ, ಶನಿಯು ಶಿಕ್ಷೆಗೆ ಅಧಿಕಾರಿ! ಆದರೆ ಇಲ್ಲಿ ಎಂಪ್ಲೋಯೀ ಪೇನೆಲ್ಲುಗಳಿಗೆ ಜಯ ಉಂಟು! ಕಾರಣ ಹಾಗೆ ನೋಟೀಸುಗಳನ್ನ ಕೊಡೂವಾಗ ಸುಮಾರು ತಪ್ಪುಗಳನ್ನ ಇವರುಗಳು ಕಮಿಟ್ ಮಾಡುತ್ತಿರುತ್ಟಾರೆ. ಇದಕ್ಕೆ ಚಂದ್ರನೇ ಕಾರಣ. ಅವನು ಬಹಳ ವೇಗವಾಗಿ ಹೋಗುವ ಗ್ರಹವಲ್ಲವೇ? ಹಾಗೂ ಶನಿಯೂ ಎಂಪ್ಲೋಯೀ ಪರನಲ್ಲವೇ? ಆದ್ದರಿಂದ ಇಲ್ಲಿ ಯೂನಿಯನ್ ಲೀಡರ್ಸುಗಳಿಗೆ ಜಯ ಉಂಟು! ಇಲ್ಲಿ ಇವರುಗಳು ಒಂದು ತಪ್ಪನ್ನ ಖಂಡಿತ ಮಾಡುತ್ತಿರುತ್ತಾರೆ. ಅದು ಏನೆಂದರೆ ನಿರಪರಾಧಿಗಳಿಗೂ ಅಧಿಕಾರದ ದರ್ಪದಿಂದಾಗಿ ಶಿಕ್ಷೆಯನ್ನ ಕೊಡಲು ಹಾತೊರ್ಯುತ್ತಿರುತ್ತಾರೆ. ಹಾಗೆ ಆದಮೇಲೆ ಇವರುಗಳಿಗೆ ಶ್ರಾಪ ತಟ್ಟದೇ ಇರುತ್ತದೋ? ಇದರಿಂದಾಗಿ ಈ ಚಾರ್ಜ್ ಶೀಟ್ಸುಗಳನ್ನ ಕೊಟ್ಟವರಿಗೇ ಚಾರ್ಜ್ಶೀಟ್ಸ್ ಸಿಗಬಹುದು! ನಾನು ಯಾತಕ್ಕೆ ಹೇಳುತ್ತಿದ್ದೇನೆಂದರೆ ನಮ್ಮ ಬ್ಯಾಂಕಿನಲ್ಲಿಯೂ ಹೀಗೆಯೇ ಪೂರ್ವಾಭಾದ್ರ ಪದ ೩ ರವರ ಕಥೆ ನಡೆದಿದೆ ಅನ್ನಿ! ಈಗ ಅವರಿಗೆ ಪಸ್ಚಾತ್ತಾಪ ಉಂಟೆಂತ ನಾನು ಭಾವಿಸುತ್ತೇನೆ! ಈಗ ಅದೇ ಪೂರ್ವಾಭಾದ್ರದ ಮೂರನೇ ಪಾದದವರು ಮಿಥುನ ಲಗ್ನದವರ ಶರಣು, ಅಂದರೆ ಜ್ಯೋತಿಷ್ಯರ ಶರಣು ಬಂದಿದ್ದಾರೆ ಅಂದರೆ ನೀವುಗಳು ನಂಬುವಿರಾ? ಆದ್ದರಿಂದ ನಿಮಗೆಲ್ಲಾ ಕಿವಿ ಮಾತು. ಎಲ್ಲಿ ಶನಿ-ಗುರು-ಚಂದ್ರರ ಸಂಯೋಗ ಇರುತ್ತದೋ, ಅಲ್ಲಿ ನೀವುಗಳು ಜಾಗರೂಕರಾಗಿರಿ. ನಿಮ್ಮ ನಿಮ್ಮ ಕೆಳಗಡೆ ಇರುವಂತಹ ಕಾರ್ಮಿಕರನ್ನ ಸುಮ್ಸುಮ್ನೆ ದಂಡಿಸಲು ಹೋಗಿ ನೀವುಗಳು ಅವರುಗಳ ಶ್ರಾಪಕ್ಕೆ ಗುರಿಯಾಗದಿರಿ.

14.   Again Poorvabhadra -4 , Navamsha people are having one set of mind that they are always right and others are wrong! It is not their mistake. It is because of the ruler ship Saturn’s! One type of rudeness comes to them. This is dangerous as it leads to many enemies in the societies. So melt down my dear Poorvabhadra-4 people!

15.   ಇನ್ನೊಂದು ತೊಂದರೆ ಈ ಪೂರ್ವಭಾದ್ರಪದ ನಕ್ಷತ್ರದ ೪ನೇ ಪಾದವರಿಗೆ.ಇವರಲ್ಲಿ ಒಂದು ಮೈಂಡ್ಸೆಟ್ ಉಂಟು. ಅದು ಏನಂತ ನನ್ನನ್ನ ಕೇಳಿದಲ್ಲಿ, ಅವರುಗಳು ತಾವೇ ಸರಿ ಎನ್ನುವ ಒಂದು  ದುರಹಂಕಾರಿತನ! ಇದಕ್ಕೆ ಕಾರಣ ಶನಿಯೇಈ ನಕ್ಷತ್ರವನ್ನ ಆಲುವಂತಹ ರಾಶಿಯ ಅಧಿಪತಿ! ಈ ಶನಿಯು ಒಂದು ರೀತಿಯ ಕಠಿಣತ್ವವನ್ನವ್ಯಕ್ತಿಗಳಲ್ಲಿ ವೃಧ್ಧಿಸುತ್ತದೆ. ಇದು ಅವರಿಗೇ ಬಹಲ ಕೇಡಾಗಿ ಪರಿಣಮಿಸುತ್ತದೆ. ಇದಕ್ಕೆ ಕರಣ ನೀವುಗಳು ಸಿಕ್ಸಿಸುವ ಎದಿರಿನ ವ್ಯಕ್ತಿ ಎಷ್ಟು ಶುಧ್ಧವಿದ್ದಾರೆಂದು?. ಆದ್ದರಿಂದ ಅವರೆಲ್ಲರಿಗೂ ಒಂದು ಕಿವಿ ಮಾತು ಏನೆಂದರೆ, ಕೂಲ್ ಡೌನ್ ಪ್ಲೀಸ್. ಪ್ರಪಂಚದಲ್ಲಿ ತಪ್ಪು ಯಾರು ತಾನೇ ಮಾಡುವುದಿಲ್ಲ. ಕರೆದು ಗುರುವಿನ ಉಪದೇಶ ಕೊಡಿ. ನಿಮ್ಮಲ್ಲಿ ಜ್ನಾನವಿದೆ. ಅದೂ ಗುರುವಿನದ್ದು. ಕರೆದು ವಿಚಾರಿಸಿ. ಹತ್ತು ಜನರನ್ನ ಕೇಳಿ ಅವ್ಅರ ಬಗ್ಗೆ ಪರಾಂಬರಿಸಿರಿ. ಆವಾಗಲೇ ನಿಮಗೆ ಸಿಕ್ಕುವುದು ಸತ್ಯದ ಸಂಗತಿ. ಆಮೇಲೆ ನಿಮ್ಮ ನಿರ್ಣಯವನ್ನ ಕೊಡಿರಿ. ಆವಾಗಲೇ ನೀವುಗಳು ಜೀವನದಲ್ಲಿ ಸಕ್ಸಸ್ ಆಗೋದು!


16.   Poorvabhadra Nakshatra as a whole a mixture of Saturn’s Karakas and Jupiter’s Karakas.
17.   ಓಟ್ಟಾರೇ ಪೂರ್ವಾಭಾದ್ರ ನಕ್ಷತ್ರವು ಶನಿ, ಗುರುವಿನ ಸಮ್ಮಿಶ್ರಣ ಸರ್ಕಾರ!

18.   Whereas, Uttaraphalguni Nakshatra people are egoistic, just because of its lord is Sun and also very hard working and knowledgeable people! But Uttara Phalguni Nakshatra also in Virgo and hence it comes under the ruler ship of Mercury, the Karaka Planet for intelligence, Interpretation, Communication, for Computer, For Astrology, for Business , and so on!

19.   ಇಲ್ಲಿ ನಾವು ಉತ್ತರಫಲ್ಗುಣಿ ನಕ್ಷತ್ರದವರನ್ನ ಇವರ ಜೊತೆಯಲ್ಲಿ ಕಮ್ಪೇರ್ ಮಾಡಿದಲ್ಲಿ, ಉತ್ತರಫಲ್ಗುಣಿ ನಕ್ಷತ್ರದವರು ಅಹಂಕಾರಿಗಳು. ಕಾರನ ರ ನಕ್ಷತ್ರಾಧಿಪತಿ ರವಿ, ಪ್ರಕಾಷಕ ಗ್ರಹ! ಅವರುಗಳು ಬಹಳ ಹಾರ್ಡ ವ್ರ್ಕಿಂಗ್  ಮತ್ತು ಅತೀ ಬುಧ್ಧಿವಂತರು. ಕಾರನ ಇಲ್ಲಿ ಬುಧನು ಉಛ್ಛ ಕನ್ಯಾ ರಾಶಿಯಲ್ಲಿ! ಬುಧನು ಬುಧ್ಧಿಗೆ, ವಿದ್ಯಕ್ಕೆ, ಜ್ಯೋತಿಷ್ಯಕ್ಕೆ, ಮಾತಿಗೆ , ಕಂಪ್ಯೂಟರ್ ವಿದ್ಯಕ್ಕೆ ಕಾರಕ ಗ್ರಹ. ಬುಧನು ಸ್ನೇಹಕ್ಕೂ ಕಾರಕ ಗ್ರಹ. ಪೂರ್ವಾಭಾದ್ರ ನಕ್ಷತ್ರದವರಲ್ಲಿ ಸ್ನೇಹಿತರು ಅವರ ಅಧಿಕಾರದಿಂದಾಗಿ ಅದರ ಒಂದು ಕಖ್ಷೆಯಲ್ಲಿ ಹುಟ್ಟುವಂತಾ ಜನರು. ಆದರೆ ಉತ್ತರಫಲ್ಗುಣಿಯವರಲ್ಲಿ ಅವರ ನಕ್ಷತ್ರಾಧಿಪತಿ ಬುಧನಿಂದ ಹುಟ್ಟುವಂತಹವರು. ಪೂರ್ವಾಭಾದ್ರದವರ ಸ್ನೇಹಿತರಲ್ಲಿ ಗುಲಾಮಗಿರಿ ಉಂಟು! ಆದರೆ ಉತ್ತರಫಾಲ್ಗುಣಿ ನಕ್ಷತ್ರದವರಲ್ಲಿ ವಿಧೇಯಕತೆ ಹಾಗ್ಯ್ ಕಮ್ಮಿಟ್ಮೆಂಟ್ಸ್ ಉಂಟು. ಎಷ್ಟೊಂದು ವ್ಯತ್ಯಾಸ ನೋಡಿ!


20.   Uttara Phalguni -1 pada is in Leo which is ruled by Sun who is the Karaka for health, ego, ruling, energy, father and so on.
21.   ಉತ್ತರಫಾಲ್ಗುಣಿ ನಕ್ಷತ್ರ ಪಾದ ೧ ರವರು ಸೂರ್ಯನ ಅಧಿಪತಿಯಲ್ಲಿಯೇ ಬರುತ್ತರೆ. ಕಾರನ ಅದು ಸಿಂಹ ರಾಶಿಗೆ ಬೀಳುತ್ತೆ. ಸೂರ್ಯನು ಅಧಿಕಾರಕ್ಕೆ, ಆಡಳಿತಕ್ಕೆ, ದರ್ಪಕ್ಕೆ, ತಂದೆಗೆ, ಸರ್ಕಾರಕ್ಕೆ ಕಾರಕ ಗ್ರಹ.

22.   Leo is also fiery sign and Virgo is earthy sign. Hence Uttaraphalguni Nakshatra is the mixture of Fiery and Earthy. They are for the rulers also. They are for the business also! We can see this kind of mixture in our Late Prime Minister, Sri Rajiv Gandhi, who born on 20th Aug., 1944 in Uttara Phalguni Nakshatra-2.

23.   ಸಿಂಹ ರಾಶಿಯು ಅಗ್ನಿ ತತ್ವದ ರಾಶಿ, ಕನ್ಯಾ ರಾಶಿಯು ಪೃಥ್ವಿ ತತ್ವದ ರಶಿ. ಆದ್ದರಿಂದ ಈ ನಕ್ಷತ್ರದಲ್ಲಿ ಅಗ್ನಿ ಮತ್ತು ಪೃಥ್ವೀ ತತ್ವದ ಒಂದು ಸಂಗಮ ಉಂಟೂ. ಅದೇ ಪೂರ್ವಾಭಾದ್ರಪದದಲ್ಲಿ ವಾಯು ಮತ್ತು ಜಲ ತತ್ವದ ಸಂಗಮ ಉಂಟು. ಉತ್ತರಾ ಫಾಲ್ಗುಣಿ ನಕ್ಷತ್ರದವರು ಒಳ್ಳೇ ಸಣ್ನ ತರಹದ ವ್ಯಾಪಾರಿಗಳು!ಬುಧನ ಬುಧ್ಧಿ ಹಾಗೂ ವಿದ್ಯ ಮತ್ತು ಮಾತುಗಾರಿಕೆ ಇದ್ದಂತಹವರು. ಇದನ್ನ ನಾವುಗಳು ನಮ್ಮ ದಿವಂಗತ ಪ್ರಧಾನಿ, ಶ್ರೀ ರಾಜೀವಗಾಂಧಿಯವರಲ್ಲಿ ನೋಡಬಹುದು.


24.   Our Holla VP and Urala ApR are belonging to P.Bhadra-4. We can see in both the mixture of Saturn’s and Jupiter’s characteristics. Both are hard workers and came up from the scratch. Both are very helpful to others either in teaching or in helping. Hence, these persons, are either interested in astrology or in religious related works!
25.   ನಮ್ಮಲಿಯೇ ಇರುವಂತ ಇಬ್ಬರು ಗಣ್ಯರಾದ ಹೊಳ್ಳ ವಿ.ಫಿ ಹಾಗೂ ಉರಾಳ ಎಪಿಆರ್ ಅವರು ಈ ಪೂರ್ವಾಭಾದ್ರ-ಚರಣ ೪ರವರು. ಇವರಲ್ಲಿ ನಾವುಗಳು ಗುರು ಮತ್ತು ಶನಿಯ ಗುಣಗಳ ಮಿಶ್ರಣವನ್ನ ನೋಡಬಹುದು! ಇಬ್ಬರೂ ಸಹ ಕಠಿಣ ಪರಿಶ್ರಮದಿಂದಾಗಿ ಮೇಲಕ್ಕೆ ಬಂದಂತಹ ಜನರು! ಇಬ್ಬರೂ ಕಡು ಬಡಸ್ತಿಕೆಯಿಂದ ಮೇಲಕ್ಕೆ ಬಂದವರು. ಇಬ್ಬರೂ ಸಾರ್ವಜನಿಕರಿಗೆ  ಸಹಾಯ ಹಸ್ತವನ್ನ ನೀಡುವಂತಹವರು. ಯಾತಕ್ಕೆ ಇಲ್ಲಿ ಹೇಳಿದೆ ಅಂದರೆ ನಕ್ಷತ್ರಗಳಲ್ಲಿ ವ್ಯತ್ಯಾಸಗಳು ಏತಕ್ಕೆ ಬರುತ್ತವೇ ಎನ್ನುವುದೌ ನಿಮಗೆ ತಿಳಿದಿರಲೀ ಎಂದು ಹೇಳಿದೆ ಅಷ್ತೇ

By Dr. P Surendra Upadhya, M.Sc., Ph.D (Astrology)

15/07/2017

Comments

Popular Posts