ಶ್ರವಣ ನಕ್ಷತ್ರ Sravana Nakshatra


 SRAVANA NAKSHATRA

ಶ್ರವಣ ನಕ್ಷತ್ರ

1.             ಶ್ರವಣ ನಕ್ಷತ್ರದ ಅಧಿಪತಿ ಚಂದ್ರ.

2.             Sravana Nakshatra which begins with 10 degrees and ends at 23:30 degrees in Makara or Capricorn zodiac and is ruled by Moon throughout and expressed in the symbol of 3 footprints.

3.              ಶ್ರವಣ ನಕ್ಷತ್ರವು ೧೦ ಡಿಗ್ರಿಯಿಂದ ೨೩.೩೦ ಡಿಗ್ರಿಯವರೆಗೆ ಮಕರ ರಾಶಿಯಲ್ಲಿ ಈ ನಮ್ಮ ಜೋಡೀಯಾಕಿನಲ್ಲಿರುತ್ತೆ.

4.             This is the divine arena of deity Saraswati’s birth which makes this arena shine with the brilliance of wisdom and knowledge and it stands upon the heights of education and proficiency.

5.             ಇದು ಸರಸ್ವತಿಯ ಜನ್ಮ ಕ್ಷೇತ್ರ. ಇದು ವಿದ್ಯಾ ನಕ್ಷತ್ರ. ಇದು ಬುಧ್ಧಿವಂತಿಕೆಯ ನಕ್ಷತ್ರ. ಇದು ತಿಳುವಳಿಕೆಯ ನಕ್ಷತ್ರ. ಇದು ಯಾವುದೇ ಕ್ಷೇತ್ರದಲ್ಲಿ ಮಾಡುವಂತಹ ಪ್ರೊಫೀಸಿಯನ್ಸಿಯ ನಕ್ಷತ್ರವಾಗಿರುತ್ತೆ. ಆದ್ದರಿಂದ ಶ್ರವಣ ನಕ್ಷತ್ರದವರೆಲ್ಲಾ ಶಾಂತಿಯಿಂದ ಕಲಿತುಕೊಳ್ಳುವ ವರ್ಗಕ್ಕೆ ಸೇರಿದಂತಹ ಜನರಿವರು.

6.             The people of Sravana Nakshatra are truly intellectual and intelligent .
7.             They are the true personalities with immense stability of mind, purity of soul, affectionate heart, humanitarian approach, true in attitude.

8.             ಇವರುಗಳ ಹೃದಯವು ಬಹಳ ಶುಧ್ಧವಾದದ್ದು. ಬಹಳ ಪ್ರೀತಿಯ ಹೃದಯ ಇದ್ದಂತಹವರು. ಇವರುಗಳಿಗೆ ಕ್ರಿಮಿನಲ್ ಏನೂ ಅಂತಲೇ ತಿಳಿಯದವರು. ಇವರುಗಳಿಗೆ ಮನುಷ್ಯತ್ವ ಏನೂ ಅಂತ ತಿಳಿದಿದೆ.

9.             These people will receive love and respect upon land and are good speakers in the end.

10.     ಈ ನಕ್ಷತ್ರದವರಿಗೆ ಗೌರವ ಮತ್ತು ಪ್ರೀತಿ ತಾನಾಗೆಯೇ ಸಿಗುತ್ತದೆ. ಹಾಗೂ ಇವರುಗಳು ಒಳ್ಳೇ ಮಾತನಾಡುವವರು.

11.     ಶ್ರವಣ ನಕ್ಷತ್ರದ ಜನರಿಗೆ ಒಂದು ರೀತಿಯ ಇನ್ಟ್ಯೂಷನ್ ಶಕ್ತಿಇರುತ್ತೆ ಅಂದರೆ ತಪ್ಪಾಗದು. ಇದು ಚಂದ್ರನ ನಕ್ಷತ್ರವಾದ್ದರಿಂದ, ಬಹಳ ಶಾಂತಿಯುತರಾಗಿರುತ್ತಾರೆ.

12.     ಶ್ರವಣ ನಕ್ಷತ್ರದ ರಾಶಿ ಅಧಿಪತಿ ಶನಿಯಾದುದರಿಂದ, ಇವರು ಬಹಳ ಕಠಿಣ ಶ್ರಮವನ್ನ ವಹಿಸುವ ಜನರು. ಶನಿಯು ಒಂದು ರೀತಿ ಯಾರನ್ನಾದರೂ ಹಿಡಿದಲ್ಲಿ, ಬಿಡೋದೇ ಇಲ್ಲ. ಆತನಿಗೆ ಸಾಡೇ ಸಾತಿಯಲ್ಲಿಯೂ ಕೂಡ ಕೆಲವರಿಗೆ ವರುಷಗಳೂ ಸತಾಯಿಸುವುದುಂಟು. ಇವರೂ ಕೂಡ ಹಾಗೆಯೇ. ಇವರೆಲ್ಲಿಯಾದರೂ ಸಿ..ಡಿ ಅಥವಾ ವಿಜಿಲೆನ್ಸಿನಲ್ಲಿ ಇದ್ದರೆ, ಹುಡುಕುತ್ತಾ, ಕೆದಕುತ್ತಾ ಇರುತ್ತಾರೆ. ನನ್ನ ಒಬ್ಬ ಸ್ನೇಹಿತನು ಬೇಂಕಿನಲ್ಲಿ ವಿಜಿಲೆನ್ಸ್ ಡಿಪಾರ್ಟ್ಮೆಂಟಿನಲ್ಲಿದ್ದು ಬೇರವರ ತಪ್ಪುಗಳನ್ನ ಕೆದಕುತ್ತಾ ಮೆನೇಜ್ಮೆಂಟಿಗೆ ರಿಪೋರ್ಟ್ ಮಾಡುತ್ತಿದ್ದ. ಆತನು  ಶ್ರವಣ ನಕ್ಷತ್ರದವನೇ ಇರಬೇಕೆಂತ ನನ್ನ ಅಭಿಪ್ರಾಯ. ಅವನಿಗೆ ನಾನೇ ಹೇಳಿದ್ದೆ. ಇದೆಲ್ಲಾ ಯಾತಕ್ಕೋ ಮಹಾರಾಯ. ಬೇರವರ ಶ್ರಾಪಕ್ಕೆ ನೀನು ಏತಕ್ಕೆ ಗುರಿಯಾಗುತ್ತಿಯಾ? ಅಂತ. ಆದರೆ ಆತನು ಕೇಳಿದರೆ ತಾನೆ? ಕೊನೆಯಲ್ಲಿ ಆತನೇ ಬೇಂಕಿನಿಂದ ತ್ಯಾಗ ಪತ್ರವನ್ನ ಕೊಡುವಂತಾಯಿತು ಅದೂ ಆತನ ಕಟ್ಟ ಕೊನೆಯ ಕಾಲದಲ್ಲಿ. ಹೋಗಲಿ, ವಲ್ಯೂಂಟೀರ್ ತ್ಯಾಗಪತ್ರವನ್ನಾದರೂ ಕೊಟ್ಟಿರುವನೋ ಅಂತ ಕೇಳಿದರೆ, ಅದನ್ನೂ ಕೊಟ್ಟಿರಲಿಲ್ಲ! ಹಾಗಾಗಿ ಆತನಿಗೆ ಪಿಂಚಣಿ ಬರುವುದು ನಿಂತು ಹೋಯಿತೆನ್ನಿ. ಸುಮಾರು ರೂ.೩೦೦೦೦.೦೦ವನ್ನ  ಆತನೇ ಸ್ವಯಾರ್ಜಿತದಿಂದಾಗಿ ಕಳೆದುಕೊಂಡ. ಇದು ಶ್ರವಣ ನಕ್ಷತ್ರದ ಬುಧ್ಧಿವಂತಿಕೆಯ ಪರಮಾವಧಿಯೋ ಅಂತ ನಾನು ಅವನನ್ನೇ ಕೇಳಬೇಕಾಗಿದೆ. ಈಗಲೂ ನಾನು ಅವನು ಏತಕ್ಕೆ ಹೀಗೆ ಮಾಡಿರುವ?  ಇದಕ್ಕೆ ನನಗೆ ಈ ನಕ್ಷತ್ರದಲ್ಲಿ ಏನಾದರೂ  ತೊಂದರೆ ಇದೆಯೋ ಅಂತ ಈಗಲೂ ಹುಡುಕಾಡುತ್ತೇನೆ. ಆದರೆ ನನಗೇನೂ ಕಾಣಿಸೋಲ್ಲ ಬಿಡಿ. ಇದು ವ್ಯಕ್ತಿಗತ ನಿರ್ಣಯವೆಂದು ಸುಮ್ಮನಾದೆ. ನನಗಂತೂ ಅಯ್ಯೋ ಪಾಪ ಅನ್ನಿಸುತ್ತೆ, ಅವನನ್ನ ನೋಡಿದಾವಾಗಲೆಲ್ಲ!

13.     ಶ್ರವಣ ನಕ್ಷತ್ರದ ಮೊದಲನೇ ನವಾಂಶವು ಮೇಶದಲ್ಲಿದ್ದರೆ, ಎರಡನೇ ನವಾಂಶವು ವೃಷಭ ರಾಶಿಗೆ ಬೀಳುತ್ತೆ. ಅದೇ ಮೂರನೇ ನವಾಂಷವು ಮಿಥುನಕ್ಕೆ ಬಿದ್ದಲ್ಲಿ, ನಾಲ್ಕನೇ ಪಾದವು ಕರ್ಕ ರಾಶಿಗೆ ಬೀಳುತ್ತೆ. ಈ ಮಿಥುನದಲ್ಲಿ ಬಿದ್ದಿರುವ ಶ್ರವಣ ನಕ್ಷತ್ರದ ನವಾಂಶದವರು ಬಹಳ ಬುಧ್ಧಿವಂತರು. ಇವರುಗಳಲ್ಲಿ ಮಾತಿಗೇನೂ ಕೊರತೆ ಇಲ್ಲ.ಈ ಮೂರನೇ ಪಾದದವರು ಜ್ಯೋತಿಷ್ಯ ಶಾಸ್ತ್ರದಲ್ಲಿಯೂ ಬಹಳ ನಿಸ್ಸೀಮರು. ಇವರಿಗೆ ಒಂದು ತರಹದ ಇಂಟ್ಯೂಷನ್ ಪವರ್ ಇರುತ್ತೆ! ಎಲ್ಲಿ ಚಂದ್ರ ಮತ್ತು ಬುಧನಿರುವರೋ, ಅವರು ಜ್ಯೋತಿಷ್ಯ ಶಾಸ್ತ್ರ ಇರಲೇ ಬೇಕು! ನಾನು ಕೂಡ ಮಿಥುನ ಲಗ್ನ, ಹಾಗೂ ರೋಹಿಣೀ ನಕ್ಷತ್ರದವ. ಆದ್ದರಿಂದಲೇ ಡಾಕ್ಟೊರೇಟ ಡಿಗ್ರೀಯನ್ನ ಜ್ಯೋತಿಷ್ಯದಲ್ಲಿ ಈ ವರುಷದ ಫೆಬ್ರುವರೀ ೨೦ ರಂದು ನಯೀ ದೆಹಲಿ ಶ್ರೀ ಆದ್ಯ ಕಾತ್ಯಾಯನೀ ಮಂದಿರ, ಛತ್ರಾಪುರದ ಸಭಾಂಗಣದಲ್ಲಿ ತೆಗೆದುಕೊಂಡೀರುತ್ತೇನೆ. ಶ್ರವಣ ನಕ್ಷತ್ರದ  ಒಡೆಯ ಚಂದ್ರ. ಆದರೆ ಚಂದ್ರನಿಗೂ ಬುಧನಿಗೂ ಶತ್ರುತ್ವ ಇದೆ ಅನ್ನಿ.  ಆದರೆ ಈ ಮೊದಲನೇ ನವಾಂಶದವರು ಸ್ಪೋರ್ಟ್ಸ್ ಏಕ್ಟಿವಿಟೀಸಿನಲ್ಲಿ ಬಹಳ ಚುರುಕಾಗಿರುತ್ತಾರೆ. ಬಹುಷ್ಯ ನನ್ನ ಸ್ನೇಹಿತನ ನಕ್ಷತ್ರ ಶ್ರವಣವಾಗಿದ್ದು, ಆತನದ್ದೂ ನವಾಂಶ ಪಾದ ಒಂದು ಆಗಿರಬೇಕು. ಕಾರಣ ಆತನೊಬ್ಬ ಕ್ರಿಕೆಟಿನಲ್ಲಿ ಬಹು ದೊಡ್ಡ ಇಂಟರ್ನೇಷನಲ್ ಲವೆಲ್ಲಿನಲ್ಲಿ ಸ್ಟೆಟಿಸ್ಟೀಶಿಯನ್! ಆತನಿಗೆ ಸರ್ಕಾರದ ವತಿಯಿಂದಲೂ ಸುಮಾರು ಗೌರವ ಪ್ರಶಸ್ಥಿಗಳು ದಕ್ಕಿರುತ್ತವೆ. ಪಕ್ಕಾ ಶ್ರವಣ ನಕ್ಷತ್ರದವ. ಧ್ವನಿಯಲ್ಲಿ ನಮ್ರತೆ, ವಿನಯ ಹಾಗೂ ಜಂಬವೂ ತುಂಬಿ ತುಳುಕುತ್ತಿದೆ. ಬಹಳ ಬುಧ್ಧಿವಂತ ವ್ಯಕ್ತಿ. ಆತನನ್ನ ಎಷ್ಟು ಹೊಗಳಿದರೂ ಕಮ್ಮಿಯೇ!

14.     ಇಲ್ಲಿ ನೋಡಿ, ಮೊದಲೇ ಶ್ರವಣ ನಕ್ಷತ್ರದ ಒಡೆಯ ಚಂದ್ರ. ನಾಲ್ಕನೇ ಪಾದವು ಕರ್ಕ ರಾಶಿಗೆ ಬೀಳುವುದರಿಂದ, ಅದರ ಒಡೆಯನೂ ಚಂದ್ರನಾದ ಕಾರಣ, ಇವರುಗಳು ತಾಯಿಗೆ ಬಹಳ ಹತ್ತಿರದವರಾಗಿರುತ್ತಾರೆ. ಇವರುಗಳು ಹೋಟೇಲ್ ಉದ್ಯಮಕ್ಕೆ ಹೇಳಿ ಮಾಡಿಸಿದವರಾಗಿರುತ್ತಾರೆ. ಇವರಲ್ಲಿ ಶಾಂತಿಯಲ್ಲಿ ಶಾಂತಿ ನೆಲೆಸಿರುತ್ತದೆ. ಬಹಳ ಏಕ್ಟೀವ್ ಇರುವಂತಹ ವ್ಯಕ್ತಿಗಳು. ಅದೇ ಸ್ತ್ರೀ ಆಗಿದ್ದ ಪಕ್ಷದಲ್ಲಿ, ಗೌರಮ್ಮನಂತೆ ಗರತಿಯ ಲಕ್ಷಣಗಳಿಂದ ತುಂಬಿ ತುಳುಕುತ್ತಿರುತ್ತಾರೆ. ಇವರಿಗೆ ಸಂಗೀತದಲ್ಲಿಯೂ ಆಸ್ಥೆ ಜಾಸ್ತಿ ಇರುತ್ತೆ. ಇವರುಗಳಿಗೆ ಸಮಾಜದಲ್ಲಿ ಎಲ್ಲಿಲ್ಲದ ಗೌರವವು ಸಿಗುತ್ತೆ. ಇವರ ಕೈಯಲ್ಲಿ ಒಂದು ರುಚಿ ಇರುತ್ತೆ. ಅಡುಗೆಯಲ್ಲಿ ಎತ್ತಿದ ಕೈ ಅನ್ನಿ! ನೋಡಲೂ ಬಹಳ ಚಂದ. ಚಂದ್ರನಂತೆ ಉರುಟು, ದುಂಡು ಮುಖದವರಾಗಿರುತ್ತಾರೆ. ಹೆಣ್ಣಾದ ಪಕ್ಷದಲ್ಲಿ ಇವರುಗಳಿಗೆ ಮದುವೆ ಆಗುವುದು ಕಷ್ಟವೆನಿಸದು. ಹೆಣ್ಣು ಹೆತ್ತಂತಹ ತಂದೆ ತಾಯಂದಿರಿಗೆ ಬಹಳ ಸುಲಭ ಇವರನ್ನ ಹೆತ್ತರೆ.

15.     They are strongly management people and neatness loving individuals who would not stay calm at the sight of any mess and disorder around them and this is the only thing which could turn the most loving attitude into a bitter one.
16.     ಇವರುಗಳು ಯಾವಾಗಲೂ ಮೆನೇಜಮೆಂಟಿನ ಮನುಷ್ಯರೇ. ಅವರು ಕಾರ್ಮಿಕರ ಪರ ಇಲ್ಲವೇ ಇಲ್ಲ. ಆದರೆ ಈ ನೀಟ್ನೆಸ್ ಲವಿಂಗ್ ಅಂತ ಯಾರೋ ಬರೆದಿದ್ದಾರಲ್ಲ, ಅದನ್ನ ಮಾತ್ರ ನಾನು ನಂಬುವುದೇ ಇಲ್ಲ. ಆದರೆ ಇವರು ಎಲ್ಲಿಯಾದರೂ ಮೆಸ್ ಆಗಿದೆಯಪ್ಪಾ, ನೀನು ಹೋಗಿ ನೋಡಿ ಬಿಟ್ಟು ಬಾ ಅಂತ ಈ ನಕ್ಷತ್ರದವರನ್ನ ಎಲ್ಲಿಯಾದರೂ  ಅಲ್ಲಿಗೆ ಕಳುಹಿಸಿದಿರೋ, ಅವನ ಕಥೆ ಪಡ್ಚ! ಯಾಕೆ? ಇವರು ಹುಡುಕಿ, ಕೆದಕಿ , ಬಹಳ ಆಳಕ್ಕೆ ಇಳಿದು, ಮತ್ತೆ ಮತ್ತೆ ಕೆದಕಿ ತೆಗೆಸಿ, ಪುಟಗಟ್ಟಲೆ ಬರೆದು ಮೆನೇಜಮೇಟಿಗೆ ಪುಸ್ತಕ ಗಟ್ಟಲೆ ಬರೆಯಲಿಲ್ಲಾ, ಇವರು ಶ್ರವಣ ನಕ್ಷತ್ರದವರೇ ಅಲ್ಲಾ ಅನ್ನಿ!

17.     The natives of Sravana Nakshatra will keep seeking knowledge throughout their life and so on would emerge as learned personalities.

18.     ಈ ನಕ್ಷತ್ರವು ಯಾವಾಗಲೂ ತಿಳುವಳಿಕೆಯ ನಕ್ಷತ್ರವೆನಿಸಿಕೊಂಡಿದೆ.ಅದಕ್ಕಾಗಿ ಆಂಗ್ರೇಜಿಯಲ್ಲಿಯೂ ಕೂಡ, ಇದನ್ನ ಲರ್ನರ್ಸ್ ನಕ್ಷತ್ರ ಎಂದೇ ಕರೆಯುತ್ತಾರೆ.ಯಾವಾಗಲೂ ಏನನ್ನಾದರೂ ಕಲಿಯುತ್ತಲೇ ಇರುತ್ತಾರೆ.

19.     They carry enough maturity to see everything with a right vision and so on will be able to solve problems in a right way.

20.     ಇವರುಗಳಲ್ಲಿ ಸಾಕಷ್ಟು ಅನುಭವ ಹಾಗೂ ವಿಷಯಗಳನ್ನ ಸಾಕಷ್ಟು ತಿಳಿದು, ಒಂದು ರೀತಿಯ ಪಕ್ವವಾಗಿರುತ್ತಾರೆಂದರೆ ನೀವು ನಂಬಲಾರಿರಿ.

21.     The natives of Sravana Nakshatra despite of facing many problems throughout their life are blessed with blissful and happy life.
22.     ಇವರುಗಳು ಜೀವನ ಪರ್ಯಂತ ಸಾಕಷ್ಟು ಕಷ್ಟ ನಷ್ಟಗಳನ್ನ ಅನುಭವಿಸಿದರೂ ಸಹ, ಅವರಿಗೆ ಒಂದು ರೀತಿಯ ಚಂದ್ರನ ಆಶೀರ್ವಾದವಿದೆ. ಏನಂತ ಅಂದರೆ, ಸುಖದಿಂದ ಜೀವನವನ್ನ ಸಾಗಿಸಪ್ಪಾ ಅಂತ!

23.     They will lead a peaceful and joyful married life as they would get obedient and devoted wives who would possess all the attributes to adorn their lives.

24.     ಇವರುಗಳು ಸಾಕಷ್ಟು ಸಂತೋಷದ ಮದುವೆ ಜೀವನವನ್ನ ಸಾಗಿಸಿರುತ್ತಾರೆ. ನನ್ನನ್ನ ಕೇಳಿದರೆ ಇವರುಗಳು ಹೆಂಡತಿಯ ಜೊತೆಯಲ್ಲಿದ್ದರೆ, ಅದು ಸಾಧ್ಯವಿಲ್ಲವೋ, ಏನೊ? ಇವರುಗಳು ತಮ್ಮ ಕಾರ್ಯನಿಮಿತ್ತ ಮನೆಯಿಂದ ಹೊರಗಡೆ ಸುಮಾರು ಸಮಯವನ್ನ ಕಳೆಯುವುದರಿಂದ, ಅವರ ಸಾಂಸಾರಿಕ ಜೀವನದ ನೌಕೆ ಬರೋಬ್ಬರಿಯಾಗಿ ಸಾಗುತ್ತೇ ಅಂತ ನಾವು ಹೇಳಬಹುದೇನೋ? ಕಾರಣ ನಾನು ಕಂಡಂತಹ ಶ್ರವಣ ನಕ್ಷತ್ರದವರು ಬರೇ ಕಿರಿ ಕಿರಿ ಮನುಷ್ಯ!

25.     The early ages of Sravana Nakshatra would be quiet unstable but their married life would bring all the stability and brilliance in their life. At the latter age, these people will really lead peaceful life as Moon is for the calm and quiet and for cool atmosphere.

26.     ಇವರ ಸಣ್ಣದರ ಜೀವನವು ಅಷ್ಟೇನೂ ಸುಖಕರವಲ್ಲ. ಆದರೆ ಮದುವೆಯಾದ ನಂತರ ಇವರದ್ದು ಒಂದು ಸ್ಥಿರವಾದ ಜೀವನವಾಗಿರುತ್ತೇ ಅನ್ನಿ. ಇವರ ಕೊನೆಯ ಜೀವನವು ಸಾಕಷ್ಟು ಶಾಂತಿ, ಸಮಾಧಾನವು ತುಂಬಿರುತ್ತೆ. ಇದಕ್ಕೆ ಕಾರಣ ಚಂದ್ರನೇ ಶಾಂತಿಯ ದೂತ.

27.     Sravana –first Pada people will get immediate angry, though this is not their nature. 

          ನಾನೀಗಾವಾಗಲೇ ಹೇಳಿದಂತೆ ಶ್ರವಣ ನಕ್ಷತ್ರದ ಮೊದಲನೇ ಪಾದದವರಿಗೆ ಮುಂಗೋಪ ಜಾಸ್ತಿ ಇರುತ್ತೆ ಅಂತ. ಆದರೆ ಇದು ಅವರುಗಳ ಲಕ್ಷಣಗಳಲ್ಲ.  ನನ್ನ ಸ್ನೇಹಿತನೊಬ್ಬ ಇರುವ ಈ ನಕ್ಷತ್ರದಲ್ಲಿ. ಹೆಚ್ಚಿನಂಶ, ಆತನು   ಶ್ರವಣ ನಕ್ಷತ್ರದ ಮೊದಲನೇ ಪಾದದವನೇ ಇರಬೇಕು. ಕಾರಣ ಆತನು ಪೋಲೀಸ್ ಸಿ.ಐ.ಡಿಯಂತೆ ಬೇಂಕಿನಲ್ಲಿ ಕೆಲಸವನ್ನ ಮಾಡುತ್ತಿದ್ದ! ಇದು ಕುಜನ ಹತ್ತಿರ ಮಾತ್ರವೇ ಸಾಧ್ಯ! ಯಾರ ಜಾತಕದಲ್ಲಿ ,ನಾವುಗಳು ಏನನ್ನ ನೋಡಿ ಇವರು ಮಾಂಗಲಿಕರೆಂದು ಹೇಳುತ್ತಿದ್ದೇವೆಯೋ, ಅವರುಗಳೇ ಇಂತಹ ಹುಡುಕಿ ಹುಡುಕಿ ಕೆದಕುವಂತಹ ಖೋಜ್ ಕೆಲಸಕ್ಕೆ ಲಾಯಕ್ ಆದಂತಹ ವ್ಯಕ್ತಿಗಳು. ಪೋಲೀಸ್ ಹುದ್ದೆಯಲ್ಲಿರುವವರಿಗೆಲ್ಲಾ ಕುಜ ಬಹಳ ಗಟ್ಟಿಯಾಗಿರಬೇಕು! ಆ ಕೆಲಸವು ಕುಜನಿಂದಲೇ ಮಾತ್ರವೇ ಸಾಧ್ಯವೇ ವಿನಹ ಬರೇ ಚಂದ್ರನಿದ್ದರೆ ಸಾಲದಂತ ನನ್ನ ಅಭಿಪ್ರಾಯ!

28.     Sravana -2 pada people are very fond of food and also changes hotel to hotel. They even best to run hotel industries also!

29.     ಶ್ರವಣ -೨ನೇ ಪಾದದವರು ತಿಂಡಿ ಪೋತರು.ಇವರುಗಳು ಹೋಟೇಲಿನಿಂದ ಹೋಟೇಲಿಗೆ ವಲಸೆ ಹೋಗುವುದು ಜಾಸ್ತಿ. ಇವರುಗಳು ಕೂಡ ಅಂದರೆ ಈ ಪಾದದ ನಕ್ಷತ್ರದವರು ಹೋಟೇಲ್ ಬಿಸಿನೆಸ್ಸಿಗೆ ಬಹಳವಾಗಿ ಫಿಟ್ ಪೆರ್ಸನೇಲಿಟಿ!

30.     Sravana -3 Pada people are very intelligent people. They are best suited for the Banking industries or any financial industries where mainly finance is involved. Even they are very good investor in shares and securities.

31.     ಇನ್ನು ಶ್ರವಣ -೩ನೇ ಪಾದದವರು ಬೇಂಕಿಂಗ್ ಅಥವಾ ಎಲ್ಲಿ ಫೈನೇನ್ಸ್ ಇದೆಯೋ ಅಲ್ಲಿಗೆ ಲಾಯಕ್ಕಾದಂತಹ ವ್ಯಕ್ತಿಗಳು! ಇವರುಗಳು ಒಳ್ಳೇ ಇನ್ವೆಷ್ಟ್ಮೆಂಟ್ಸ್ ಕೂಡಾ ಮಾಡುವವರೇ. ಚಂದ್ರನಾದ ಕಾರಣ ಇವರೆಲ್ಲಾ ಶೇರ್ಸ್ ಏಂಡ್ ಸೆಕ್ಯೂರಿಟೀಸಗಳಿಗೆ ಫಿಟ್!


By Dr. P Surendra Upadhya, M.Sc.; Ph.D (Astrology)

25/07/2017

Comments

Popular Posts