Rahu Transit 2017 ರಾಹು ಗೋಚಾರದಲ್ಲಿ


Rahu Transit 2017
ರಾಹು ಗೋಚಾರದಲ್ಲಿ
1.    Rahu will transit from Leo to Cancer on 18th of August, 2017.
2.    ರಾಹು ಇದೇ ತಿಂಗಳ ೧೮ರಂದು, ಸಿಂಹ ರಾಶಿಯನ್ನ ತೊರೆದು ಕರ್ಕ ರಾಶಿಗೆ ಹೋಗುತ್ತೆ. ರಾಹು ಯಾವಾಗಲೂ ಹಿಮ್ಮುಖವಾಗಿ ಹೋಗುವ ಂತಹ ಛಾಯಾ ಗ್ರಹ. ಇದನ್ನೇ “ನೋರ್ತ್ ನೋಡ್ ಹಾಗೂ ಕೇತುವನ್ನ ಸೌತ್ ನೋಡ್ ಅಂತ ಕರೆಯುತ್ತಾರೆ.

3.    Rahu is a Chaya planet or north node and Ketu is called as south node.
4.    ನಮ್ಮ ಚರಿತ್ರೆಯಲ್ಲಿ ಇದಕ್ಕೊಂದು ಕಥೆಯಿದೆ. ಸಮುದ್ರ ಮಂಥನವನ್ನ ಮಾಡುವಾಗ, ಕೊನೆಯಲ್ಲಿ ಅಮೃತ ಹುಟ್ಟಿದಾವಾಗ, ಅದನ್ನ ದೇವತೆಗಳಿಗೂ ಹಾಗೂ ರಾಕ್ಷಸರಿಗೂ ಹಂಚಲೆಂದು ಶ್ರೀಮುನ್ನಾರಾಯಣನು, ಮೋಹಿನಿಯ ವೇಷವನ್ನ ಧರಿಸಿ ಬಂದನು. ಆವಾಗ ಆ ಸಮಯವನ್ನ ನೋಡಿ, ಒಬ್ಬ ರಾಕ್ಷಸನು ದೇವತೆಯ ವೇಷವನ್ನ ಧರಿಸಿ, ದೇವತೆಗಳ ಸಾಲಿನಲ್ಲಿ ಹೋಗಿ ಕುಳಿತುಬಿಟ್ಟ. ಇದನ್ನ ನೋಡಿದಂತಹ ಸೂರ್ಯ ಮತ್ತು ಚಂದ್ರರು, ನಾರಾಯಣನಿಗೆ ಹೇಳಿಕೊಟ್ಟರು. ಅದನ್ನ ತಿಳಿದಂತಹ ಶ್ರೀಮುನ್ನಾರಾಯಣನು, ತನ್ನಲ್ಲಿರುವ ಸುದರ್ಷನ ಚಕ್ರದಿಂದ ಆತನ ಕುತ್ತಿಗೆಯನ್ನ ಕತ್ತರಿಸಿ ಬಿಸಾಡಿದನು. ಆದರೆ ಆವಾಗಲೇ ಆ ರಾಕ್ಷಸನು ಒಂದು ಬಿಂದು ಅಮೃತವನ್ನ ಕುಡಿದ ಕಾರಣ ಆತನಿಗೆ ಮರಣವಿಲ್ಲದ ಹಾಗಾಯಿತು. ಇದೇ ರಾಹುವೇ, ದೇಹವಿಲ್ಲದ ತಲೆ.ಕೇತುವೇ ರುಂಡವಿಲ್ಲದ ಬರೇ ಮುಂಡ. ಈವಾಗಲೂ ಈ ಸೂರ್ಯಗ್ರಹಣ ಮತ್ತು ಚಂದ್ರ ಗ್ರಹಣವಾಗುತ್ತದಲ್ಲಾ, ಅದು  ರಾಹು ಮತ್ತು ಕೇತು ಛಾಯಾ ಗ್ರಹರು ಅವರನ್ನ ಹಿಡಿದು ನುಂಗಿ ಮತ್ತೆ ಬಿಡುವರು. ಬಿಡುವುದಕ್ಕೆ ಕಾರಣ ಉಂಟು. ಏತಕ್ಕೆಂದರೆ, ಸೂರ್ಯ ಮತ್ತು ಚಂದ್ರರೂ ಸಹ ದೇವತೆಗಳಾಗಿ ಅಮೃತ ಪಾನವನ್ನ ಮಾಡಿದ್ದಾರಲ್ಲಾ, ಅದಕ್ಕೆ. ಈ ರಾಹು ಮತ್ತು ಕೇತುವಿಗೂ ಕೂಡ ಮರವಿಲ್ಲ, ಕಾರಣ ಅವರೂ ಒಂದು ಬಿಂದು ಅಮೃತವನ್ನ ಹೀರಿದ್ದರು. ಇದು ನಮ್ಮ ಚರಿತ್ರೆಯಲ್ಲಿರುವ ಕಥೆ. ಅನ್ನಿ.


5.    Rahu and Ketu are unpredictable planets.
6.    ಈ ರಾಹು ಮತ್ತು ಕೇತು ಗ್ರಹರು ಇಂತಹದೇ ಕೊಡುವರೆಂಬ ನಿಶ್ಚಯದವರು ಅಲ್ಲ.

7.    As popularly known, Rahu is responsible for sudden events and accidents in our lives.
8.    ರಾಹು ಕೊಟ್ಟರೆ ದಂಡಿಯಾಗಿ ಕೊಡುತ್ತಾನೆ. ಆದರೆ ತೆಗೆದುಕೊಂಡಲ್ಲಿ ಪೂರಾ ಕಿತ್ತುಕೊಂಡು ಹೋಗುತ್ತಾನೆ.
9.    Currently, it is in the sign Leo, and always in retrograde motion. It will be moving back to the sign Cancer by Friday, 18th August 2017.
10.                       ಕಳೆದ ೧೮ ತಿಂಗಳಿಂದ ರಾಹು ಗ್ರಹವು ಸಿಂಹದಲ್ಲಿದ್ದಿತ್ತು. ಮುಂದೆ ೧೮ ಆಗಷ್ಟ, ೨೦೧೭ ರಿಂದ ರಾಹು ಗ್ರಹವು ಕರ್ಕ ರಾಶಿಗೆ ಕಾಲನ್ನಿಡುತ್ತದೆ.

11.                       Movement of Rahu is considered to be of immense importance in our astrology.
12.                       ರಾಹು ಗ್ರಹವು ನಮ್ಮ ಜ್ಯೋತಿಷ್ಯದಲ್ಲಿ ಬಹಳ ಮುಖ್ಯ ಸ್ಥಾನವನ್ನೇ ಪಡೆದುಕೊಂಡಿರುತ್ತದೆ. ನಾನು ನೋಡಿರುತ್ತೇನೆ, ಈ ದಶೆಯಲ್ಲಿ ಹೆಚ್ಚಿನವರು ತಮ್ಮ ವಿದ್ಯಾಭ್ಯಾಸವನ್ನ ಎಲ್ಲಿಂದ ಎಲ್ಲಿಯವರೆಗೆ ಕೊಂಡುಯ್ಯುತ್ತಿರುತ್ತಾರೆ.

13.                       In Transit (Gochara), Rahu will do well for the houses 3, 6 and 1 and for rest of the houses, he does harm only.
14.                       ರಾಹು ಗ್ರಹವು ತನ್ನ ಗೋಚಾರದಲ್ಲಿ ೩, ೧೦ ಹಾಗೂ ೧೧ನೇ ಮನೆಗಳನ್ನ ಒಳ್ಳೇಯದನ್ನಾಗಿಯೇ ಮಾಡುತ್ತದೆ.

15.                       Please note that in Gochara, we deal from your Janma Rashi or from your moon sign. For example, if your Moon sign is Aries, then we count from Aries only up to where Rahu is posited.
16.                       ಇದು ನಿಮಗೆಲ್ಲಾ ತಿಳಿದಿರಲಿ. ಗೋಚಾರದಲ್ಲಿ ನಾವುಗಳಿ ಜನ್ಮ ರಾಶಿಯಿಂದ ನೋಡೂತ್ತೇವೆ. ಈಗ ನೀವು ಮೇಶ ರಾಶಿಯವಾರಾದರೆ ಇದುವರೆಗೆ ರಾಹು ಗ್ರಹವು ನಿಮ್ಮ ರಾಶಿಯಿಂದ ೫ ನೇ ಮನೆಯಲ್ಲಿದ್ದಿರುತ್ತದೆ. ಆವಾಗ ನಿಮ್ಮ ಮಗನು ಅಥವಾ ಮಗಳು ಬಹಳ ವೃಧ್ಧಿಯನ್ನ ಹೊಂದಿದುರ್ವರು ಹಾಗೂ ಒಂದು ಕೆಲಸದಲ್ಲಿ ಒಂದು ಸ್ಥಳದಲ್ಲಿದ್ದ ಪಕ್ಷದಲ್ಲಿ ಅವರಿಗೆ ಸ್ಥಾನ ಪಲ್ಲಟವೂ ಆಗಿರುತ್ತೇ ಅನ್ನಿ. ಹೌದೋ ಅಲ್ಲವೋ? ಇದು ರಾಹುವಿನ ಕೊಲಾಡಿ ಬುಧ್ಧಿತನ!

17.                       For Aries people it will be in 4th House counted from Aries and will be there up to 18 months from August 18th, 2017 to January 18th, 2019.
18.                       ಅದೇ ಆಗಷ್ಟ ೧೮ ರ ಮೇಲೆ ನಿಮ್ಮ ಮೇಶ  ರಾಶಿಯಿಂದ ೪ನೇ ಮನೆಗೆ ಬಂದಿರುತ್ತದೆ. ಈ ರಾಶಿಯಲ್ಲಿ ೧೮ ತಿಂಗಳಗಳ ಕಾಲ ಇರುತ್ತದೆ. ಸತ್ಯವನ್ನೇ ಹೇಳಬೇಕೆಂದರೆ ರಾಹು ಗ್ರಹವು ರಾಶಿಯಲ್ಲಿ ಬುಧ್ಧಿಕ್ಲೇಷವನ್ನುಂಟು ಮಾಡುತ್ತಾನೆ. ಅದೇ ೨ ನೇ ಮನೆಯಲ್ಲಿ ವ್ಯಾಧಿ, ಶತ್ರು ಭಯವನ್ನುಂಟು ಮಾಡುತ್ತಾನೆ. ೩ ನೇ ಮನೆಯಲ್ಲಿ ದ್ರವ್ಯ ಲಾಭವನ್ನುಂಟು ಮಾಡುತ್ತಾನೆ. ಕಾರಣ ಈ ಮನೆಯಲ್ಲಿ ಆತನು ಒಳ್ಳೇಯದನೇ ಮಾಡುತ್ತಾನೆಂದು ಮೇಲೆ ನಾನು ಉಲ್ಲೇಖಿಸಿದ್ದೇನೆ. ನಾಲ್ಕನೇ ಮನೆಯಲ್ಲಿ ವಿರೋಧವನ್ನುಂಟು ಮಾಡುತ್ತಾನೆ. ಐದನೇ ಮನೆಯಲ್ಲಿ ಕಷ್ಟವನ್ನ ಪ್ರಾಪ್ತಿ ಮಾಡುತ್ತಾನೆ. ೬ ನೇ ಮನೆಯಲ್ಲಿ ಲಕ್ಷ್ಮೀಕರವನ್ನುಂಟು ಮಾಡುತ್ತಾನೆ. ಈ ಮನೆಯಲ್ಲಿಯೂ ರಾಹು ಗ್ರಹ ಒಳ್ಳೆಯದನ್ನೇ ಮಾಡುತ್ತಾನೆಂದು ಮೇಲೆ ತಿಳಿಸಿರುತ್ತೇನೆ. ೭ ನೇ ಮನೆಯಲ್ಲಿ ಭಯ, ಕಲಹವನ್ನುಂಟು ಮಾಡಿದಲ್ಲಿ, ೮ ನೇ ಮನೆಯಲ್ಲಿ ಮೃತ್ಯು ಭಯವನ್ನುಂಟು ಮಾಡುತ್ತಾನೆ. ೯ನೇ ಮನೆಯಲ್ಲಿ ರೋಗವನ್ನ ವೃಧ್ಧಿಸುತ್ತಾನೆ.ಅದೇ ೧೦ ನೇ ಮನೆಯಲ್ಲಿ ಕಾರ್ಯ ನಷ್ಟ ವನ್ನುಂಟು ಮಾಡಿದಲ್ಲಿ, ೧೧ ನೇ ಮನೆಯಲ್ಲಿ ದ್ರವ್ಯಲಾಭವನ್ನುಂಟು ಮಾಡುತ್ಟಾತ್ತಾನೆ. ಕಾರಣ ರಾಹು, ಕುಜ, ಶನಿ ಹಾಗೂ ಕೇತು ಗ್ರಹರು ೩,೬ ಮತ್ತು ೧೧ ನೇ ಮನೆಗಳಲ್ಲಿ ಒಳ್ಳೆಯದನ್ನೇ ಮಾಡುತ್ತಾನೆ. ಇನ್ನು ಕೊನೆಯ ೧೨ ನೇ ಮನೆಯಲ್ಲಿ ಶತ್ರು ಭಯ ನ್ನ ಉಂಟು ಮಾಡುತ್ತಾನೆ. ಹೇಗಿದೆ ಗೋಚಾರದ ಫಲಾವಳಿಗಳು?

19.                       Now let us see its effects on each and every Rashi:

20.                       ಈಗ ನಾವುಗಳು ಒಂದೊಂದು ರಾಶಿಗಳನ್ನ ಮೆಲುಕು ಹಾಕೋಣ.


21.                       ARIES (Mesha):-
22.                       ಮೇಶ ರಾಶಿ :-
23.                        

a.     Cancer will be the 4th house from Aries and 4th house is for Happiness, Mother, General public, House & Properties, Primary education etc.
b.    ಈ ಮನೆಯ ಕಾರಕತ್ವಗಳಿಗೆಲ್ಲಾ ವಿರೋಧವನ್ನುಂಟು ಮಾಡುತ್ತಿರುತ್ತಾನೆ. ಅಂದರೆ ತಾಯಿಂದ ದೂರು, ಸಂತೋಷದಿಂದ ದೂರು, ಸಾರ್ವಜನಿಕರಿಂದ ಅನಗತ್ಯವಾಗಿ ವಿರೋಧ, ಮನೆ ಹಾಗೂ ಮಠಗಳಿಂದ ದೂರು, ವಿದ್ಯಾಭ್ಯಾಸದಿಂದಲೂ ದೂರು ಆಗಿರುತ್ತಾನೆ ಈ ೧೮ ತಿಂಗಳಗಳ ಕಾಲ!
c.     Students might find it difficult to stay focused in this duration.
d.    There may be disputes of differences of opinion between you and your mother.
e.     You may change the house and may enter into a big house.
f.      If you are on rental basis, you may change the house.
g.    Your relationship in the public may be tarnished downwards.
h.    Your happiness may be affected.

24.                       Taurus (Vrushabha)
a.     ವೃಷಭ ರಾಶಿ:-

b.    In this house, Rahu will do well in Transit.
c.     ಈ ಮನೆಯಲ್ಲಿ ನಿಮಗೆ ರಹು ಗ್ರಹವು ಒಳ್ಲೆಯದನ್ನೇ ಮಾಡುತ್ತಾನೆ.

d.    Hence your short travels may be increasing.


e.     ಇಲ್ಲಿ ನಿಮ್ಮ ಸಣ್ಣ ಪುಟ್ಟ ಸಂಚಾರಗಳ ತ್ವರಿತ ಜಾಸ್ತಿ ಆಗುತ್ತವೆ. ಅಂದರೆ ನೀವುಗಳು ಮಾರ್ಕೆಟಿಂಗ್ನಲ್ಲಿದ್ದರೆ, ಮೆಡೀಕಲ್ ರೆಪ್ರೆಸೆಂಟೇಟಿವ್ಸ್ ಆಗಿದ್ದ ಪಕ್ಷದಲ್ಲಿ, ನಿಮ್ಮ ಹಣ ಸಂಪಾದನೆ ಜಾಸ್ತಿ ಆಗುತ್ತವೆ. ಕಾರ ನಿಮ್ಮ ವೇಗದ ಗತಿಯಿಂದಾಗಿ ಸೇಲ್ಸ್ ವೃಧ್ಧಿಗೊಳ್ಳುತ್ತವೆ. ಸೇಲ್ಸ್ ವೃಧ್ಧಿಗೊಂಡರೆ, ನಿಮಗೆ ಬೋನಸ್ ಸಿಗುತ್ತವೆ. ಮತ್ತು  ನಿಮ್ಮ ಸಂಬಳದಲ್ಲಿಯೂ ಅಭಿವೃಧ್ಧಿಯಾಗುತ್ತವೆ. ನಿಮಗೆ ಪ್ರಮೋಷನ್ ಸಿಗುತ್ತವೆ. ನೋಡಿ ರಾಹು ಏನೆಲ್ಲಾ ಈ ಮನೆಯಲ್ಲಿ ಮಾಡುತ್ತಾನೆ. ಇದು ಉಪಚಯ ಸ್ಥಾನ. ಆದ್ದರಿಂದ ಈತನು ಈ ಮನೆಯಲ್ಲಿ ಸಾಕಷ್ಟು ತುಂಬಿ ಕೊಡುವನು. ಅಂದರೆ ಈಶ್ವರನಿಗೆ ಸೋಮವಾರ, ಸೋಮವಾರದಂದು ಅರ್ಧ ಪೆಕೇಟ್ ಹಾಲನ್ನ ಸುರಿಯಲು ಮರೆಯದಿರಿ!

f.      If you are in marketing fields or working as medical representative, you may be on travel to capture more and more business.
g.    Your relationship with your siblings may be dam good.

25.                       Gemini (Mithuna):-
26.                       ಮಿಥುನ ರಾಶಿ :-

a.    Rahu, being in your Second house, will give your finances a boost.
b.   ಈ ಮನೆಯಿಂದ ನಿಮ್ಮ ಕರ್ಕ ರಾಶಿಯು ೨ ನೇ ಮನೆಯಾದ ಕಾರಣ, ಇಲ್ಲಿ ರಾಹು ನಿಮಗೆ ವ್ಯಾಧಿ ಹಾಗೂ ಶತ್ರುಭಯವನ್ನ ಕೊಡುವನು . ಅಂದರೆ ಎಲ್ಲಾ ೨ನೆಯ ಮನೆಯ ಕಾರಕತ್ವಗಳೆಲ್ಲಾ ನಿಮಗೆ ಉಲ್ಟಾ ಹೊಡೆಯುತ್ತಿರುತ್ತವೆ.

c.    You might have to face minor family issues related to petty health issues and trivial misunderstandings with family members.
d.   . ಇಲ್ಲಿ ನಿಮಗೆ ನಿಮ್ಮವರೇ ಆದವರಿಂದ ವಿರೋಧಗಳುಂಟಾಗುತ್ತವೆ
e.    Your incoming finance portfolio may be affected much during the period under reference.
f.     ನಿಮ್ಮ ಆದಾಯಕ್ಕೆ ಕುಂದಿದೆ.

g.   There may be unnecessary problems due to your communications.
27.                       ನಿಮ್ಮ ಮಾತೇ ನಿಮಗೆ ವಿರೋಧವನ್ನ ತಂದೊಡ್ಡುತ್ತವೆ.

28.                       Cancer

29.                       ಕಟಕ ರಾಶಿ:-
30.                        
a.    Rahu’s position in your ascendant this year will make you face crucial situations in your personal life.
b.   ಲಗ್ನದಲ್ಲಿ ಅಥವಾ ರಾಶಿಯಲ್ಲಿ ರಾಹು ಬಹಳ ಮುಖವನ್ನ ಕೇಳಗಡೆ ಹಾಕುವ ಹಾಗೆ ಮಾಡುತ್ತಾನೆ. ಬುಧ್ಧಿ ಭ್ರಮಣೆಯ ಸಾಧ್ಯತೆ ಜಾಸ್ತಿ. ನೀವು ಏನನ್ನ ಮಾಡುತ್ತೇವೆಂಬುದೇ ನಿಮ್ಮಗಳಿಗೆ ತಿಳಿಯುವುದಿಲ್ಲ.ಮೊದಲೇ ನೀವು ಭಾವುಕ ವ್ಯಕ್ತಿಗಳು. ನೀವುಗಳು ಅಂದರೆ ಯಾರ್ಯಾರು ಬರುತ್ತಾರೆ ಈ ಕರ್ಕ ರಾಶಿಯಲ್ಲಿ. ಪುನರ್ವಸು ನಕ್ಷತ್ರದ ಕೊನೆಯ ಪಾದದವರು, ಪುಷ್ಯಾದವರ ೪ ಪಾದಗಳು ಹಾಗೂ ಆಶ್ಲೇಷದ ೪ ಪಾದಗಳು ಈ ಕರ್ಕ ರಾಶಿಯಲ್ಲಿ ಬರುತ್ತಾರೆ. ನಿಮ್ಮ ಅಹಂಕಾರವನ್ನಮುರಿಯದೇ ಇದ್ದರೆ ಆತ ರಾಹುವೇ ಅಲ್ಲ. ಅಲ್ಲಾ ನಿಮ್ಮಲ್ಲಿ ಅಹಂಕಾರ ಇದ್ದಲ್ಲಿ ಮಾತ್ರವೆನ್ನಿ. ಇಲ್ಲವಾದರೆ ಅತ ನಿಮ್ಮನ್ನ ಮುಟ್ಟಲಿಕ್ಕಿಲ್ಲ. ರಾಶಿಯೇ ನಿಮ್ಮ ಸರ್ವಸ್ವ ಅನ್ನಿ, ರಾಶಿಯಿಂದಲೇ ಕೆಲವು ಜೋಯಿಸರು ಹಾಗೂ ಜ್ಯೋತಿಷ್ಯರುಗಳು ತಮ್ಮ ಭವಿಷ್ಯಗಳನ್ನ ನುಡಿಯುವುದುಂಟು.

c.    This transit might make you easily irritable and turn your friendly relations sour.
d.   ನಿಮ್ಮ ಸ್ನೇಹಿತರೊಂದಿಗೆ ನಿಮ್ಮದ್ದು ಕಟ್ಟಿ ಆಗುತ್ತೆ.
e.    You might find it difficult to distinguish between friends and foes during this period.
f.     ನಿಮ್ಮಗಳಿಗೆ ಸ್ನೇಹಿತರು ಯಾರು ಹಾಗೂ ಶತ್ರುಗಳು ಯಾರು ಎನ್ನುವುದೇ ತಿಳಿಯಲಿಕ್ಕಿಲ್ಲಾ ಅನ್ನಿ.
g.   Your marital life might also feel perturbed.
h.   ನಿಮ್ಮ ಮನೋಭಾವಗಳಿಗೆ ಒಂದು ರೀತಿಯ ಮಂಕು ಕವಿದಿರುತ್ತದೆ. ಯಾತಕ್ಕೆ? ಕಾರಣ ಇದು ಚಂದ್ರನ ಆಧಿಪತ್ಯದಲ್ಲಿರುವ ರಾಶಿ. ಚಂದ್ರ ಮತ್ತು ರಾಹು ಒಟ್ಟಿಗಿದ್ದಲ್ಲಿ ಅದು ಗ್ರಹಣಸ್ಥವಾಗುತ್ತೆ. ಈ ಗೋಚಾರದ ಭವಿಷ್ಯವನ್ನೂ ನಾನು ನಿನ್ನೆಯದಿನವೇ ಅಂದರೆ ೭/೮/೨೦೧೭ ರಂದೇ ಶುರು ಮಾಡಿರುತ್ತೇನೆ. ಈ ದಿನ ಚಂದ್ರ ಗ್ರಹಣ. ಎಷ್ಟೊಂದು ಕಾಕ ತಾಳೀಯ ನ್ಯಾಯ ಹೇಳಿ? ಎಲ್ಲಿ ಚಂದ್ರ ಮತ್ತು ರಾಹುವಿರುವರೋ, ಅಲ್ಲಿ ಡಿಪ್ರೆಷನ್ ಕೇಸುಗಳು ಜಾಸ್ತಿ ಇರುತ್ತೆ. ಹೋಸ್ಪಿಟಲ್ನವರಿಗೆ ಚಾನ್ಸೋ ಚಾನ್ಸ್! ಹುಚ್ಚರಲ್ಲದೇ ಹೋದಲ್ಲಿಯೂ ಹುಚ್ಚರಂತೆ ಆಡುತ್ತಾರೆ. ಅವರುಗಳು ಆದಷ್ಟು ಸಂಬಂಧಿಕರಿಂದ, ಸ್ನೇಹಿತರಿಂದ ಈ ೧೮ ತಿಂಗಳ ಕಾಲ ದೂರವಿದ್ದರೇ ಬಹು ಚನ್ನಾಗಿರುತ್ತೇ ಅನ್ನಿ.

i.      If there are inimical planetary combinations in the horoscope of a native, then this transit might harm their health and reputation.
j.      ಮತ್ತೇ ಮೊದಲೇ ಈ ರಾಶಿಯಲ್ಲಿ ಪಾಪಗ್ರಹಗಳಿದ್ದಲ್ಲಿ, ನಿಮ್ಮ ಕಥೆ ಪೂರಾ ಗೋವಿಂದಾ ಅನ್ನಿ! ಎಲ್ಲಾ ರೀತಿಯಲ್ಲಿ ಮಾನವು ಹೋಗುತ್ತೆ.
k.   In this period, your expenses are expected to step-up
l.      ನಿಮ್ಮಗಳ ಖರ್ಚ್ಗಳು ಗಗನಕ್ಕೆ ಏರುತ್ತೆ ನೋಡಿ.

31.                       Leo
32.                       ಸಿಂಹ ರಾಶಿ


33.                       Rahu’s movement through the Twelfth house might bring harm to your health. You may be hospitalized during this transit period of 18 months as 12th house is for the hospitalization.

34.                       ಸಿಂಹ ರಾಶಿಗೆ ರಾಹು ೧೨ನೇ ಮನೆಯಲ್ಲಿರುತ್ತಾನೆ. ಕೆಲವರ ಅಭಿಮತದಂತೆ ಕೆಟ್ಟ ಗ್ರಹ ಕೆಟ್ಟ ಮನೆಯಲ್ಲಿ ಬಹಳ ಒಳ್ಳೆಯದೇ ಅನ್ನಿ. ನಿಮ್ಮನ್ನ ಹೊರದೇಶಕ್ಕೆ ಅಟ್ಟುವುದನ್ನ ಈತನು ಹಾಳು ಮಾಡಿಯಾನು. ಹಾಗೆಯೇ ನಿಮ್ಮ ಖರ್ಚುಗಳು ಜಾಸ್ತಿ ಆದೀತು.

35.                       You also might have to face legal proceedings and problems of the sort.
36.                       ನಿಮ್ಮ ಮೇಲೆ ಕಾನೂನು ಕ್ರಮವು ಕೈಗೊಂಡೀತು.
37.                       Your foreign chances may be disturbed due to Rahu’s entry into your 12th House.
38.                       Your foes might try to stain your reputation in this period.
39.                       ಇಲ್ಲಿ ನಿಮಗಳಿಗೆ ಶತ್ರುಗಳ ಭಯವಿದೆ. ನಿಮ್ಮ ಮಾನ ಮರ್ಯಾದೆಗಳು ಹರಾಜು ಹಾಕಲಿಕ್ಕುಂಟು!

40.                       You might indulge in long distance travel, for work or otherwise. Your existing work also may be in doldrums.

41.                       ಇಲ್ಲಿ ನೀವುಗಳು ಸ್ವಲ್ಪ ದೂರ ಪ್ರಯಾಣವನ್ನ ಕೈಗೊಳ್ಳುವಿರಿ.

42.                       Libra
43.                       ತುಲಾ ರಾಶಿ:-


a.    In fact, in transit, Rahu does well in house of 3rd, 6th and 11th.
b.   Rahu is in your Tenth house which is the house of karma and profession. Here Rahu will do harm only.
c.    ಈ ಮನೆಯಲ್ಲಿ ರಾಹು ಶೋಕವನ್ನ ಹಾಗೂ ದ್ರವ್ಯಹಾನಿಯನ್ನ ಕೊಡುವನು.
d.   This transit warns you to stay cautious and dedicated towards your career as your future is dependent on your current plans and actions.
e.    ಇಲ್ಲಿ ನಿಮಗೆ ನಿಮ್ಮ ಕೆಲಸದ ಬಗ್ಗೆ ಹೆಚ್ಚಿನ ಗಮನವನ್ನ ಹರಿಸಿ ಎನ್ನುವ ಒಂದು ರೀತಿಯ ಸಂಕೇತವನ್ನ ಕೊಡುವನು.
f.     Your work might keep you occupied during this period which might create issues in your domestic life.
g.   ಇಲ್ಲಿ ನಿಮಗೆ ಹೆಚ್ಚು ಗಮನವನ್ನ ನಿಮ್ಮ ಕೆಲಸದ ಬಗ್ಗೆ ಹರಿಸಬೇಕಾಗುವ ಪ್ರಸಂಗ ಬಂದೀತು. ಇದರಿಂದಾಗಿ ನಿಮಗೆ ನಿಮ್ಮ ಸಂಸಾರದ ಕಡೆಗಿರುವ ಗಮನ ಕಡಿಮೆ ಆಗುವ ಸಂದರ್ಭಗಳು ಜಾಸ್ತಿ.
h.    
i.      Try to maintain a balance between your work and your family life.
j.      ಆದ್ದರಿಂದ ಇಲ್ಲಿ ನಿಮಗೆ ಒಂದು ರೀತಿಅಯ್ ಸಮತೋಲನವನ್ನ ನಿಮ್ಮ ಕೆಲಸ ಹಾಗೂ ಸಂಸಾರದ ಮಧ್ಯ ಕಾಯ್ದುಕೊಳ್ಳುವ ಪ್ರಸಂಗ ಬಂದೀತು. ಮತ್ತೆ ಈ ಗೋಚಾರದಲ್ಲಿ ನೀವು ನಿಮ್ಮ ಕೆಲಸವನ್ನ ಬದಲಾಯಿಸುವ ಮಟ್ಟಿಗೂ ಆದೀತು! ಹೆಚ್ಚು ಹೆಚ್ಚು ಕುಕ್ಕೆ ಸುಭ್ರಮಣ್ಯನ ದರ್ಷನ ಇಲ್ಲಾ ಕಾಳಹಸ್ತಿಗೆ ಭೇಟಿ ಅಥವಾ ಮುಕ್ತಿ ನಾಗ, ಘಾಟಿ ಸುಭ್ರಮಣ್ಯನ ದರ್ಷನವನ್ನ ಮಾಡಿ.

44.                       Scorpio
45.                       ವೃಸ್ಚಿಕ ರಾಶಿ :-
46.                        
47.                       Rahu is in your Ninth house which is the house of fame and fortune. Here your fame and fortune will be at stake during this transit period.

48.                       ಇದು ನಿಮ್ಮ ೯ನೇ ಮನೆಯಾದ ಕಾರಣ, ಇದುನಿಮ್ಮ ಭಾಗ್ಯದ ಮನೆ. ಇದು ನಿಮ್ಮ ತಂದೆಯ ಮನೆ. ಇದು ನಿಮ್ಮ ಫ಼ೋರಿನ್ ಟ್ರಾವಲ್ಸಿನ ಮನೆ. ಇದು ನಿಮ್ಮ ಧರ್ಮದ ಮನೆ. ಎಲ್ಲಾ ಚೌಪಟ್ಟಾಗುವ ಸಂಧರ್ಬಗಳೇ ಜಾಸ್ತಿ. ಬರುವುದೆಲ್ಲಾ ತಪ್ಪಿ ಹೋಗುತ್ತದೆ.
49.                        

50.                       Health of your father might need attention this year. You might end up having misapprehensions with your father during this period.
51.                       ಈ ಸಮಯದಲ್ಲಿ ನಿಮ್ಮ ತಂದೆಯ ಆರೋಗ್ಯವನ್ನ ಕಾಪಾಡಿಕೊಳ್ಳಿ.
a.    Your foreign travels might be affected.
b.   Your bhagya will be on declining mode.
c.    ನಿಮ್ಮ ಭಾಗ್ಯ ನಿಮಗೇ ಕೈ ಕೊಡುತ್ತೆ ನೋಡುವಿರಂತೆ.

52.                       Sagittarius
53.                       ಧನೂರ್ ರಾಶಿ
54.                        

a.    Rahu is expected to remain in your Eighth house which is the house of death. However, 8th house is for secretive things.
b.   ಇದು ನಿಮ್ಮ ೮ನೇ ಮನೆ. ಇಲ್ಲಿ ನಿಮಗೆ ಅಪಾಯವುಂಟು. ಇಲ್ಲಿ ನಿಮಗೆ ಮ್ರತ್ಯು ಭಯವುಂಟು. ಇಲ್ಲಿ ನಿಮಗೆ ಹಾವಿನಿಂದ ಮರಣ ಉಂಟು. ಇಲ್ಲಿ ನಿಮಗೆ ಒಂದು ದೊಡ್ಡ ರೀತಿಯ ಸಾಂಕ್ರಾಮಿಕ ರೋಗದಿಂದ ಭಯವುಂಟು.

c.    You may meet with some minor accidents.
d.   Those associated with studies and research related to invention of new things will be able to make the most of this period.
e.    ಆದರೆ ಇಲ್ಲಿ ನಿಮ್ಮ ರೀಸರ್ಚ್ ಏನಾದರೂ ಇದ್ದಲ್ಲಿ ಅದು ಬಹಳ ವೇಗದ ಗತಿಯನ್ನ ಮುಟ್ಟುತ್ತದೇ ಅನ್ನಿ!

55.                       Capricorn
56.                       ಮಕರ ರಾಶಿ:-
57.                        

a.    Rahu is expected to be in your Seventh house which is the house of spouse and partnership.
b.   ಇದು ನಿಮ್ಮ ಸ್ಪೌಸಿನ ಹಾಗೂ ಬಿಸಿನೆಸ್ ಪಾರ್ಟನರ್ಶಿಪ್ಪಿನ ಮನೆ.
c.    This transit might bring issues in your marital relation. You may be expecting some differences of opinion.
d.   ಇಲ್ಲಿ ನಿಮ್ಮ ಸ್ಪೌಸಿನ್ ಜೊತೆಯಲ್ಲಿ ಮನಸ್ಥಾಪ ಹೆಚ್ಚುತ್ತದೆ.
e.    Try to maintain peace and harmony in your relationship.
f.     ನೀವು ಒಂದು ರೀತಿಯ ಹಾರ್ಮೊನಿಯನ್ನ ನಿಮ್ಮ ಸ್ಪೌಸಿನ್ ಜೊತೆಯಲ್ಲಿ. ಕಾಯ್ದು ಕೊಳ್ಳಬೇಕಾಗುತ್ತದೆ

g.   If you are in a partnership then problems can be expected there as well. There may be break up in partnership.

h.   ಇಲ್ಲಿ ನಿಮಗೆ ಡೈವೋರ್ಸಿನ್ ಚಿಂತೆಯೂ ಕಾಡುತ್ತೆ ಅನ್ನಿ.
i.      You might face misunderstandings with your partner and they might seem to be quite unpredictable to you.
j.      ಬಿಸಿನೆಸ್ ಪಾರ್ಟ್ನರ ಏನಾದರೂ ಇದ್ದಲ್ಲಿ ಅದು ಮುರಿಯುತ್ತೆ. ನಿಮಗೆ ವ್ಯಾಪಾರದಲ್ಲಿ ಲಾಸ್ ಆಗುತ್ತೆ.
k.   You might also have clashes with your partner in this duration.
l.      ನಿಮ್ಮ ಪಾರ್ಟನರ್ ಜೊತೆಯಲ್ಲಿ ಅನಗತ್ಯ ಜಗಳ ಉಂಟಾಗುತ್ತದೆ.

58.                       Aquarius
59.                       ಕುಂಭ ರಾಶಿ :-

a.    Rahu’s movement in your Sixth house is expected to bring progress in your career.
b.    ರಾಹು ನಿಮಗೆ ೬ನೇ ಮನೆಯಾಗಿರುತ್ತೆ. ೬ ನೇ ಮನೆಯಲ್ಲಿ ರಾಹು ಒಳ್ಳೆಯದನ್ನೇ ಮಾಡುತ್ತಾನೆ. ತೆಗೊಳ್ಳಿ. ನಿಮ್ಮ ಕೇರೀಯರ್ನಲ್ಲಿ ಬಹಳ ಪ್ರೋಗ್ರೆಸ್ಸ್ ಉಂಟೆನ್ನಿ
c.    You will be able to attain victory over your foes.
d.   ನಿಮ್ಮ ಶತ್ರುವಿನೊಡನೆ ಜಯವನ್ನ ಸಾಧಿಸುತ್ತೀರ.
e.    Your health may be good during this transit.
f.     ನಿಮ್ಮ ಆರೋಗ್ಯ ಬಹಳ ಸುಧಾರಿಸುತ್ತೆ. ಆಸ್ಪತ್ರೆಯಲ್ಲಿದ್ದಲ್ಲಿ ನಿಮಗೆ ಬಿಡುಗಡೆ ಉಂಟು.
g.   Those preparing for competitive exams will pass with flying colors in this period. Legal disputes will get settled in your favor.
h.   ಯಾರಾದರೂ ಕೋಂಪಿಟಿಟಿವ್ ಪರೀಕ್ಷೆಯಲ್ಲಿ ಕುಳಿತ್ತಿದ್ದಲ್ಲಿ ಅವರುಗಳಿಗೆ ಜಯ ಉಂಟು.

60.                       Pisces
61.                       ಮೀನ ರಾಶಿ
62.                        
a.    Rahu in 5th house will disturb higher education.
b.   ಇಲ್ಲಿ ನಿಮಗೆ ಕಷ್ಟ ಉಂಟು. ನಿಮ್ಮ ಹೈಯರ್ ವಿದ್ಯಾಭ್ಯಾಸಕ್ಕೆ ತೊಂದರೆ ಉಂಟು.
c.    Rahu in 5th house will disturb the relationship with the children.
d.   ಮಕ್ಕಳೊಂದಿಗೆ ತೊಂದರೆಗಳು ಉಂಟು.
e.    Rahu in 5th house will make the native to commit “Papa Karmas”
f.     ಇದು ಪೂರ್ವ ಪುಣ್ಯದ ಸ್ಥಾನವಾದ ಕಾರಣ, ನೀವು ಇಲ್ಲಿ ಅನ್ಯಥಾ ಪಾಪ ಕರ್ಮಗಳನ್ನ ಮಾಡುತ್ತಿರುತ್ತೀರ.
63.                       Parihara :-
64.                       ಪರಿಹಾರವೇನೆಂದರೆ ನೀವು ಕುಕ್ಕೆ, ಘಾಟಿ, ಮುಕ್ತಿನಾಗ, ಕಾಳಹಸ್ತಿ ಸುತ್ತಿ ಬನ್ನಿ. ಹಾವಿಗೆ ಹಾಲೆರೆಯಿರಿ. ಶಿವನಿಗೆ ಸೋಮವಾರದಂದು ಹಾಲನ್ನ ಹಾಕುತ್ತಾ ಬನ್ನಿ. ಎಲ್ಲಾ ಒಳ್ಳೆಯದಾಗುತ್ತೆ. ರಾಹು ಮಂತ್ರವ ಜಪಿಸಿರೋ, ಹೇ ಮನುಜಾ ನೀನು ರಾಹು ಮಂತ್ರವ ಜಪಿಸೋ

ಬರೆದವರು ಡಾ. ಪಾರಂಪಳ್ಳಿ ಸುರೇಂದ್ರ ಉಪಾಧ್ಯ
೦೭/೦೮/೨೦೧೭

ಚಂದ್ರ ಗ್ರಹಣದ ದಿನ.

Comments

Popular Posts