Rohini Star, ರೋಹಿಣಿ ನಕ್ಷತ್ರ

Rohini Star -ರೋಹಿಣೀ ನಕ್ಷತ್ರ

1.      There are 28 Nakshtras in Zodiac, and 28th Nakshatra is Abhijit which is very far off! Hence we take only 27 Nakshatras into account for.

2.      ನಮ್ಮ ಭೂಮಂಡಲದಲ್ಲಿ ಒಟ್ಟಿಗೆ ೨೮ ನಕ್ಷತ್ರಗಳುಂಟು. ೨೮ ನೇ ನಕ್ಷತ್ರವೇ ಅಭಿಜಿನ್ ನಕ್ಷತ್ರ, ಇದು ಭೂಮಿಯಿಂದ ಬಹಳಷ್ಟು ದೂರವಿರುವ ಕಾರಣ ನಾವುಗಳು ಈ ನಕ್ಷತ್ರವನ್ನ ಬರೇ ಮುಹೂರ್ಥಕ್ಕೆ ಮಾತ್ರ ತೆಗೆದುಕೊಳ್ಳುತ್ತಿದ್ದೇವೆ. ಆದ್ದರಿಂದ ೨೭ ನಕ್ಷತ್ರಗಳನ್ನ ೯ ವಿಭಾಗವಾಗಿ ಮಾಡಿ, ಅವುಗಳನ್ನ ಕೇತು, ಶುಕ್ರ, ಚಂದ್ರ, ಶನಿ ಹಾಗೂ ಬುಧ ಗ್ರಹಗಳು ಒಡೆಯರಾಗಿ ಮೂರು ಮೂರು ನಕ್ಷತ್ರಗಳಂತೆ ವಿಭಜಿಸಿದ್ದೇವೆ. ಪ್ರತೀ ನಕ್ಷತ್ರವೂ ೧೩ ಡಿಗ್ರೀ ೨೦ ಮಿನ್ಯೂಟ್ಸ್ ಬಂದಿದ್ದು ಪ್ರತೀ ರಾಶಿಯಲ್ಲಿ ೩೦ ಡಿಗ್ರೀಯಂತೆ ೨ ೧/೪ ನಕ್ಷತ್ರಗಳಂತೆ  ಒಂದು ರಾಶಿಯಲ್ಲಿ ೯ ಪಾದಗಳು ಇರುತ್ತವೆ. ಹಾಗೂ ಪ್ರತೀ ಪಾದಕ್ಕೆ ೩ ಡಿಗ್ರೀ ೨೦ ನಿಮಿಷಗಳಂತೆ ವಿಭಜಿಸಿ ೧೨ ರಾಶಿಗಳಿಂದ ೧೦೮ ಪಾದಗಳನ್ನ ಲೆಕ್ಕ ಹಾಕಿರುತ್ತೇವೆ.

3.      First Nakshatra starts from Ashwini, whose lord is Ketu, and the next one is Bharani, the lord of it is Venus, the third star is Krittika, the lord of it is Sun and 4th Nakshatra is Rohini and the Nakshatra lord is Moon, and 5th one is Mrigashira, its lord is Mars, and the 6th one is Aridra, its owner is Rahu, 7th Star is Punarvasu and the lord is Jupiter and 8th one is Pushya, the lord of it is Saturn and the 9th one Ashlesha, the lord of it is Mercury.

4.      ಮೊದಲನೇ ನಕ್ಷತ್ರವೇ ಅಶ್ವಿನಿ ನಕ್ಷತ್ರವಾಗಿದ್ದು ಅದರ ಅಧಿಪತಿ ಕೇತುವಾಗಿದ್ದರೆ, ಎರಡನೇ ನಕ್ಷತ್ರವು ಭರಣಿ ಆಗಿದ್ದು ಅದರ ಅಧಿಪತಿ ಶುಕ್ರನಾಗಿರುತ್ತಾನೆ. ಮೂರನೇ ನಕ್ಷತ್ರವು ಕೃತ್ತಿಕವಾಗಿದ್ದು, ಅದರ ಅಧಿಪತಿ ರವಿ ಆಗಿದ್ದರೆ, ಈ ರೋಹಿಣಿ ನಕ್ಷತ್ರವು ೪ ನೇ ನಕ್ಷತ್ರವಾಗಿದ್ದು ಅದರ ಅಧಿಪತಿ ಚಂದ್ರನಾಗಿರುತ್ತಾನೆ. ೫ನೇ ನಕ್ಷತ್ರವು ಮೃಗಶಿರವಾಗಿದ್ದು, ಇದರ ಅಧಿಪತಿ ಕುಜನಾಗಿರುತ್ಟಾನೆ. ೬ನೇ ನಕ್ಷತ್ರವು ಆರಿದ್ರವಾಗಿದ್ದು, ಅದರ ಅಧಿಪತಿ ರಾಹು ಆಗಿದ್ದಾನೆ. ೭ನೇ ನಕ್ಷತ್ರವು ಪುನರ್ವಸುವಾಗಿದ್ದು, ಅದರ ಅಧಿಪತಿ ಗುರುವಾಗಿರುತ್ತಾನೆ. ೮ನೇ ನಕ್ಷತ್ರವು ಪುಷ್ಯವಾಗಿದ್ದು, ಅದರ ಅಧಿಪತಿ ಶನಿಯು ಆಗಿರುತ್ತಾನೆ. ೯ ನೇ ನಕ್ಷತ್ರವು ಆಶ್ಲೇಷವಾಗಿದ್ದು ಅದರ ಅಧಿಪತಿ ಕೇತುವಾಗಿರುತ್ತಾನೆ ಹೀಗೆ ಮುಂದಿನ ನಕ್ಷತ್ರಕ್ಕೆ ಅಧಿಪತಿ ಮತ್ತೆ ಕೇತುವಾಗಿದ್ದು, ಹೀಗೆ ಚಕ್ರವು ಪುನರಾವರ್ತನೆಗೊಳ್ಳುತ್ತದೆ.

5.      The Lord of Rohini Nakshatra is deity Brahma who is the creator of all creations around and the most wisest divine soul besides which it is ruled by Moon from 10 degrees to 23.20 degrees in Vrishabha or Taurus zodiac.

6.      ರೋಹಿಣೀ ನಕ್ಷತ್ರದ ಅಧಿದೇವತೆಯು ಬ್ರಹ್ಮನಾಗಿದ್ದು, ಬ್ರಹ್ಮನು ನೀವೆಲ್ಲಾ ತಿಳಿದಂತೆ ಸೃಷ್ಟಿ ಕರ್ತನಾಗಿರುತ್ತಾನೆ. ಅಂತೆಯೇ ಈ ರೋಹಿಣಿಯವರೂ ಸಹಾ  ಏನಾದರೊಂದು ಸೃಷ್ಟಿಯನ್ನ ಮಾಡುತ್ತಲೇ ಇರುತ್ತಾರೆ. ಇವರಲ್ಲಿ ಕ್ರಿಯೇಟಿವಿಟಿ  ಅಂಶವು ಜಾಸ್ತಿ ಇರುತ್ತೆ. ಇವರೊಬ್ಬರು ಬುಧ್ಧಿವಂತ ವ್ಯಕ್ತಿಗಳೆಂದರೆ ತಪ್ಪಾಗದು. ಇದು ೧೦ ಡಿಗ್ರೀಯಿಂದ ೨೩.೨೦ ಡಿಗ್ರೀಯವರೆಗೆ ವೃಷಭ ರಾಶಿಯಲ್ಲಿರುತ್ತೆ. ೩ ಡಿಗ್ರೀಯಲ್ಲಿ ಮೂಲ ತ್ರಿಕೋಣ ರಾಶಿಯಾದ ವೃಷಭ ರಾಶಿಯಲ್ಲಿಯೇ ಉಛ್ಛವಾಗಿರುತ್ತೆ.

7.      Again the 2nd cycle starts from Makha, maha nakshatra and its lord is Ketu, and then nakshatra comes Purva Phalguni or Pubba, the lord is Venus and Uttara Phalguni, the Lord of it again Sun, then comes Hasta, the lord of it is again Moon and this cycle is continued till the last Nakshatra , Revati whose lord is Mercury.

8.      ೨ನೇ ಚಕ್ರವು ಮಖ ಮಹಾ ನಕ್ಷತ್ರದಿಂದ ಕೇತುವಿನ ಒಡೆಯನಡಿ ಶುರುವಾದರೆ, ಪೂರ್ವಫಾಲ್ಗುಣಿ ನಕ್ಷತ್ರವು ಶುಕ್ರನಡಿ ಬರುತ್ತೆ. ಹಾಗೆಯೇ ಉತ್ತರಫಾಲ್ಗುಣಿ ನಕ್ಷತ್ರವು ರವಿಯ ಅಡಿ ಬಂದಲ್ಲಿ ಹಸ್ತಾ ನಕ್ಷತ್ರವು ಚಂದ್ರನಡಿ ಬರುತ್ತೆ. ಹೀಗೆಯೇ ನಮ್ಮ ನಕ್ಷತ್ರದ ಚಕ್ರವು ಮುಂದುವರಿಯುತ್ತೇ ಅನ್ನಿ.

9.      Each Nakshatra has 4 padas and each pada’s lord is again different planets. Each Rashi has 2 and a quarter Star and 9 padas and each pada is of 3 Digree 20 ‘. Each Rashi fo 30 Degrees each and there are 12 such Rashis in the Zodiac.

10. ಒಂದೇ ರಾಶಿ, ಒಂದೇ ನಕ್ಷತ್ರ! ಆದರೆ ಗುಣಗಳು ಮಾತ್ರ ಬೇರೆ ಬೇರೆ. ಅದು ಹೇಗೆ ಅಂತ ಕೇಳುತ್ತೀರಾ? ಇಲ್ಲಿ ನವಾಂಷವು ನಮ್ಮ ಕೆಲಸಕ್ಕೆ ಬರುತ್ತೆ. ಇನ್ನೂ ನಕ್ಷತ್ರವನ್ನ ವಿಭಜಿಸಿದಲ್ಲಿ ಷಷ್ಟಿಯಾಂಷವೂ ಬರುತ್ತೇ ಅನ್ನಿ. ಆವಾಗ ನಾವು ನಿಖರವಾಗಿ ಒಂದು ನಕ್ಷತ್ರದ ಗುಣಗಳನ್ನ ಹೇಳಬಹುದು. ಈಗ ೧ ಡಿಗ್ರಿಯಂತೆ ವಿಭಜಿಸಿದಲ್ಲಿ ಎಲ್ಲಾ ೧೨ ರಾಶಿಗಳೂ ನಮ್ಮ ಪಾಲಿಗೆ ಒಂದೇ ನಕ್ಷತ್ರವು ಬರುತ್ತೆ. ಆವಾಗ ಅವುಗಳ ಗುಣಗಳು ರಾಶಿಯ ಒಡೆಯ ಹಾಗೂ ನಕ್ಷತ್ರದ ಅಧಿಪತಿಯ ಮೇರೆಗೆ ಬೇರೆ ಬೇರೆ ಆಗಿರುತ್ತೆ. ಪ್ರತಿಯೊಂದು ರಾಶಿಗೂ, ನಕ್ಷತ್ರಕ್ಕೂ ಕಾರಕತ್ವಗಳು ಬೇರೆ ಬೇರೆ ಆಗಿರುತ್ತೆ. ಆದಕಾರಣ ವರುಗಳ ಗುಣಗಳೂ ಬೇರೆ ಬೇರೆಯಾಗಿರುತ್ತೆ.

11. If we include the mythological aspects as well, it says that Rohini was the most beloved wife of Moon who was believed to be the acquirer of much outer ಮೇಕಪ್ through cosmetics and ಭರಣಗಳು ಮತ್ತುಅವಳು ಬಹಳ  beautiful in appearance for which this Nakshatra is also perceived to bring refined taste in the natives.

12. ನೀವು ನಮ್ಮ ಪುರಾಣದ ಕಥೆಯನ್ನ ಕೇಳಿದರೆ, ರೋಹಿಣೀ ಎನ್ನುವವರು ಚಂದ್ರನ ಪ್ರೀತಿಯ ಹೆಂಡತಿಯಾಗಿರುವಳು. ಇವಳು ಆಭರಣಗಳನ್ನ ಹಾಗೂ ಬಾಹ್ಯ ಮೇಕಪ್ಪನ್ನ ಮಾಡಿಕೊಂಡಿದ್ದು ಆವಾಗಿನಕಾಲದಲ್ಲಿ ಬಹಳ ಚಂದವಾಗಿ ಇದ್ದ ಕಾರಣ ಈ ನಕ್ಷತ್ರದವರಲ್ಲಿಯೂ ಒಂದು ರೀತಿಯ ಬೇರೇನೇ ರುಚಿ ಇರುತ್ತೆ ಹಾಗೂ ಸುಂದರತೆ ಕಾಣಿಸುತ್ತೆ.

13. Now presently we deal with Rohini Nakshatra, whose pada 1 falls in Aries, the lord of it is Mars, Rohini-2nd Pada falls in Taurus, whose lord is Venus, Rohini 3rd Pada will be in Gemini, whose lord is Mercury and the lost Pada of Rohini-4 falls in Karka or Cancer.

14. ರೋಹಿಣಿಯ ೧ನೇ ಪಾದವು ಮೇಶದಲ್ಲಿದ್ದರೆ, ರೋಹಿಣಿಯ ೨ನೇ ಪಾದವು ವೃಷಭ ರಾಶಿಯಲ್ಲಿಯೇ ಇರುತ್ತೆ. ಮೂರನೇ ಪಾದವು ಮಿಥುನಕ್ಕೆ ಬಂದಲ್ಲಿ, ನಾಲ್ಕನೇ ಪಾದವು ಕರ್ಕ ರಾಶಿಗೆ ಬರುತ್ತೆ.

15. Again Tatwas of each Nakshatra is different and in each Nakshatra also Tatwas are different, because of padas of Nakshatra falls in different in different Rashis!

16. ಪ್ರತೀ ನಕ್ಷತ್ರದ ತತ್ವವೂ ಬಹಳ ಬೇರೆ ಬೇರೆಯಾಗಿರುತ್ತೆ. ಮತ್ತೆ ನಾನು ಈ ಮೊದಲೇ ಹೇಳಿದಂತೆ ಪ್ರತೀ ಪಾದಗಳೂ ಬೇರೆ ಬೇರೆ ರಾಶಿಗೆ ಬೀಳುವುದರಿಂದ ಅವುಗಳ ತತ್ವಗಳೂ ಬೇರೆ ಬೇರೆಯಾಗಿರುತ್ತೆ.

17. For example, let us take Rohini Nakshatra, pada 1 has Agni Tatwa as the Lord of it is Mars which is Fiery Sign! The 2nd Pada of Rohini has Jalamsha much as the lord is Venus. The third pada of Rohini falls in Vayu  Tatwa and the last pada, i.e. 4th Pada falls in Watery sign and hence has “ Jala Tatwas”!

18. ಉದಾಹರಣೆಗಾಗಿ, ರೋಹಿಣಿಯ ಪಾದ ೧  ಕುಜನಡಿ ಬರುವುದರಿಂದ, ಅಗ್ನಿತತ್ವವನ್ನ ಪ್ರತಿಪಾದಿಸುತ್ತದೆ. ಅದೇ ರೋಹಿಣಿಯ ೨ ನೇ ಪಾದವು ಪ್ರುಥ್ವೀ ತತ್ವದಡಿ, ಜಲಾಂಶ ಜಾಸ್ತಿ ಇರುವ ಶುಕ್ರನ ಅಡಿಯಲ್ಲಿ ಬರುತ್ತೆ. ರೋಹಿಣಿಯ ಮೂರನೇ ಪಾದವು  ವಾಯುತತ್ವವಾದ ಬುಧನಡಿ ಬಂದರೆ ನಾಲ್ಕನೇ ಪಾದವು ಜಲರಾಶಿಯಾದ ಅದರ ಅಧಿಪತಿಯೂ ಜಲರಾಶಿಗೆ ಪ್ರಖ್ಯಾತನಾದಂತಹ  ಚಂದ್ರನಡಿಯಲ್ಲಿ ಬರುತ್ತೆ.

19. Again the Lord which is ruling the star Rohini is Moon which is again Jala Tatwa Planet.

20. ಮತ್ತೆ ರೋಹಿಣಿಯನ್ನ ಆಳುವವರೂ ಜಲತತ್ವದ ಗ್ರಹವಾದ ಚಂದ್ರ.ಅಂದರೆ ರೋಹಿಣೀ ನಕ್ಷತ್ರದವರು ತಿನ್ನುವುದರಲ್ಲಿ ಹಾಗೂ ಅಡುಗೆ ಮಾಡುವುದರಲ್ಲಿ, ಹೋಟೆಲ್ ಬಿಸಿನೆಸ್ಸಿನಲ್ಲಿ ಬಹಳ ಎಕ್ಸ್ಪರ್ಟ್ಸ್ ಅಂತ ಅರ್ಥವಾಯುತು.

21. See Rohini  is in Toto,ruled by Mon-Mars, Mon-Venus, Mon-Mercury and Mon-Mon. Hence all four padas born people has different characteristics!

22. ರೋಹಿಣಿ ನಕ್ಷತ್ರದಡಿಯಲ್ಲಿ ಚಂದ್ರ-ಕುಜ, ಚಂದ್ರ-ಶುಕ್ರ, ಚಂದ್ರ-ಬುಧ  ಮತ್ತು ಚಂದ್ರ-ಚಂದ್ರ-ಚಂದ್ರನ ಇನ್ಫ್ಲೂಯೆನ್ಸ್ ಜಾಸ್ತಿ ಇದೆ ಅಂತ ಅರ್ಥವಾಯ್ತು.

23. In fact you may observe that Rohini people are one kind of Chatter Box and while talking they talk very speedily and in their speed, they repeat
The things very frequently as the planet ruling it is Moon which is very fast moving planet! So you can see their fastness in all their actions!

ನೀವೆಲ್ಲಾ ನೋಡಿರಬಹುದು, ರೋಹಿಣಿಯವರು ಒಂದು ರೀತಿಯ ಗಿಳಿ ಅಥವಾ ಪೋಪಟ್ ಇದ್ದ ಹಾಗೆ. ಅದು ಏತಕ್ಕೇ ಅಂತ ಕೇಳುತ್ತೀರಾ? ಇವರ ಅಧಿಪತಿಯೇ ಫಾಷ್ಟ್ ಮೂವಿಂಗ್ ಪ್ಲೇನೆಟ ಚಂದ್ರ. ಆದ್ದರಿಂದ ರೋಹಿಣಿಯವರೂ ಸಹ ಬಹಳ ಫಾಷ್ಟ್  ಆಗಿ ಮಾತನಾಡುವರು. ಆದರೆ ಅವರು ಮಾತನಾಡುವಾಗ ನೀವುಗಳೆಲ್ಲಾ ನೋಡಿ, ಅವರುಗಳು ಒಂದೇ ಮಾತನ್ನ ಹಲವು ಬಾರಿ ದೌಡಾಯಿಸುತ್ಟಾರೆ ಅಥವಾ  ರಿಪೀಟ್ ಮಾಡುತ್ತಿರುವುದು  ಜಾಸ್ತಿ! ಇದಕ್ಕೆ ಕಾರಣವೇ ಚಂದ್ರ. ಆತನು ಒಂದು ರಾಶಿಯಲ್ಲಿ ಬರೇ ೨ ೧/೨ ದಿನಗಳು ಮಾತ್ರ ಇರುವುದು. ಚಂದ್ರ ಮನೋಕಾರಕ. ಆದ್ದರಿಂದ ಈ ರಿಪಿಟಿಷನ್ ಅವರಲ್ಲಿ!

24. They are very good cook in fact as Moon and Venus are the best for the hotel job. They cook very delicious food and also very tasty food also! In fact those whose nakshatra is just near to the exaltation, i.e. 3*, they cook the food very well. They get name and fame in these fields! I can quote here, my Sister in law whose Nakshatra is Rohini, which is just 4* whereas my Rohini is in 16*09’. We both are cooks, but she is the best cook in my entire family. Without any particular things required for the preparation is not available, she will not cook at all. Everything should be as per her requirements! This is the combination of Moon and Venus. There is an art in her cook! There is the best taste in her cook!

25. ಈ ನಕ್ಷತ್ರದಲ್ಲಿ ಯಾರಾದರೂ ೩ ಡಿಗ್ರಿ ಅಥವಾ ಅದರ ಆಸುಪಾಸಿನಲ್ಲಿದ್ದರೆ, ಅವರು ಒಬ್ಬ ಬಹಳ ದೊಡ್ಡ ಅಡುಗೆದಾರ ಅಥವಾ ಅಡುಗೆ ದಾರಿಯಾಗಿರುತ್ತಾರೆ ಅಥವಾ ಆಗುತ್ತಾರೆ. ಅದೂ ಬಹಳ ರುಚಿ ರುಚಿಯಾಗಿ ಅಡುಗೆಯನ್ನ ಮಾಡುವ ಕೆಟೆಗರಿಗೆ ಸೇರುವಂತಹವರು. ನನ್ನದೂ ರೋಹಿಣೀ ನಕ್ಷತ್ರವೇ. ಆದರೆ ೧೬.೦೯ ಡಿಗ್ರೀ. ನನ್ನ ದೊಡ್ಡ ಅತ್ತಿಗೆ ಪಿ ವೈ.ಸುಶೀಲಾ ಅವರದ್ದೂ ರೋಹಿಣಿ ನಕ್ಷತ್ರವೇ. ಆದರೆ, ಅವರದ್ದು  ಬರೇ ೪ ಡಿಗ್ರೀ ಮಾತ್ರ. ಅವರ ಅಪ್ಪ ಶ್ರೀಯುತರಾದ ದಿವಂಗತ ಪರಮೇಷ್ವರ ಉರಾಳರು ಗಾಂಧಿಬಜಾರಿನ ಮೊದಲಿನ ವಿದ್ಯಾರ್ಥೀ ಭವನದ ಮಾಲೀಕರು. ಅವರು ಒಬ್ಬ ಶ್ರೇಷ್ಠ ರುಚಿ ರುಚಿಯಾದ ತಿಂಡಿಗಳನ್ನ ಆ ಹೋಟೇಲಿನಲ್ಲಿ  ೧೯೩೦-೪೦ ಯಲ್ಲಿ ಮಾಡುತ್ತಿದ್ದು ಆ ಹೋಟೇಲನ್ನ ಇಂಟರ್ನೇಷನಲ್ ಸ್ಟೇಂಡರ್ಡಿಗೆ ತಂದ ಖ್ಯಾತಿಗೆ ಪಾತ್ರರಾದಂತಹವರು! ನಮ್ಮ ಅತ್ತಿಗೆಯೂ ಅವರ ದೊಡ್ಡ ಮಗಳೇ. ನಮ್ಮ ಅತ್ತಿಗೆಯ ಅಡುಗೆಯ ರುಚಿಯನ್ನ ನೀವೆಲ್ಲಿಯಾದರೂ ಸವಿದಲ್ಲಿ ಯಾವ ಸಂಜೀವ ಕಪೂರರೂ ಅವರ ಎದಿರಿನಲ್ಲಿ ಬರಲಿಕ್ಕಿಲ್ಲ. ಅಲ್ಲ ಇದನ್ನ ಮಾತಿಗೆ ಹೇಳುವುದು. ಯಾರಾದರೂ ಸಂಜೀವ ಕಪೂರರಿದ್ದರೆ ಬೇಸರ ಪಡದಿರಿ. ಒಂದು ವೇಳೆ ನಿಮ್ಮ ಜಾತಕದಲ್ಲಿಯೂ ರೋಹಿಣಿ ನಕ್ಷತ್ರವು ೩ ಡಿಗ್ರೀಯಲ್ಲಿದ್ದರೆ, ನೀವೂ ಕೂಡ ಬಹಳ ದೊಡ್ಡ ಟೀವೀ ಷೋನಲ್ಲಿ ಬರಲು ಲಾಯಕ್ಕೆನ್ನಿ. ನಾನು ಯಾತಕ್ಕೆ ೩ ಡಿಗ್ರೀ ಅಂತ ಹೇಳುತ್ತಿದ್ದೇ ಅಂದರೆ, ಆ ಅಂಶದಲ್ಲಿ ಚಂದ್ರನು ವೃಷಭ ರಾಶಿಯಲ್ಲಿ ಉಛ್ಚನಾಗಿರುತ್ತಾನೆ. ಅದಕ್ಕೇ ಅವರುಗಳು ಬಹಳ ರುಚಿಕರವಾಗಿ ಅಡುಗೆಯನ್ನ ಮಾಡುವುದು. ಇಲ್ಲಿ ನಾನು ಕೂಡಾ ಅಡುಗೆಯನ್ನ ಮಾಡಿ  “ಯೂ ಟ್ಯೂಬಿಗೆ” ಅಪ್ಲೋಡ್ ಮಾಡುತ್ತೇನೆ.  ನಾನು ಕೂಡ ಅರ್ಧ ಗಂಟೆಯಲ್ಲಿ ೩ ಮೇಲೋಗರವನ್ನ ಮಾಡುತ್ತೇನೆ. ಆದರೆ ರುಚಿ, ಅದು ನಮ್ಮ ದೊಡ್ಡ ಅತ್ತಿಗೆಯ ಕೈಯಲ್ಲಿರುತ್ತೆ ಕಾಣಿ. ನೋಡಿ , ಅದೇ ರೋಹಿಣೀ ನಕ್ಷತ್ರದ ಇಬ್ಬರಲ್ಲಿ ಎಷ್ಟೊಂದು ವ್ಯತ್ಯಾಸಗಳು? ಇಲ್ಲಿ ಇನ್ನೊಂದು ಮಾತು. ಈ ರಾಶಿಯ ಅಧಿಪತಿಯೂ ಕೂಡ ಜಲರಾಶಿ ತತ್ವದ ಶುಕ್ರನಾದುದರಿಂದ ಇವರುಗಳು ಮಾಡುವ ಅಡುಗೆಯಲ್ಲಿ ರುಚಿ ಮತ್ತು ಅಂದ ಕಾಣಿಸುವುದು. ಶುಕ್ರ ಮತ್ತು ಚಂದ್ರ ಸೇರಿದರೆಂದರೆ, ಅವರೊಬ್ಬರು ಶ್ರೇಷ್ಠ ಅಡುಗೆದಾರರೇ.

26. If Moon-Mars joined together, then such people are very disciplined as well as blunt in their tongue! This is the case of those who born in Rohini-1st Padas!  Where Moon and Mercury joined, then their talk will be castles in the air! They are called to be bluff masters as Mercury is Vayu Tatwa planet. They are very intelligent, interpreters also! They may excel in journalist or in TV news readers job!

27. ಒಂದು ವೇಳೆ ಚಂದ್ರ ಮತ್ತು ಕುಜನು ಸೇರಿದ್ದರೆ, ಅವರುಗಳು ಬಹಳ ಸ್ಟ್ರಿಕ್ಟ್ ಶಿಸ್ತುಗಾರರು ಆಗುತ್ತಾರೆ. ಆದರೆ ಅವರ ನಾಲಿಗೆ ಮಾತ್ರ ಹರಿತವಾದ ಚೂರಿಯಂತೆ. ಇದು ರೋಹಿಣಿಯ ೧ನೇ ಪಾದಕ್ಕೆ ಸೇರುತ್ತೆ. ಅದೇ ರೋಹಿಣಿಯ ೩ ನೇ ಪಾದದವರಲ್ಲಿ ಗಾಳಿಯಲ್ಲಿ ದೊಡ್ಡ ದೊಡ್ಡ ಆಟಮ್ ಬಾಂಬನ್ನೇ ಬಿಡುವರು. ಕಾರಣ ಬುಧನು ವಾಯು ತತ್ವದ ರಾಶಿ. ಸಾಮಾನ್ಯವಾಗಿ ರೋಹಿಣಿಯ ನಕ್ಷತ್ರದವರೇ ಮಾತುಗಾರರು. ಅದಕ್ಕೆ ಶುಕ್ರನ ಸಪ್ಪೋರ್ಟ್ ಇದ್ದಲ್ಲಿ ಕಲಾಗಾರಿತನ ಬಂದಿದ್ದು ಕಲೆಯಬಗ್ಗೆ ಮಾತನಾಡುವರು. ಅವರು ವೇಷಧಾರಿಗಳಾಗಿದ್ದ ಪಕ್ಷದಲ್ಲಿ ಅವರು ವಹಿಸುವ  ಪಾತ್ರಗಳ ಬಗ್ಗೆಮಾತನಾಡುವರು. ಅವರು ಒಂದುವೇಳೆ ರಾಜಕೀಯದ ಪುಢಾರಿಗಳಾಗಿದ್ದ ಪಕ್ಷದಲ್ಲಿ ರಾಜಕೀಯದ ಬಗ್ಗೇನೇ ಮತನಾಡುವರು. ಆದರೆ ಈ ಬುಧ ಪ್ರೇರಿತ ರೋಹಿಣಿಯವರು ಮಾತ್ರ ಮಾತನಾಡುವಲ್ಲಿ ಬಹಳ ಮುಂಗ್ರಿಗಳು. ಮೊದಲೇ ರೋಹಿಣಿಯವರಿಗೆ ಅಬ್ಬ! ಏನು ಮಾತನಾಡುತ್ತಾರಪ್ಪಾಅಂತ ಹೇಳುತ್ತಿರುತ್ತಾರೆ. ಇವರು ೭೦ ಎಮ್ ಎಮ್  ರೀಲನ್ನ ಬಿಡುತ್ತಾರಪ್ಪಾ ಅಂತ ಇವರ ಬಗ್ಗೆ ಜನರು ಹೇಳುತ್ತಿರುತ್ತಾರೆ. ರೋಹಿಣಿಯವರು ನೂರಕ್ಕೆ ನೂರು ಇದ್ದದ್ದನ್ನ ಇದ್ದ ಹಾಗೇ ಹೇಳುವವರ ಗುಂಪಿಗೆ ಸೇರುತ್ತಾರೆ. ಇವರಿಗೆ ಸುಳ್ಳು ಹೇಳುವುದು ಸಾಮಾನ್ಯವಾಗಿ ಗೊತ್ತಿಲ್ಲಾ ಅನ್ನಿ. ಅದರಲ್ಲೂ ಚಂದ್ರ-ಬುಧನ ಜೊತೆ ಮಾತ್ರ ಅಸಾಧ್ಯ. ಸಾಮಾನ್ಯವಾಗಿ ರಾಜಕೀಯ ವ್ಯಕ್ತಿಗಳಲ್ಲಿ ರೋಹಿಣೀ ಮೂರನೇ ನವಾಂಶದವರು ಜಾಸ್ತಿ. ಕಲಾಗಾರಿಕೆಯಲ್ಲಿ ರೋಹಿಣೀ ೨ನೇ ಪಾದದವರು ಜಾಸ್ತಿ. ಅವರೊಬ್ಬರು ಬುಧ್ಧಿವಂತ ವ್ಯಕ್ತಿ. ಸಮಾಜ ಸುಧಾರಕರೂ ಹೌದು! ರೋಹಿಣೀ ಎರಡನೇ ಪಾದದವರಿಗೆ ಶುಕ್ರನೇ ಅಧಿಪತಿಯಾದ ಕಾರಣ, ಇವರಲ್ಲಿ ಕೃಷ್ಣನ ೧೬ ವಿದ್ಯೆಗಳು, ಶುಕ್ರನ ೬೪ ಕಲೆಗಳು ಕೂಡಿದ್ದು ಒಟ್ಟಿಗೆ ೮೦ ಕಲೆಗಳ ರಾಜನಾಗಿರುತ್ತಾರೆ. ಆದ್ದರಿಂದ ಇವರು ಕಥೆ, ಕವನ್, ಡ್ರಾಮಾ, ಏಕ್ಟಿಂಗ್, ರೈಟಿಂಗ್ , ಜ್ಯೋತಿಷ್ಯ ಇತ್ಯಾದಿಗಳಲ್ಲಿ ಪ್ರಾವೀಣ್ಯತೆಯನ್ನ ತೆಗೆದುಕೊಂಡಿರುತ್ತಾರೆ.

28. When Moon and Moon come in action, just in the case of Rohini-4th Padas, they are also very fast speakers and while talking they may go here and there as both are Jala Tatwa planet. Again they are the best care takes as mother plays there since Cancer is the 4th rashi from Kalapurusha Chakra and 4th house is for Mother, happiness, properties, basic education up to 10th standard and so on.

29. ಇನ್ನು ಚಂದ್ರ-ಚಂದ್ರನ ಯುಕ್ತಿ! ಅಂದರೆ ರೋಹಿಣೀ ೪ನೇ ಪಾದದವರು ಬಹಳ ವೇಗವಾಗಿ ಮಾತನಾಡುವವರು. ಹಾಗೆ ಮಾತನಾಡುವಾಗ ಅಲ್ಲೊಂದು, ಇಲ್ಲೊಂದು ಮಾತು ಆಚೆ, ಈಚೆ ಹೋಗಲೂ ಸಾಧ್ಯ. ಕಾರಣ ಇದು ಪೂರಾ ಜಲ ತತ್ವದ ರಾಶಿ. ಜಲವಿದ್ದರೆ ಜಾರುವುದು ಜಾಸ್ತಿ! ಆದರೆ ಇವರೊಬ್ಬರು ಅತೀ ಉತ್ತಮ ತಾಯಿ! ಮಕ್ಕಳನ್ನ ಕೇರ್ ತೆಗೆದುಕೊಳ್ಳುವುದರಲ್ಲಿ ಇವರ ಬಿಟ್ಟರೆ ಬೇರೊಬ್ಬರು ಸಿಕ್ಕ. ಹೆಚ್ಚಿಗೆ ನರ್ಸ್ ಹುದ್ದೆಯಲ್ಲಿ ನಿಮಗೆ ಇವರಂಥವರೇ ಸಿಗುತ್ತಾರೆ. ಇದು ಕಾಲಪುರುಷನ ೪ನೇ ರಾಶಿ. ಇದು ತಾಯಿಯ ರಾಶಿ. ಇದು ಮನೆ ಮತ್ತು ಮಠದ ರಾಶಿ. ಇದು ಪ್ರೈಮರೀ ವಿದ್ಯಾಭ್ಯಾಸದ ರಾಶಿ. ಇದು ಪಬ್ಲಿಕ್ ಜನರ ರಾಶಿ! ಇದು ಸಂತೋಷಕ್ಕೆ ಹೇಳಿಸಿಟ್ಟಂತಹ, ಹಾಗೂ ಸಂತೋಷ ಸಿಗುವಂತಹ ರಾಶಿ.  ಇದು  ಮನೆ ಮತ್ತು ಭೂಮಿಯನ್ನ ಕೊಂಡುಕೊಳ್ಳುವ ರಾಶಿ.

30. In fact the Taurus Rashi itself is Prithvi tatwa rashi and hence Rohini Nakshatra people are to be careful in eating. The rashi itself is represented by Bull and hence even if they eat less also, there is a chance of putting up weight! Please be careful about the cholesterol problems!

31. ವೃಷಭ ರಾಶಿಯು ಪ್ರಿಥ್ವೀ ತತ್ವದ ರಾಶಿಯಾದ ಕಾರಣ ಇವರು ತಿನ್ನುವುದರಲ್ಲಿ ಬಹಳ ಹುಷಾರಾಗಿರಬೇಕು. ಅವರು ತಿನ್ನುವುದು ಸ್ವಲ್ಪವೇ ಆದರೂ ಅವರ ತೂಕ ಜಾಸ್ತಿ ಆಗಲು ಸಾಧ್ಯತೆ ಜಾಸ್ತಿ, ಕಾರಣ ಇದು ಗೂಳಿಯ ರಾಶಿ. ಇವರುಗಳಿಗೆ ಕೊಲ್ಲೆಷ್ಟೆರೋಲ್ ತೊಂದರೆಗಳು ಬರುವುದುಂಟು.

32. One of the negative points of Rohini Nakshatra is that you have to listen to them else they will get angry! But they can be believed cent percent as they never lie in their life!
33. ಇವರಲ್ಲೊಂದು ಋಣಾತ್ಮಕ ಭಾವನೆ ಅಥವಾ ಗುಣವುಂಟು. ಅದೇನೆಂದರೆ ಅವರ ಮಾತುಗಳನ್ನ ನೀವುಗಳು ಕೇಳಬೇಕು. ಇಲಾಂದ್ರೆ ಅವರುಗಳಿಗೆ ಸಿಟ್ಟು ಬಹಳ ಬೇಗ ಬರುತ್ತೆ! ಇವರುಗಳನ್ನ ವ್ಯವಹಾರಿಕ ಜೀವನದಲ್ಲಿ ನೂರಕ್ಕೆ ನೂರು ನಂಬಬಹುದು. ಇವರು ಮೋಸದ ವ್ಯಕ್ತಿ ಅಲ್ಲವೇ ಅಲ್ಲ. ಹೇರಾಫೇರೀ ಜನರಂತೂ ಅಲ್ಲವೇ ಅಲ್ಲ.

34. There are many things to be told about Rohini. But I will stop here only. They may be healed by Hindola Raaga.

35. ಇವರಿಗೆ ಪರಿಹಾರ ರೂಪದಲ್ಲಿ ಹಿಂದೋಳ ರಾಗವನ್ನ ಕೇಳುತ್ತಿರಬೇಕು. ಯಾವುದೇ ಹೆಣ್ಣು ದೇವತೆಯನ್ನ ಪೂಜಿಸಿದಷ್ಟು ಬಹಳ ಒಳ್ಳೆಯದಾಗುವುದು. ಕಮಲಶಿಲೆ ಅಮ್ಮ ದುರ್ಗಾ ಪರಮೇಶ್ವರಿ, ಕೊಲ್ಲೂರು ಅಮ್ಮ ಮೂಕಾಂಬಿಕಾ, ಮಾ ಸಂತೋಷಿ ಮಾತ, ಮಾ ಜಗದಂಬಾ, ಮಾ ದುರ್ಗ, ಮಾ ಕಾತ್ಯಾಯನೀ ದೇವಿ, ಇಷ್ಟ ದೇವತೆ, ಕಟೀಲು ದುರ್ಗ, ಶ್ರಂಗೇರಿಯ ಶಾರದಾಂಬಾ....ಹೀಗೆ ಇವರುಗಳನ್ನ ನಂಬಿದಲ್ಲಿ, ನಂಬಿದವರು ಕೆಟ್ಟಿಲ್ಲವಪ್ಪಾ ಅನ್ನುವಂತೆ ಇವರಿಗೂ ಒಳ್ಳೆಯದಾಗುತ್ತೆ.

By Dr. P Surendra Upadhya, M.Sc., Ph.D (Astrology)
19/07/2017/2017

Comments

Popular Posts