Pushya Nakshatra ಪುಷ್ಯ ನಕ್ಷತ್ರ


Pushya Nakshatra
ಪುಷ್ಯ ನಕ್ಷತ್ರ

1.      Pushya Nakshatra comes under Saturn. Some people may ask me which are the Nakshatras are coming under which planets? For them undermentioned  table is given, which you please note:-

2.      ಪುಷ್ಯ ನಕ್ಷತ್ರದ ಅಧಿಪತಿ ಶನಿ ಮಹಾದೇವ. ಕೆಲವರು ನನ್ನನ್ನ ಕೇಳಬಹುದು, ಯಾವ, ಯಾವ ನಕ್ಷತ್ರಗಳು ಈ ೯ ಗ್ರಹಗಳ ಕೆಳಗಡೆ ಬರುತ್ತವೆ ಅಂತ. ಅಂತಹವರಿಗೆ ಈ ಕೆಳಗಿನ ಕೋಷ್ಟಕವನ್ನ ಲಗತ್ತಿಸಿದ್ದೇನೆ.

Ketu
Venus
Sun
Moon
Mars
Ashvini
Bharani
Krittika
Rohini
Mrigasira
Makha
Pubba
Uttara
Hasta
Chitta
Mula
P Ashadha
U.Ashadha
Shravana
DHanishtha





Dasha Period.
Dasha Period.
Dasha Period.
Dasha Period.
Dasha Period.
7 Years
20 Years
6 Years
10 Years
7 Years







Rahu
Jupiter
Saturn
Mercury
Aridra
Punarvasu
Pushya
Ashlesha
Swati
Vishakha
Anuradha
Jyeshtha
Shatabhisha
P.Bhadra
U.bhadra
Revati




Dasha Period.
Dasha Period.
Dasha Period.
Dasha Period.
18 Years
16 Years
19 Years
17 Years









3.      Saturn’s Nakshatra are much disciplined. They do not do any “Hera ferry” and do not allow others also to do the same. So also Pushya, Anuradha and Uttarabhadra Nakshatra persons. Even Sravana Nakshatra also comes under this discipline category as the lord of the Rashi is Saturn. Uttarashadha, Dhanishtha Nakshatra persons are also much disciplined. So you have to be very careful with them

4.      ಶನಿಯ ನಕ್ಷತ್ರವು ಬಹಳ ಶಿಸ್ತಿನ ನಕ್ಷತ್ರ. ಈ ನಕ್ಷತ್ರಗಳಲ್ಲಿ ಯಾರೇ ಹುಟ್ಟಿರಲಿ ಅವರುಗಳು ಶಿಸ್ತನ್ನ ಕಾಪಾಡಿಕೊಂಡು ಬರುತ್ತಿರುತ್ತಾರೆ. ಅವರಲ್ಲಿ ಹೇರಾಫ಼ೇರಿ ಮನೋಭಾವನೆಯು ಇಲ್ಲವೇ ಇಲ್ಲ, ಮತ್ತು ಅವರು ಬೇರವರಿಗೆ ಮಾಡಲೂ ಕೂಡ ಬಿಡೋದಿಲ್ಲ. ಶ್ರವಣ ನಕ್ಷತ್ರದವರೂ ಸಹ ಈ ಶಿಸ್ತಿನ ಕೆಳಗಡೆ ಬರುತ್ತವೆ, ಕಾರಣ ಶ್ರವಣ ನಕ್ಷತ್ರವಿರುವ ರಾಶಿಯ ಅಧಿಪತಿ ಶನಿದೇವ, ಆದರೆ ಶ್ರವಣ ನಕ್ಷತ್ರಾಧಿಪತಿ ಮಾತ್ರ ಚಂದ್ರ, ಮನೋಕಾರಕ ಗ್ರಹ. ಹಾಗೆಯೇ ಉತ್ತರಾಭಾದ್ರ ಮತ್ತು ಧನಿಷ್ಠ ನಕ್ಷತ್ರಗಳೂ ಕೂಡ ಬಹಳ ಶಿಸ್ತಿನ ಸರದಾರರು.
5.      Jupiter’s Nakshatra’s energy will be going up from Punarvasu to  Vishakha andthen to Poorvabhadra. Highest Jupiter’s energy will be there in Poorvabhadra.

6.      ಗುರುವಿನ ನಕ್ಷತ್ರದ ಶಕ್ತಿಯು ಪುನರ್ವಸ್ಸುವಿನಿಂದ ವಿಶಾಖಕ್ಕೆಹೊರಟು, ವಿಶಾಖಾದಿಂದ ಪೂರ್ವಾಭಾದ್ರಾದತ್ತ ಹೊರಡುತ್ತದೆ. ಆದ್ದರಿಂದ, ಪೂರ್ವಾಭಾದ್ರದವರಿಗೆ ಹೈಯೆಷ್ಟ್ ಗುರುವಿನ ಎನೆರ್ಜಿ ಲವೆಲ್ ಇರುತ್ತೆ.

7.      Purvabhadra Nakshatra people are great trainers. Punaravasu people have  usually photogenic faceand round face like the Moon. The symbol of P.Bhadra is Lion. But mere Lion is not sufficient, since Lion will eat and take rest for two to three days! Such a lazy animal it is!

8.      ಪೂರ್ವಾಭಾದ್ರಾ ನಕ್ಷತ್ರದವರು ಒಳ್ಳೇ ದೊಡ್ಡ ಟ್ರೈನೆರ್ಸ್ಗಳು. ಪುನರ್ವಸು ನಕ್ಷತ್ರದವರಲ್ಲಿ ಫೋಟೋಜೆನಿಕ್ ಮುಖ ಉಂಟು, ಹಾಗೂ ಅವರದ್ದು ಉರುಟು ಮುಖ, ಕಾರಣ ಚಂದ್ರನು ಉರುಟಲ್ಲವೇ? ಅವರೊಬ್ಬರು ಗ್ರೇಟ್ ಟೀಚರ್ಸ್!, ಕಾರಣ ಇವರಲ್ಲಿ ಗುರುವಿನ ಹೈಯಷ್ಟ್ ಎನರ್ಜಿ ಉಂಟು. ಪೂರ್ವಾಭಾದ್ರಾ ನಕ್ಷತ್ರದ ಗುರುತು ಸಿಂಹ. ಆದರೆ ಬರೇ ಸಿಂಹದ ಗುರುತಿದ್ದರೆ ಸಾಕೋ? ಸಿಂಹ ಏನು ಮಾಡುತ್ತೆ? ತಿಂದು ಗಟ್ಟಿಯಾಗಿ ಮಲಗಿ ನಿದ್ರಿಸುತ್ತೆ! ಇನ್ನೆರಡು ಮೂರು ದಿನ ಅದಕ್ಕೆ ಯಾವ ಚಿಂತೆಯೂ ಬೇಡ !

9.      For that Punarvasu is for training as they mingle with the public most.  In Mithuna, since it is Vayu Tatwa, they are not committed. Punarvasu 1, 2, 3 Padas are showing escapism. Particularly Punarvasu-1 Pada persons are telling lie as it is coming under Mars, and Mars is an impulsive planet. Again Punarvasu -1 comes in Gemini, which is Vayu Tatwa rashi. Even Punaravasu1, 2 and 3 people show escapism as they are coming under Vayu Tatwa Rashi.

10. ಹಾಗೆಯೇ ಪುನರ್ವಸ್ಸು ನಕ್ಷತ್ರದವರಿಗೂ ಈ ಟ್ರೈನಿಂಗ್ ಕೊಡುವಂತಹ ರೋಗ ಉಂಟು. ಇವರುಗಳ ಹತ್ತಿರ ಸಾರ್ವಜನಿಕ ಸಂಬಂಧ ಬಹಳ ಚೆನ್ನಾಗಿ ಉಂಟು! ಈ ಪುನರ್ವಸ್ಸು ನಕ್ಷತ್ರ, ಮಿಥುನ ರಾಶಿಯವರಿಗೆ ಯಾವ ಜವಾಬ್ದಾರಿಯೂ ಇಲ್ಲಾ ಅನ್ನಿ, ಕಾರಣ ಮಿಥುನವು ವಾಯುತತ್ವದ ರಾಶಿ. ಈ ಪುನರ್ವಸ್ಸು ನಕ್ಷತ್ರ ಪಾದ ೧,೨ ಮತ್ತು ೩ ನಕ್ಷತ್ರದವರಿಗೆ ಪರಾರಿ ಆಗುವ ಬುಧ್ಧಿ ಬಹಳ ಉಂಟು! ಅದರಲ್ಲೂ ಪುನರ್ವಸ್ಸು ೧ ಮತ್ತು ೪ನೇ ಪಾದದವರಿಗೆ ಸುಳ್ಳನ್ನ ಹೇಳುವ ಚಾಳಿ ಬಹಳ! ಕಾರಣ, ವಾಯು ತತ್ವ ಹಾಗೂ ಜಲತತ್ವದಲ್ಲಿ ಅವರುಗಳು ಬೆಳೆದವರು! ಅಂದರೆ ಎಲ್ಲಾ ವಾಯು ತತ್ವ  ಹಾಗೂ ಜಲ ತತ್ವದವರು ಸುಳ್ಳನ್ನ ಹೇಳಬೇಕೆಂದಿಲ್ಲ. ಅದು ನಿಮ್ಮ ನಿಮ್ಮ ಜಾತಕದಲ್ಲಿ ಗ್ರಹಗಳ ಸ್ಥಾನ, ಮಾನವನ್ನ ನಿರ್ಬಲಿಸಿರುತ್ತೆ.

11. But in Karka Rashi, they got commitment. In Punarvasu-4 Pada has “Gaja-Kesari Yoga as Jupiter and Moon play the role here. Punarvasu does not take much food as it is Akasha Tatwa. They are “Alpa Trupta” soul.

12. ಆದರೆ ಕರ್ಕ ರಾಶಿಯ ಪುನರ್ವಸ್ಸು ನಕ್ಷತ್ರದವರಿಗೆ, ಅಂದರೆ ಪುನರ್ವಸ್ಸು -೪ನೇ ಪಾದದವರಿಗೆ ಕಮಿಟ್ಮೆಂಟ್ಸ್ ಜಾಸ್ತಿ ಉಂಟು! ಯಾಕೇ ಅಂತ ನೀವು ಕೇಳಬಹುದು. ಕಾರಣ ಚಂದ್ರ ಮತ್ತು ಗುರು ಸೇರಿದರೆ, ಅದು ಗಜ-ಕೇಸರೀ ಯೋಗ ಆಗುವುದಿಲ್ಲವೋ? ಅದಕ್ಕೇ.ಇವರುಗಳು ಮಿತ ಆಹಾರಿಗಳು. ಹೆಚ್ಚು ಬಕನಂತೆ ತಿನ್ನೋರ್ ಜಾತಿಗೆ ಸೇರುವುದಿಲ್ಲ. ಕಾರಣ ಇವರಿಗೆ ಗುರುವಿನ ಕೃಪಾ ಕಟಾಕ್ಷದಂತೆ ದೇಹವು ಊದೋ ಚಿಂತೆ ಜಾಸ್ತಿ. ಅದೂ ಕೂಡ ನಿಜಾ ಅನ್ನಿ!

13.  They eat dairy product. Even Punarvasu- Gemini persons are not eating much. Punarvasu people are very attractive by face as the rashi pertains to Moon; their face also looks like Moon! For Stones, we have to see Lagna. As sort of Parihara, they have to visit Athiteswara Temple in Tamilnadu. This is particularly for Punarvasu. Mohana Raaga is giving peace to Punarvasu people.

14. ಇವರುಗಳಲ್ಲಿ ಡೈರಿ ಪ್ರೊಡಕ್ಟ್ಸನ್ನ ತಿನ್ನೋ ಚಟ ಜಾಸ್ತಿ. ಇವರಲ್ಲಿ ಬಹಳ ಸುಂದರತೆ ಉಂಟು. ಕಾರಣ ಚಂದ್ರನೇ ಚಂದವಲ್ಲವೋ? ಅದಕ್ಕೆ. ಚಂದ್ರನಂತೆ ಉರುಟು ಮುಖ ಇವರಿಗೆ ಉಂಟು. ಅದು ಗಂಡಸರೇ ಆಗಲಿ, ಇಲ್ಲಾ ಹೆಂಗಸರೇ ಆಗಲಿ. ಇವರಿಗೆ ಪರಿಹಾರವೇನೆಂದರೆ ಚೆನ್ನಾಯಿನಲ್ಲಿರುವ ಅಥಿತೇಶ್ವರ ದೇವಸ್ಥಾನಕ್ಕೆ ಭೇಟಿಯನ್ನ ಕೊಡಬೇಕು. ಸಂಗೀತದಲ್ಲಿಯ ಪರಿಹಾರವನ್ನ ಒಂದು ಏಳೆ ಸೂಚಿಸಿದರೆ, ಮೋಹನ ರಾಗವು ಇವರಿಗೆ ಶಾಂತಿಯನ್ನ ಕೊಡುತ್ತೆ.
15. Why I was mentioning about Punarvasu more here is that some times, Pushya people may marry this Punarvasu Nakshatra Ladies. Our astrologers may reject thee matching. But here you cannot reject simple they are coming under the same rashi and by telling that they may quarrel daily. It may be true, but they later onwards live happily and together like “Fevicol” bond! Ha! How is it possible? Do not upset. I will tell you why and how?

16. ಇಲ್ಲಿ ನಿಮಗೆ ನಾನು ಪುನರ್ವಸ್ಸು ನಕ್ಷತ್ರದ ಬಗ್ಗೆ ಬಹಳ ಜಾಸ್ತಿಯಾಗಿ ತಿಳಿಸಿದ್ದೇನೆ. ಕಾರಣ? ಇಲ್ಲಿ ಕೇಳಿ ಹೇಳುತ್ತೇನೆ. ಈ ಪುನರ್ವಸು ನಕ್ಷತ್ರದವರಿಗೆ ಕೆಲವೊಮ್ಮೆ ಗಂಡು ಸಿಗದೆ, ಹೋಗಿ,  ಹಗಲು ಕಂಡ ಬಾವಿಗೆ ರಾತ್ರಿ ಹಾರುವುದುಂಟು ಅಂತ ನಮ್ಮ ಪಾರಂಪಳ್ಳೀ ಗ್ರಾಮದಲ್ಲಿ ಗಾದೆ ನಮ್ಮ ಅಮ್ಮ ಹೇಳುತ್ತಿರುವ ಸವಿ ನೆನಪುಂಟು. ಹಾಗೆಯೇ ಈ ಪುನರ್ವಸ್ಸು –ಚರಣ ೪ ರವರು, ಪುಷ್ಯ ಚರಣ ೪ ರವರನ್ನ ಮದುವೆ ಆಗುವುದುಂಟು. ಇಲ್ಲಿ ನೀವು ಬರೇ, ಒಂದೇ ರಾಶಿಯವರಂತ  ಬಂದಂತಹ ಪ್ರಪೋಸಲ್ಲನ್ನ ತ್ಯಜಿಸಬೇಕಾಗಿಲ್ಲ. ಕಾರಣ ಅವರುಗಳು ಕೂಡ ೨೫ ವರ್ಷಗಳ ಮೇಲೆ ಹಳ್ಳಿಯಲ್ಲಿ ಒಂದು ಕೋಟಿ ಮನೆಯನ್ನ ಕಟ್ಟಿ ದನ, ಕರು ನಾಯಿ, ಬೆಕ್ಕುಗಳ ಜೊತೆಯಲ್ಲಿ ಚೆನ್ನಾಗಿಯೇ ಅಪ್ಪಿಕೊಂಡೇ ಇದ್ದಾರೆ! ಯಾತಕ್ಕೆ ನಾನು ಹೇಳುತ್ತಿದ್ದೇನೆಂದರೆ, ಕೆಲವರು ಸಮ್ಮ, ಸುಮ್ನೆ ಬಂದಂತಹ ಜಾತಕವನ್ನ ಸಿಲ್ಲಿ ಕಾರಣಗಳಿಗೆ ರಿಜೆಕ್ಟ್ ಮಾಡಿ ಆಮೇಲೆ ಮದುವೆ ಆಗದೆ ಪಶ್ಚತ್ತಾಪ ಪಡುವುದುಂಟು! ಅಂತಹವರಿಗೆ  ಒಂದು ನನ್ನ ಕಿವಿಮಾತಷ್ಟೆ!

17. Pushya-1st Pada or Charana falls into Leo Rashi, 2nd Pada will fall into Virgo, 3rd Pada will be falling into Libra and 4th Pada will be falling into Scorpio. Hence all these padas will be falling respectively under Sun, Mercury, Venus and Mars. It means Pushya-1 comes under Agni Tatwa.

18. ಪುಷ್ಯ -೧ನೇ ಪಾದವು ಸಿಂಹಕ್ಕೆ ಬರುತ್ತದೆ. ಅದರ ಅಧಿಪತಿ ರವಿಯಾಗುತ್ತಾನೆ. ಅಂದರೆ, ಇವರಲ್ಲಿ ಸಾಕಷ್ಟು ಎನರ್ಜಿ ಇರುತ್ತದೆ. ಕಾರಣ ರವಿಯು ಅಗ್ನಿತವವನ್ನ ಪ್ರತಿಬಿಂಬಿಸುತ್ತದೆ. ಇವರುಗಳು ಡಿಕ್ಟೇಟ್ ಮಾಡುವಂತಹ ಕೆಟೆಗರಿಗೆ ಸೇರಿರುತ್ತಾರೆ. ಆದರೆ ಪುಷ್ಯ ನಕ್ಷತ್ರದ ಒಡೆಯ ಶನಿ ಮತ್ತು ಸಿಂಹ ರಾಶಿಯ ಒಡೆಯ, ಶನಿಯ ಪಿತಾಮಹನಾದ ರವಿ. ಒಬರಿಗೊಬ್ಬರು ಶತ್ರುಗಳು! ಆದ್ದರಿಂದ ಇಲ್ಲಿ ಅವರಿಗೆ ಒಂದು ರೀತಿಯ ಮುಜುಗರವು ಉಂಟಾಗುತ್ತದೆ. ಅದೇ ಪುಷ್ಯ ನಕ್ಷತ್ರದ ೨ನೇ ಪಾದವು ಕನ್ಯಾಕ್ಕೆ ಬಂದಿದ್ದು , ಕನ್ಯಾ ರಾಶಿಯ ಅಧಿಪತಿ ಬುಧನಾದಕಾರಣ, ರವಿ ಮತ್ತು ಬುಧರು ಬುಧಾದಿತ್ಯ ಯೋಗವನ್ನುಂಟು ಮಾಡುತ್ತಾರೆ. ಇನ್ನು ಶನಿಗೆ ಬುಧನು ಮಿತ್ರ. ಆದ್ದರಿಂದ ಇಲ್ಲಿ ಅವರುಗಳು ಪೃಥ್ವೀ ತತ್ವದವರಗಿರುತ್ತಾರೆ. ಆದರೆ ಬುಧನು ವಾಯು ತತ್ವದವನು. ಒಟ್ಟಾರೆ ಇವರುಗಳು ಈ ರಾಶಿಯಲ್ಲಿ ಬಹಳ ಶೈನ್ ಆಗುವುದರಲ್ಲಿ ಸಂದೇಹವೇ ಇಲ್ಲ.

19. Pushya-2 comes under Prihvi Tatwa, Pusya-3 under Vayu Tatwa and Pusya -4 falls under again Agni Tatwa, but here it is Mars energy.

20. ಫುಷ್ಯ-೩ ನೇ ಪಾದವು ತುಲಾ ರಾಶಿಗೆ ಬಂದಿದ್ದು ರಾಶಿಯು ವಾಯುತತ್ವದ್ದಾದರೆ, ಅದರ ಅಧಿಪತಿ ಶುಕ್ರನು ಜಲಾಂಶ ತತ್ವದವನು. ಶನಿಗೆ ಶುಕ್ರ ಸ್ನೇಹಿತ. ಆದ್ದರಿಂದ ಇಲ್ಲಿ ಪುಷ್ಯ ನಕ್ಷತ್ರದವರು ಬಹಳ ಏಷ್ ಮಾಡುತ್ತಿರುತ್ತಾರೆ. ಏಷ್ ಕರೋ ಭಾಯಿ , ಏಷ್ ಕರೋ! ಖಾನಾ, ಪೀನಾ, ಮೋಜ್, ಮಸ್ತಿ, ಮಜಾ ಕರೋ ಭಾಯಿ, ಮಜಾ ಕರೋ! ಅದೇ ಪುಷ್ಯ-೪ನೇ ಪಾದದವರು ಮತ್ತೊಂದು ಅಗ್ನಿತತ್ವ ಗ್ರಹವಾದ ಕುಜನ ಕೆಳಗೆ, ಬಹಳ ಆಳವಾದ, ಕೊಳಕು ನೀರಿನ ರಾಶಿಯಾದ,ಹಿಡಿದರೆ ಬಿಡದ ಚೇಳಿನ ರಾಶಿಯಾದ ವೃಶ್ಚಿಕಕ್ಕೆ ಬರುತ್ತಾರೆ. ನೋಡಿ ಜ್ಯೋತಿಷ್ಯದಿಂದ ವ್ಯಕ್ತಿಯ ಗುಣಗಳ ಗಾನವನ್ನ ಹೇಗೆ ನಾವು ಮಾಡಬಹುದು!

21. Pushya-4 Charan comes under Agni Tatwa and Punarvasu-4 comes under Agni Tatwa. Agni and Jal if comes together, Agni will be put off and Jal will be prevailing. Here, Pushya Nakshatra-4 charan person is thinking that he has cooled down his wife of Punravasu-4 charan due to his Mars egoism. But here what happened is Punarvasu-4 Charan lady made him to cool down because of her Watery Tatwa! Poor Pushya-4 charan fellow! So whatever our Astrological arguments, now they are living happily in a posh bungalow with all materialistic wealth!

22. ಪುಷ್ಯ ನಕ್ಷತ್ರ ಪಾದ ೪ ಅಗ್ನಿತತ್ವದಡಿ ಬಂದಲ್ಲಿ, ಅದೇ ಪುನರ್ವಸ್ಸು ನಕ್ಷತ್ರ-೪ನೇ ಪಾದದವರು ಕರ್ಕ ರಾಶಿಯಾದ ಜಲತತ್ವದ ಅಡಿ ಬರುತ್ತಾರೆ. ಕರ್ಕದ ಅಧಿಪತಿ ಕೂಡ ಜಲತತ್ವವಿರುವ ಚಂದ್ರ ಗ್ರಹ. ವೃಶ್ಚಿಕದ ಅಧಿಪತಿ ಕುಜನೂ ಅಗ್ನಿ ತತ್ವವನ್ನ ಪ್ರತಿಬಿಂಬಿಸುತ್ತಾರೆ. ಈ ಪುಷ್ಯನಕ್ಷತ್ರದವರು ಏನು ಯೋಚನೆಯನ್ನ ಮಾಡುತ್ತಾರೆಂದರೆ, ನಾನು ನನ್ನ ಹೆಂಡತಿಯನ್ನ ಹತೋಟೆಗೆ ತಂದೇ ಅಂತ ತಮ್ಮ ಅಕ್ಕ ತಂಗಿಯರೊಡನೆ ಕೊಚ್ಚಿಕೊಳ್ಳುತ್ತಿರುತ್ತಾರೆ. ಆದರೆ ಇಲ್ಲಿ ನಡೆದಿರುವುದೇ ಬೇರೆ. ಬೆಂಕಿಗೆ ನೀರು ಬಿದ್ದರೇನು ಆಗುತ್ತೇ ಹೇಳಿ? ಬೆಂಕಿ ನೊಂದಿ ಹೊಗೆ ಆಡುತ್ತೆ. ಹಾಗೆಯೇ ಇಲ್ಲಿ ಕೂಡ. ಈ ಪುಣ್ಯಾತ್ಮನಿಗೆ ಮನೆಯಲ್ಲಿ ಹೊಗೆಯಾಡಿ ಹೊರಕ್ಕೆ ಜಗಜಗಕ್ಕೆ ಹರಡುತ್ತಿರುವುದು ಗೊತ್ತೇ ಇಲ್ಲ! ಈ ಪುನರ್ವಸು ನಕ್ಷತ್ರದ ಫಾದ-೪ರ ಹೆಂಡತಿ ಕೂಡ ಅದರ ಮಜಾ ನೋಡಿ ಸುಮ್ಮನೆ ಗಂಡ ಹೇಳಿದಂತೆ ಕೇಳುವ ನಟನೆ ಮಾಡುತ್ತಿರುತ್ತಾಳೆ. ಅವನು ಮನೆಯಿಂದ ಆಚೆ ಹೋದಮೇಲೆ ಇವಳು ತನ್ನತನವನ್ನ ಹರಡುತ್ತಿರುತ್ತಾಳೆ. ನೋಡುವವರಿಗೆ ಆಹಾ, ಗಂಡ ಹೇಗೆ ಹೆಂಡತಿಯನ್ನ ಹತೋಟೆಯಲ್ಲಿಟ್ಟಿರುವ ನೋಡಿ! ಆದರೆ ಇಲ್ಲಿ ನಡೆಯುತ್ತಿರುವುದೇ ಬೇರೆ. ಅಮ್ಮ ಮತ್ತು ಮಕ್ಕಳೆಲ್ಲಾ ಒಂದೇ, ಕಾರಣ ಪುನರ್ವಸ್ಸು ತಾಯಿಯ, ಮತ್ತು ಕೇರ್ ತೆಗೆದುಕೊಳ್ಳುವಂತಹ ರಾಶಿ! ಆದ್ದರಿಂದ ಗಂಡನ ಇಂಗಿತವನ್ನ ಟೆಲಿಫೋನ್ ಮುಖಾಂತರ ತನ್ನ ಎಲ್ಲಾ ಮಕ್ಕಳಿಗೂ ತಿಳಿಸಿ, ಆತ ಬರುವ ಸಮಯದಲ್ಲಿ ಮನೆಯಲ್ಲಿರುವ ಹಾಗೆ ಮಾಡಿ, ಎಲ್ಲರೂ ತಮ್ಮ ತಮ್ಮ ವಿಧೇಯತೆಯನ್ನ ಅಪ್ಪನಿಗೆ ಮಕ್ಕಳು, ಗಂಡನಿಗೆ ಹೆಂಡತಿ ತೋರಿಸುತ್ತಿರುತ್ತಾರೆ. ಇದು ಸರ್ವೇ ಸಾಮಾನ್ಯವಾಗಿ ಮಕ್ಕಳು ಹುಟ್ಟಿದಂದಿನಿಂದ, ಇಂದಿನ ವರೆಗೆ ನಡೆದುಕೊಂಡು ಬಂದ ರೀತಿ. ನಾನು ಯಾರ ಸಂಸಾರವನ್ನೂ ಇಲ್ಲಿ ಹೇಳುತ್ತಿಲ್ಲಾ ಅನ್ನಿ. ಆದರೆ ಯಾರಾದರೂ ನಿಮ್ಮಲ್ಲಿ ಈ ರೀತಿಯ ಜೋಡಿ ಇದ್ದಲ್ಲಿ, ಕೊಚ್ಚಿಕೊಳ್ಳಬೇಡಿ ಅಷ್ಟೇ ಅಂತ ನಿಮಗೆಲ್ಲಾ ಹೇಳುತ್ತಿರುವುದು. ಜ್ಯೋತಿಶ್ಯದ ಕಣ್ಣಿಗೆ ಮಣ್ಣು ಹಾಕುವ ಹಾಗಿಲ್ಲ. ಈ ಗಂಡ ಭೂಪ, ಖುಷಿಯಾಗಿ ಇನ್ನಷ್ತು ಚಿನ್ನ , ಬೆಳ್ಳೀ, ಸೀರೆ, ಡ್ರೆಸ್ ಎಲ್ಲಾ ತೆಗೆಸಿ ಅವರುಗಳಿಗೆ ಕೊಡುತ್ತಿರುತ್ತಾನೆ. ಹೇಗಿದೆ ಪುಷ್ಯಾ-೪,ಪುನರ್ವಸ್ಸು ೪ನೇ ಪಾದದ ಜೋಡಿ! ನೋಡಿ ಮಜಾ ಮಾಡಿ ಅಷ್ಟೆ!

23. What I wanted to express through this is mere discipline will not do. Mere Hitlarshahi will not be sufficient. Tatwa prevails more than your dry discipline or commanding over the family!

24. ಇಲ್ಲಿ ನಾನು ಏನನ್ನ ನಿಮಗೆ ಹೇಳಬೇಕೆಂದರೆ, ಗ್ರಹಗಳು ತಮ್ಮ ಗುಣಗಳನ್ನ ಬದಲಾಯಿಸುವುದಿಲ್ಲ. ಬದಲಾಯಿಸುವವರು ಗ್ರಹಗಳು ಆಡಿಸುವ ನಾವುಗಳು ಅಷ್ಟೆ. ಬರೇ ನೀವು ಹಿಟ್ಲರ್ ಅಂದರೆ ಸಾಲದು. ಅರ್ಥಿಸಿ, ಯೋಚಿಸಿ, ಪರಾಂಬರಿಸಿರಿ!

25. Pushya Nakshatra persons are good lawyers! Since Saturn is involved, here, Saturn is for the justice. Saturn is for the hard work. Saturn is for the discipline. Saturn is for class four employees. Saturn is for the late richness. Everything is there to that Pushya-4 person! With this explanation I put full stop here.

26. ಪುಷ್ಯಾ ನಕ್ಷತ್ರದವರು ಒಳ್ಳೇ ಲಾಯರ್ ಹಾಗೂ ಜಡ್ಜಸ್ಗಳು. ಕಾರಣ ಶನಿಯು ನ್ಯಾಯಾಧಿಪತಿ. ಇವರು ಈ ಲಾಯರ್ತನದಿಂದ ಸಾಕಷ್ಟು ದುಡೀತಾರೆ. ದೊಡ್ಡ ಮನೆಯನ್ನೂ ಕಟ್ಟುತ್ತಾರೆ. ದೊಡ್ಡ ದೊಡ್ಡ ಗಾಡಿಗಳನ್ನೂ ಓಡಿಸುತ್ತಿರುತ್ತಾರೆ. ಕಾರಣ, ಶನಿಯು ದೊಡ್ಡ ಗಾಡಿಗೆ, ಕಲ್ಲಿನಿಂದ ಕಟ್ಟಿರುವ ದೊಡ್ಡ ಮನೆಗಳಿಗೆ ಕಾರಕ ಗ್ರಹ. ಇದೇ ಇವರುಗಳನ್ನ ಒಂದಿಪ್ಪತ್ತು ವರ್ಷ್ಗಳ ಹಿಂದೆ ನೋಡಿದರೆ, ಇವರ ಜೇಬಿನಲ್ಲಿ ಪುಡೀ ಕಾಸೂ ಇರಲಿಕ್ಕಿಲ್ಲ. ಕಾರಣ, ಶನಿಯೇ ಹಾಗೆ. ಇವರು ನ್ಯಾಯದ ರೀತಿಯಲ್ಲಿದ್ದರೆ ಮಾತ್ರ, ನಿಧಾನವಾಗಿ ಇವರನ್ನ ಶ್ರೀಮಂತರನ್ನಾಗಿ ಮಾಡುತ್ತಾನೆ. ಆದ್ದರಿಂದ, ಇವರುಗಳು ಸಾಮಾನ್ಯವಾಗಿ ೪೫-೫೦ ವರ್ಷಗಳ ಮೇಲೆಯೇ ಕೋಟ್ಯಾಧೀಷರಾಗಿರುವರು ಹಾಗೂ ಆಗುವರು. ಶನಿಯು ಕೆಳದರ್ಜೆಯ ನೌಕರುಗಳಿಗೆ ಅಧಿಪತಿ.


Dr P Surendra Upadhya, M.Sc.; Ph.D (Astrology)

25/02/2017

Comments

Popular Posts