PUNARVASU NAKSHATRA ಪುನರವಸ್ಸು ನಕ್ಷತ್ರ


PUNARVASU NAKSHATRA
ಪುನರ್ವಸು ನಕ್ಷತ್ರ 

1.      This is the birth Nakshatra of Lord Rama.

2.      ಇದು ರಾಮನ ನಕ್ಷತ್ರ. ಅಂದರೆ ಇವರಿಗೆಲ್ಲಾ ಕಷ್ಟಗಳು ಕಾದಿರುತ್ತವೆ! ಹೇಗೆ ರಾಮನು ೧೪ ವರ್ಷಗಳ ಕಾಲ ವನವಾಸದ ನೋವನ್ನ ಅನುಭವಿಸಿದ್ದನೋ, ಇವರೂ ಕೂಡ ಹಾಗೆಯೇ ಮದುವೆ ಜೀವನದಲ್ಲಿ ಕಡಿಮೇ ಪಕ್ಷ ಅಷ್ಟು ವರ್ಷಗಳು ಹೆಂಡತಿಯು  ಗಂಡನಿಂದ ಅಥವಾ ಗಂಡನು ಹೆಂಡತಿಯಿಂದ ನೋವನ್ನ ಅನುಭವಿಸಲೇ ಬೇಕು.

3.      The word Punarvasu is derived from Puna+ Vasu, which means return, renewal, restoration or repetition.

1.ಪುನರವಸು ನಕ್ಷತ್ರವನ್ನ ಪುನ + ವಸು ಅಂತ ವಿಂಗಡಿಸಿದ್ದಾರೆ. ಅಂದರೆ ವಾಪಾಸಾತಿ, ಮರುನೊಂದಣಿ, ಮತ್ತೆ ಮರಳಿ ಹಿಂದಿನ ಜೀವನಕ್ಕೆ ವಾಪಾಸಾತಿ ಹಾಗೂ ಮರಳಿ ಮರಳಿ ಪ್ರಯತ್ನ ಅಥವಾ ರಿಪಿಟಿಷನ್ ಅಂತ ಅರ್ಥ!

4.      The 12 Adityas were born of Kasyapa in the womb of Aditi. The 12 Adityas are Vishnu, Indra, Vaga, Twasta, Varuna, Aryama, Pusa, Mitra, Agni, Parjyanya, Vivaswan and Dinakar.Hence Punarvasu has these 12 Aditya’s Power. They have tremendous power!

5.      ಈ ಪುನರವಸುವಿನ ಅಧಿದೇವತೆಗಳು ಒಂದಲ್ಲ ೧೨  ಆದಿತ್ಯರುಗಳು! ಒಂದು ಆದಿತ್ಯನಲ್ಲಿ ಎಷ್ಟೊಂದು ಅಗಾಧ ಶಕ್ತಿ! ಇಡೀ ಭೂಮಂಡಲಕ್ಕೆ ಕೊಡುವಂತಹ ಎನೆರ್ಜಿ ಲವೆಲ್ ಒಬ್ಬನ ಹತ್ತಿರವೇ ಉಂಟೆಂದರೆ, ೧೨ ಆದಿತ್ಯರೆಂದರೆ ಎಷ್ಟೊಂದು ಶಕ್ತಿ ಇರಲಾರದು? ಆದ್ದರಿಂದಲೇ ಈ ನಕ್ಷತ್ರದವರಿಗೆ ಅಗಾಧವಾದ ಶಕ್ತಿ ಉಂಟು.

6.      Punarvasu 20-00 Gemini to 3-20 Cancer. ಪುನರವಸ್ಸು ನಕ್ಷತ್ರವು ೨೦.೦೦ ಡಿಗ್ರೀ ಮಿಥುನದಿಂದ ೩.೨೦ ಡಿಗ್ರೀ ಕರ್ಕದವರೆಗೆ ಉಂಟು.

7.      General Characteristics: Intellectual and spiritual wisdom, material prosperity, good natured, quiet, patient, lives in comfort.

8.      ಇವರುಗಳು ಬಹಳ ಬುದ್ಧಿವಂತರು. ಧಾರ್ಮಿಕದ ಕಡೆಗೆ ಓಲುವಿಕೆ ಇವರಿಗೆ ಉಂಟು. ಪ್ರಪಂಚದ ಶ್ರೀಮಂತಿಕೆಯತ್ತ ಗಮನವನ್ನ ಹರಿಸುವರು ಮತ್ತು ಅದನ್ನ ಅನುಭವಿಸುವರು ಕೂಡ. ಒಳ್ಳೇ ಗುಣಗಳುಳ್ಳ ವ್ಯಕ್ತಿಗಳು, ಬಹಳ ಶಾಂತಿಯುತ, ತಾಳ್ಮೆ, ಅಪಾರ ಭಕ್ತಿ ಹಾಗೂ ಒಳ್ಳೇ ಕಂಫರ್ಟ್ಸಿನಿಂದ ಆನಂದವನ್ನ ಪಡೆಯುವಿಕೆಯ ಗುಣಗಳು ಇವರಲ್ಲಿ ಇರುತ್ತೆ.

9.      Symbol: Bow and a quiver of arrows. ಬಿಲ್ಲು ಮತ್ತು ಬಾಣಗಳಿಂದ ತುಂಬಿದ ಬತ್ತಳಿಕೆ, ಇವರ ಸಿಂಬಲ್.

10. Male Natives born under Punarvasu Nakshatra :-Physical features: Handsome, long thighs and long face. Some identification mark on the face or on the backside of the head.

11. ಪುನರ್ವಸು ನಕ್ಷತ್ರದ ಗಂಡಸರು ಬಹಳ ಸುಂದರಾಂಗ, ಉದ್ದ ತೊಡೆಯುಳ್ಳ, ಉದ್ದ ಮುಖವಿರುವವರು. ಇವರುಗಳ ತಲೆಯ ಹಿಂದೆ ಕರಿ ಮಚ್ಚೆಗಳುಳ್ಳವರಾಗಿರುತ್ತಾರೆ.

12. The native has complete faith in God. They are religiously inclined. Initially. They will have good behavior initially, but later on according to the circumstances they change their behavior. Therefore, others have to be careful while approaching them! It is very difficult to know their inner thoughts. They stick to ancient tradition and belief.

13. ಇವರುಗಳಿಗೆ ದೇವರಲ್ಲಿ ಭಕ್ತಿ ಅಪಾರ. ಧಾರ್ಮಿಕತೆಗೆ ಗಮನವನ್ನ ಹರಿಸುತ್ತಾರೆ. ಮೊತ್ತ ಮೊದಲಿಗೆ ಇವರಲ್ಲಿ ಒಳ್ಳೇ ಗುಣಗಳಿದ್ದು, ಕೊನೆ ಕೊನೆಗೆ ಅದು ಎಲ್ಲಿ ಮಂಗ ಮಾಯವೋ ಗೊತ್ತಾಗದು. ಇದು ಹೆಂಗಸರಿಗೂ ಅನ್ವಯಿಸುತ್ತೆ ಅನ್ನಿ! ಆದ್ದರಿಂದ ಇವರೊಂದಿಗೆ ಬಹಳ ಜಾಗರೂಕರಾಗಿರಬೇಕು.ಇವರುಗಳು ಸ್ವಲ್ಪ ಅಜ್ಜ ನೆಟ್ಟ ಹೊಂಗೇ ಮರಕ್ಕೆ ನೇಣು ಹಾಕಿಕೊಳ್ಳುವಂತಹ ಜಾತಿ, ಅಂದರೆ ಹಳೆಯ ಸಂಪ್ರದಾಯತೆಯ ಬಗ್ಗೆ ಬಹಳ ಕಾಳಜಿ ವಹಿಸುವಂತಹ ಜನರು ಇವರುಗಳು!

14. Physical features: Her eyes are red, curly hair, sweet speech and high nose. ಇವರ ಕಣ್ಣುಗಳು ಬೆಕ್ಕಿನ ಕಣ್ಣಿದ್ದ ಹಾಗೆ, ಅಥವಾ ಕೆಂಪಗೆ ಇರುತ್ತದೆ. ಗುಂಗರು ಕೂದಲಿರುತ್ತವೆ. ಬಹಳ ಸಕ್ಕರೆಯಂತೆ ಮಾತನಾಡುವ ಜನಾಂಗದವರು ಹಾಗೂ ಎತ್ತರದ ಮೂಗಿರುತ್ತದೆ.

15. Female Natives born under Punarvasu Nakshatra:- While she will generally have a calm nature, she has argumentative tongue, which will lead her into frequent friction with her relatives and her neighbors. However, she is charitable and shows respect. She will have many servants. On the whole she will be leading a comfortable life.

16. ಸಾಮಾನ್ಯವಾಗಿ ಪುನರ್ವಸು ಹೆಂಗಸರು ಶಾಂತಿಯುತರಾಗಿಯೇ ಇರುತ್ತಾರೆ, ಆದರೆ ಅವರನ್ನೆಲ್ಲಿಯಾದರೂ ತಂಡಿದಿರೋ, ಆಯುತು ನಿಮ್ಮ ಕಥೆ! ಅಬ್ಬ, ಅವರ ನಾಲಿಗೆ ಮಾತ್ರ ಶುಧ್ಧವಿಲ್ಲದ ನಾಲಿಗೆ. ನಿಮಗೇ ಅನ್ನಿಸುತ್ತೆ, ಗುರುವಿನ ನಕ್ಷತ್ರದವರಿಗೆ ಇಷ್ಟೊಂದು ಕೆಟ್ಟ ನಾಲಿಗೆಯನ್ನ ಆ ದೇವರು ಹೇಗೆ ಕರುಣಿದ್ದಾನೋ? ಅಂತ  ಆಶ್ಚರ್ಯವಾಗುತ್ತೆ. ಅದರಲ್ಲೂ ಪುನರ್ವಸು ನಕ್ಷತ್ರದ ನಾಲ್ಕನೇ ಪಾದದ ಹೆಂಗಸರ್ವರು ಅಸಾಧ್ಯ. ಅವರನ್ನ ನೀವು ದೊಡ್ಡ ಹಿಡಿಂಬೆ ಅಂದರೂ ತಪ್ಪಾಗದು! ಕಾಣಲು ಉರುಟು ಚಂದ್ರನಂತಿರುವ ಮುಖ, ಬಣ್ಣ ಹಾಲಿನಂತೆ ಬಿಳಿ, ನೋಡಲು ಮೊದ ಮೊದಲಿಗೆ ೩೬-೨೪-೩೬ ರ ಅಳತೆಯಲ್ಲಿರುತ್ತಾರೆ., ಅಮೇಲೆ, ಆಮೇಲೆ  ೩೬-೩೬-೩೬ ಆಗಿ, ಒಳ್ಳೇ ಡ್ರಮ್ಮಿನಂತೆ ಊದಿಕೊಂಡು ಹೋಗುತ್ತಾರೆ! ಇಲ್ಲಿ ಗುರುವಿನ ಗುಣಗಳು ಎದ್ದು ಕಾಣುತ್ತವೆ ಅನ್ನಿ! ಈ ನಾಲಿಗೆಯಿಂದಲೇ ಇವರಿಗೆ ಸುತ್ತ ಮುತ್ತ ಜನರೊಂದಿಗೆ ಕಟೀ ಪಿಟಿ ಆಗುತ್ತಿರುತ್ತೆ. ಇದು ಸುತ್ತ ಮುತ್ತ ಇರುವಂತಹ ಜನರೊಂದಿಗೆ ಮಾತ್ರವಲ್ಲ, ಅವರ ಸಂಬಂಧಿಕರ ಹತ್ತಿರವೂ ಹಾಗೆಯೇ ಆಗುತ್ತೆ ಅನ್ನಿ! ಆದರೆ ಇವರುಗಳಿಗೆ ಕೆಲಸಗಾರರು ಬಹಳ ಬೇಗನೆ ಸಿಗುತ್ತಾರೆ. ಒಟ್ಟಾರೆ ಇವರುಗಳು ಬಹಳ ಕಂಫರ್ಟೇಬಲ್ ಜೀವನವನ್ನ ಸುಮಾರು ೪೦ ರ ನಂತರ ಸಾಗಿಸುವುದರಲ್ಲಿ ನಿಮಗೆ ಸಂಶಯ ಬೇಡ.

17. Positive Traits: Caring, loving, nurturing, easily contented, friendly,simplistic life lives in the moment, generous, shares with others, religious inclinations.

18. ಇವರಲ್ಲಿ ಧನಾತ್ಮಕ ಗುಣಗಳು ಏನೆಂದರೆ, ಬಹಳ ಕೇರಿಂಗ ನೇಚರ್ ಇರುವಂತಹವರು, ಬಹಳ ಪ್ರೀತಿ ಮಾಡುವವರು, ಬಹಳಷ್ಟು ತೃಪ್ತರು, ಬಹು ಬೇಗನೆ ಸ್ನೇಹತ್ವವನ್ನ ಬಯಸುವವರು, ಬೇರವರಿಗೆ ಸಹಾಯದ ಹಸ್ತವನ್ನ ಚಾಚುವವರು, ಬಹಳ ಸಾಧಾರಣ ಜೀವನವನ್ನ ಸಾಗಿಸುವವರು, ಬಹಳ ಉದಾರಿ ಮನೋಭಾವನೆ ಇರುವವರು ಹಾಗೂ ಧಾರ್ಮಿಕ ಮನೋಭಾವನೆ ಹೆಚ್ಚಿಗೆ ಇರುವವರು.

19. Negative Traits: Simplistic approach to life interpreted as a lack of intelligence, lack of material drive due to focus on spirituality, lack of foresight gets them into complications including frequent moving, unstable relationships, and multiple jobs/careers, fickle nature, indecisive, frequently ill, critical, gets bored too easily in life.

20. ಋಣಾತ್ಮಕ ಗುಣಗಳೇನೆಂದರೆ, ಇವರಿಗೆ ಬುದ್ಧಿವಂತಿಕೆ ಕಮ್ಮಿ ಅಂತಲೇ ಹೇಳಬೇಕಾಗುತ್ತದೆ. ಇವರಲ್ಲಿ ದೂರಾಲೋಚನೆ ಕಮ್ಮಿ, ದುರಾಲೋಚನೆ ಜಾಸ್ತಿ! ಇವರುಗಳು ಬಹು ಬೇಗನೆ ಇದ್ದ ಜಾಗವನ್ನ ಖಾಲಿ ಮಾಡುವುದು ಜಾಸ್ತಿ. ಇವರ ಜೊತೆಯ ಸಂಬಂಧ ಅಸ್ಥಿರತೆ ಜಾಸ್ತಿ! ಇವರ ಬುಧ್ಧಿ ಅಸ್ಥಿರತೆಯಿಂದ ಇವರು ಮಣ್ಣು ಕಚ್ಚುವುದು ಬಹು ಬೇಗ. ಇವರೊಬ್ಬರು  ಡಿಸಿಷನ್ ತೆಗೆದುಕೊಳ್ಳುವುದರಲ್ಲಿ ಬಹಳ ದುರ್ಬಲರು. ಯಾವಾಗಲೂ ರೋಗಗ್ರಸ್ಥೆಯಾಗಿರುತ್ತಾರೆ. ಇವರಿಗೆ ಜೀವನದಲ್ಲಿ ಬಹು ಬೇಗನೆ ಬೇಸರವನ್ನ ತಂದುಕೊಡುತ್ತದೆ.  ಅದಕ್ಕಾಗಿ ಇವರು ಏನಾದರೊಂದು ಕೆಲಸದಲ್ಲಿ ನಿರತರಾಗಿಯೇ ಇರುತ್ತಾರೆ. ಕೊನೇ ಪಕ್ಷ ನಾಯಿ ಬೆಕ್ಕುಗಳ ಹಿಂದೆ ಇವರು ಇರುವುದು ಹೆಚ್ಚು! ಅದೂ ಇಲ್ಲಾ ಅಂದರೆ ಗಾರ್ಡನಿಂಗ್ನಲ್ಲಿ ನಿರತರಾಗಿರುತ್ತಾರೆ.

21. Punarvasu is the rising star of Cancer. It is just sun is rising in the east. Punarvasu Nakshatra lord is Jupiter, the religious bound one.

22. ಈ ನಕ್ಷತ್ರವು ಕರ್ಕ ರಾಶಿಯ ರೈಸಿಂಗ್  ಸ್ಟಾರ್ ಅಂತಲೇ ಕರೆಯುತ್ತಾರೆ. ಇದರ ಅಧಿಪತಿ ಗುರುವಾಗಿದ್ದು,   ಗುರುಗ್ರಹವು ಧಾರ್ಮಿಕತೆಗೆ ಕಾರಕ ಗ್ರಹ.

23. It is dharmk nakshatra. Punarvasu Nakshatra has two lords. Punarvasu -1,2,3 Padas comes to Gemini Rashi and the lord of it is Mercury. Hence Punarvasu Nakshatra people are very intelligent, talkative, computer savvy, a good interpreter, a good communicator, very good in friendship maker, good at mathematics and good astrologers also.

24. ಫುನರವಸು ೧ ,೨ ,೩ ಪಾದಗಳು ಮಿಥುನದಲ್ಲಿದ್ದು ಇದರ ಅಧಿಪತಿ ಬುಧನಾಗಿರುತ್ತಾನೆ. ಇವರುಗಳು ಬಹಳ ಬುಧ್ಧಿವಂತರಾಗಿದ್ದು, ಜ್ಯೋತಿಷ್ಯದಲ್ಲಿಯೂ ನಿಸ್ಸೀಮರಾಗಿರುತ್ತಾರೆ. ಇವರುಗಳು ಬಹಳ ಅಂದರೆ ಬಹಳವಾಗಿ ಮಾತನಾಡುವರು. ಇವರಲ್ಲಿ ಕಂಪ್ಯೂಟರ್ ಬಗ್ಗೆ ತಿಳಿಯುವಿಕೆ ಜಾಸ್ತಿ. ಇವರೊಬ್ಬರು ಒಳ್ಳೆಯ ಭಾಷಾ ತುರ್ಜಮೆ ಇರುವವರು. ಇವರೊಬ್ಬರು ಒಳ್ಳೇ ಒರೇಟರ್ಸ್. ಇವರುಗಳಿಗೆ ಸಮಾಜದಲ್ಲಿ ಸ್ನೇಹಿತರಿಗೆ ಏನೂ ಕಮ್ಮಿ ಇಲ್ಲ.

25. Punarvasu -4th Pada falls in the Rashi of Cancer. These Punarvasu-4 people are family oriented Nakshatra. They are always circling around their family and family members. It is because of the the Rashi Karakatwas!

26. ಪುನರ್ವಸು-೪ನೇ ಪಾದದವರು ಸಂಸಾರವಂದಿಗರು. ಯಾವಾಗಲೂ ನನ್ನ ಮಗ, ನನ್ನ ಮಗಳೆಂದೇ ಅವರ ಹಿಂದೆಯೇ ಓಡಾಡುವರು. ಎಷ್ಟೆಂದರೆ, ಮಗಳು ಕಾಲೇಜಿಗೆ ಹೋಗುವಷ್ಟು ದೊಡ್ಡವಳಾದರೂ , ಅವಳನ್ನ ಕಾಲೇಜಿನವರೆಗೆ ಬಿಟ್ಟುಬರುವಂತಹ ಅಮ್ಮನನ್ನೂ ಈ ನಕ್ಷತ್ರದ ಈ ಪಾದದಲ್ಲಿ  ನಾನು ನೋಡಿರುತ್ತೇನೆ! ಇವರುಗಳು ನಾನು ಮತ್ತು ನನ್ನ ಸಂಸಾರವೆಂದು ಸದಾ ಹೇಳುವಂತಹ ಜಾತಿಗೆ ಸೇರಿರುತ್ತಾರೆ.

27. Cancer is for care taking like mother as Cancer falls in 4th Rashi of Kalapurusha, it is for happiness, it is for the chest of the body, it is for the mother and it is for the primary educations up to 10th standard!

28. ಕರ್ಕ ರಾಶಿಯವರು ಕಾಲಪುರುಷನ ರಾಶಿಯಿಂದ ೪ ನೇ ರಾಶಿ. ಈ ೪ನೇ ಭಾವವು ತಾಯಿಗೆ, ಸಂತೋಷಕ್ಕೆ, ಮನೆ ಮತ್ತು ಮಠಕ್ಕೆ, ಪ್ರೈಮರೀ ವಿದ್ಯಾಭ್ಯಾಸಕ್ಕೆ, ಸಾರ್ವಜನಿಕರಿಗೆ, ಸ್ಥಿರಾಸ್ಥಿಯನ್ನ ಕೊಂಡುಕೊಳ್ಳುವಿಕೆಗೆ ಕಾರಕ ಗ್ರಹ. ಆದ್ದರಿಂದ ಇವರುಗಳು ಇದರ ಸುತ್ತ ಮುತ್ತಲೇ ಇರುತ್ತಾರೆ. ಇವರುಗಳಿಗೆ ಇದೆಲ್ಲಾ ಆಟೋಮೇಟಿಕ್ ಆಗಿ ದಕ್ಕುತ್ತದೆನ್ನಿ.

29. Cancer people are very swift in action, good at work and looking too smart and beautiful also!

30. ಈ ಕರ್ಕ ರಾಶಿಯ ಪುನರ್ವಸು ನಕ್ಷತ್ರದವರು ಕೆಲಸದಲ್ಲಿ ಬಹಳ ಚುರುಕು. ಇವರುಗಳು ಹೆಣ್ಣು ಆದಲ್ಲಿನೋಡಲು ಬಹು ಸುಂದರಿಯರು,  ಅದೇ ಗಂಡಾದಲ್ಲಿ ಸುಂದರರು.

31. Since Punarvasu as a whole is Jupiter bound Nakshatra, they are god fearing persons also!. Most of the religious activities are done by them only. Suppose in a family if wife is of Punarvasu Nakshatra and husband is of Pushya Nakshatra, then only wife will do all poojas and other religious activities nad not the husband!

32. ಈ ಪುನರವಸು ನಕ್ಷತ್ರದವರು ಈ ಮೊದಲೇ ಹೇಳಿದಂತೆ ದೇವರ ಹೆದರಿಕೆ ಇರುವವರು. ಒಂದು ವೇಳೆ ಇವರ ಗಂಡನು ಪುಶ್ಯಾ ನಕ್ಷತ್ರದವರಾದಲ್ಲಿ, ಮನೆಯಲ್ಲಿ ದೇವರ ಪೂಜೆ, ಧಾರ್ಮಿಕ ಕೆಲಸಗಳನ್ನೆಲ್ಲಾ ಈ ಪುನರ್ವಸು ನಕ್ಷತ್ರದವರೇ ಮಾಡುವವರು!

33. In Navamshawise, Punarvasu-1 falls in Aries, Punarvasu-2 falls in Taurus, Punarvasu -3 falls in Gemini and Punarvasu -4 falls in Cancer. See here itself you can see the differences between Punarvasu-1,Punarvasu-2, Punarvasu-3 and Punarvasu-4 Nakshatra!

34. ಪುನರವಸು -೧ನೇ ಪಾದವು ಮೇಶದಲ್ಲಿದ್ದರೆ, ಪುನರವಸು ೨ನೇ ಪಾದವು  ವೃಷಭ ರಾಶಿಗೆ ಬೀಳುತ್ತೆ. ಅದೇ ೩ನೇ ಪಾದವು ಮಿಥುನ ರಾಶಿಗೆ ಬಿದ್ದು, ಪುನರವಸು ೪ನೇ ಪಾದವು ಕರ್ಕ ರಾಶಿಗೆ ಬೀಳುತ್ತೆ. ಆದರೆ ಪುನರವಸು ನಕ್ಷತ್ರ ಒಂದೇ, ಆದರೆ ಈ ನಾಲ್ಕು ಪಾದಗಳ ಜನರ ಗುಣವಿಶೇಷಗಳನ್ನೆಲ್ಲಾ ಬೇರೆ ಬೇರೆಯಾಗಿಯೇ ನೀವು ನೋಡುತ್ತಿರುವಿರಿ. ಇದಕ್ಕೆ ಕಾರಣ, ಪುನರ್ವಸು ೧ನೇ ಪಾದದ ಅಧಿಪತಿ ಅಗ್ನಿ ತತ್ವದ ಕುಜನಾಗಿದ್ದಲ್ಲಿ, ೨ನೇ ಪಾದದ ಅಧಿಪತಿ ಜಲಾಂಶ ತತ್ವದ ಶುಕ್ರನಾಗಿರುತ್ತಾನೆ. ಅದೇ ಪುನರ್ವಸ್ಸು ೩ನೇ ಪಾದದ ಅಧಿಪತಿ ವಾಯುತತ್ವದ ಬುಧನಾದಲ್ಲಿ, ಪುನರ್ವಸ್ಸು ೪ನೇ ಪಾದದ ಅಧಿಪತಿ ಜಲ ತತ್ವದ ಚಂದ್ರನಾಗಿರುತ್ತಾನೆ. ಈ ವ್ಯತ್ಯಾಸಗಳಿಂದಾಗಿ ಅವರುಗಳ ಗುಣಗಳು ಬೇರೆ ಬೇರೆಯಾಗಿ ಹೊರಹೊಮ್ಮುತ್ತವೆ.

35. Punarvasu-1 Pada people are no doubt they are intelligent, they have egoistic nature! They are straight forward people. They are having angry at their nose! They appear to be reddish white and beautiful to be seen if they are female character.

36. ಪುನರ್ವಸು ನಕ್ಷತ್ರ ೧ನೇ ಪಾದದವರು ಬುಧ್ಧಿವಂತರೇನೋ ಸಹಜ. ಆದರೆ ಅವರಲ್ಲಿ ಅಹಂಕಾರವು ತುಂಬಿ ತುಳುಕುತ್ತದೆ. ಇವರುಗಳು ಮುಖದ ಮೇಲೆ ಹೊಡೆದು ಹೇಳುವ ಪಂಗಡಕ್ಕೆ ಸೇರಿರುತ್ತಾರೆ. ಇವರಲ್ಲಿ ಮುಂಗೋಪ ಮೂಗಿನ ತುದಿಯಲ್ಲಿರುತ್ತದೆ. ಹೆಣ್ಣುಮಕ್ಕಳು ಕೆಂಪು ಕೆಂಪಾಗಿ ಕಾಣಿಸುತ್ತಾರೆ.

37. Punarvasu-2 Pada falls in Taurus, which is ruled by Venus, a planet has 64 Kalas! It means these people are well versed in Arts, Yakshagana, Music, Dance etc. They are also intelligent in all fields! It is because the Nakshatra is ruled by Jupiter, the Guru of Devatas and in the Rashi of Venus, Guru of Rakshas! Hence these persons are very argumentative. They will not agree to anything without arguing! It is just because Shukracharya and Guru Vashishta are dead enemies!

38. ಈ ಪುನರ್ವಸು ೨ನೇ ಪಾದದವರು ಶುಕ್ರನ ಆಡಳಿತದಡಿ ಬರುತ್ತಾರೆ. ಇವರಲ್ಲಿ ಶುಕ್ರನ ೬೪ ಕಲೆಗಳಿರುತ್ತವೆ. ಇವರುಗಳು ಯಕ್ಷಗಾನ, ಡ್ಯಾನ್ಸ್, ಸಂಗೀತ ಹಾಗೂ ಕಲೆಯಲ್ಲಿ ನಿಸ್ಸೀಮರು. ಇವರುಗಳು ಎಲ್ಲಾ ಕ್ಷೇತ್ರದಲ್ಲಿಯೂ ಬುಧ್ಧಿವಂತರೇ.ಕಾರಣ ಇವರನ್ನ ಗುರು ಮತ್ತು ಶುಕ್ರರು ಆಳುತ್ತಾರೆಂದರೆ ಎರಡು ಗುರುಗಳ ಸಂಗಮವೆಂದರೆ ಅದೇನು ಸಾಮಾನ್ಯವೇ? ಆದರೆ ಇವರಲ್ಲಿ ವಿತಂಡವಾದವು ಬಹಳವಾಗಿರುತ್ತೆ. ವಾದವಿಲ್ಲದೆಯೇ ಯಾವುದನ್ನೂ ಸ್ವೀಕರಿಸಲಾರರು.

39. Coming to Punarvasu –Pada 3, people they are highly intellectuals and good Astrologers and have highest qualifications also! They are at least double graduates. They are excellent communicators in the society. They easily go with the people and make friendship so easily. Everyone likes them.

40. ಪುನರ್ವಸ್ಸು ೩ನೇ ಪಾದದವರು ಬುಧನ ಕ್ಷೇತ್ರದಲ್ಲಿ ಬರುವವರು. ಬುಧ ಮತ್ತು ಗುರುಗಳು ವೈರಿಗಳಾದರೂ, ಇಬ್ಬರೂ ಮಹಾ ದಿಗ್ಗಜರು ತಿಳುವಳಿಕೆಯ ಕ್ಷೇತ್ರದಲ್ಲಿ. ಆದ್ದರಿಂದ ಇವರುಗಳು ಹಯೆಷ್ಟ್ ಡಿಗ್ರೀಯನ್ನ ಹಾಸಿಲ್ ಮಾಡಿರುತ್ಟಾರೆ. ಇವರಲ್ಲಿ ವಾಕ್ಚಾತುರ್ಯವು ಅಮೋಘವಾಗಿರುತ್ತೆ. ಇವರುಗಳು ಜನರೊಂದಿಗೆ ಬೆರೆತು ಬಾಳುವ ಜನರು. ಇವರಿಗೆ ಸ್ನೇಹಿತರ ಸಂಖೆಯು ಅಪಾರ.
41. Coming to Punarvasu-4, they are good cook, good at hotel business and good at all activities. They have all sorts of activities to please the people. Punarvasu-4 people can be identified so easily in a mob! They are like Rohini Nakshatra type people. They are like twinkling star!
42. ಪುನರ್ವಸು ೪ನೇ ಪಾದದವರು ನೀರಿನ ರಾಶಿಯಾದ ಕರ್ಕಕ್ಕೆ ಬರುತ್ತರೆ. ಇವರುಗಳು ಒಳ್ಳೇ ಅಡುಗೆಯನ್ನ ಮಾಡುವವರು. ಇವರುಗಳು ಹೋಟೆಲ್ ಉದ್ಯಮಕ್ಕೆ ಹೇಳಿ ಮಾಡಿಸಿದವರು. ಮದುವೆ ಹಾಗೂ ಉಪನಯನ ಇತ್ಯಾದಿ ಸಮಾರಂಭಗಳಲ್ಲಿ ಅಡುಗೆಯನ್ನ ಮಾಡುವವರು ಈ ನಕ್ಷತ್ರದಲ್ಲಿ ಸಾಮಾನ್ಯವಾಗಿ ಸಿಗುತ್ತಾರೆ. ಇವರುಗಳು ರೋಹಿಣಿ ನಕ್ಷತ್ರದಂತೆ,ಬಹಳ ಕ್ವಿಕ್ ಏಕ್ಷನ್ ತೆಗೆದುಕೊಳ್ಳುವ ಜನಾಂಗದವರು.
43. Punarvasu -4 Nakshatra people are emotional as the lord of the rashi cancer is Moon. Moon is Monokaraka. So for small things, they cry and this is the only weakness they have.
44. ಇವರುಗಳು ಸೈಕೋಸ್ಯುಮೇಟಿಕ್ ವರ್ಗಕ್ಕೆ ಸೇರುವ ಜನರು. ಕಾರಣ ಚಂದ್ರನು ಭಾವಗಳಿಗೆ ಕಾರಕ ಗ್ರಹ. ಚಂದ್ರನು ಮನೋ ಕಾರಕ. ಇವರುಗಳು ಏಕಾಂಗಿಯಾಗಿ ಅಳುತ್ತಲೇ ಇರುತ್ತಾರೆ. ಇವರಲ್ಲಿ ಆತ್ಮಹತ್ಯಯ ವಿಚಾರ ಬರುತ್ತಲೇ ಇರುತ್ತವೆ. ಸಣ್ಣ ವಿಚಾರಗಳಿಗೂ ಅಳುವ ಜಾತಿ!

45. On a whole, Punarvasu is one kind of Godly Nakshatra and they earn very good respect in the society. Only weakness of them is I and my wife and my children! That is the entire whole world!

46. ಏನೇ ಆಗಲಿ, ಈ ಪುನರ್ವಸು ನಕ್ಷತ್ರವು  ದೇವರ ನಕ್ಷತ್ರವೆಂದರೆ ತಪ್ಪಾಗದು. ಒಂದು ವೇಳೆ ಈ ಪುನರ್ವಸು ನಕ್ಷತ್ರದವರೆಲ್ಲಿಯಾದರೂ ಅದೇ ರಾಶಿಯ ಹುಡುಗನನ್ನ ಅಂದರೆ ಪುಷ್ಯಾ ನಕ್ಷತ್ರದ ಗಂಡನ್ನ ಮದುವೆ  ಆದಲ್ಲಿ, ಇಲ್ಲಾ ಪುನರ್ವಸ್ಸು ಗಂಡು, ಪುಷ್ಯಾ ನಕ್ಷತ್ರದ ಹೆಣ್ಣನ್ನ ಮದುವೆ ಆದಲ್ಲಿ ದೇವರೇ ಗತಿ! ಯಾಕೆಂದರೆ, ಆ ಎರಡು ನಕ್ಷತ್ರಗಳು ದ್ವಿದ್ವಾದಷ ನಕ್ಷತ್ರಗಳಾಗುವುದರಿಂದ, ಲೈಫ್ ಲಾಂಗ್ ಕಿರಿ ಕಿರಿಯನ್ನ ಅನುಭವಿಸುತ್ತಲೇ ಚಿತ್ರಹಿಂಸೆಯನ್ನ ಅನುಭವಿಸುತ್ತಲೇ ಇರುತ್ತಾರೆ! ಜಾಗ್ರತೆ.
47. ಪರಿಹಾರಾರ್ಥವಾಗಿ ಇವರುಗಳು ಹೆಣ್ಣು ದೇವತೆಗಳಾದ ಬನಶಂಕರೀ ಅಮ್ಮನವರು, ಕಟೀಲು ದುರ್ಗಾ ಪರಮೇಷ್ವರಿ, ಕಮಲಶಿಲೆ ದುರ್ಗಾ ಪರಮೇಶ್ವರಿ, ಕೊಲ್ಲೂರು ಮೂಕಾಂಬಿಕಾ ದೇವಿ, ಶ್ರಂಗೇರಿ ಶಾರದಾಂಬ, ನಿಮಿಷಾಂಬಾ ದೇವಿ, ಚಾಮುಂಡೇಶ್ವರೀ ದೇವಿ, ಕೊಲ್ಲಾಪುರ ಲಕ್ಷ್ಮೀ ಮಾತ, ಶ್ರೀ ಆದ್ಯ ಕಾತ್ಯಾಯನೀ ದೇವಿ, ಚತ್ರಾಪುರ, ಮಾತಾ ವೈಷ್ಣವಿದೇವಿ, ಮಾ ಜಗದಾಂಬ, ಅಮೃತೇಶ್ವರೀ ಅಮ್ಮನವರು ಹೀಗೆ ಎಲ್ಲಾ ಹೆಣ್ಣು ದೇವತೆಗಳ ಅರ್ಚನೆಯನ್ನ ಮಾಡಿದಲ್ಲಿ ಬಹಳ ಸುಕೂನ್ ಸಿಗುತ್ತೆ. ಜೀವನದಲ್ಲಿ ತೇರ್ಗಡೆಯನ್ನ ಕಾಣುವಿರಿ

By Dr. P Surendra Upadhya, M.Sc., Ph.D (Astrology)

24/07/2017

Comments

Popular Posts