ASHWINI NAKSHTRA

ಅಶ್ವಿನಿ ನಕ್ಶತ್ರ

1.      ನಕ್ಷತ್ರದ ಮಾಲೆಯಲ್ಲಿ ಮೊದಲನೇ ನಕ್ಷತ್ರವೇ ಅಶ್ವಿನಿ. ಯಾರ ಹೆಸರಿನಲ್ಲಿ ಮೊದಲ ಅಕ್ಷರವು ಚ, ಚೆ,ಚೊ ಮತ್ತು ಲಾ ಎಂಬ ಅಕ್ಷರಗಳಿಂದ ಶುರುವಾಗುತ್ತವವೋ, ಅವರದ್ದೆಲ್ಲ ಅಶ್ವಿನಿ ನಕ್ಷತ್ರ ಆಗುತ್ತೆ,ಹಾಗೂ ಬರುತ್ತೆ. ಹಾಗಾದರೆ ಯೋ ಎನ್ನುವ ಅಕ್ಷರ ಬಂದರೆ, ಅದು ಮೂಲ ನಕ್ಷತ್ರ ಅಂದರೆ ಕೇತುವಿನ ನಕ್ಷತ್ರವಾಗಿರುತ್ತೆ ಅನ್ನಿ. ಒಂದು ವೇಳೆ ನಿಮ್ಮ ಹೆಸರು ಯೋಗೀಷ, ಯಶೋಧ ಅಂತಿದ್ದರೆ ಅದು ನಿಮ್ಮ ನಾಮಾಕ್ಷರವಲ್ಲ. ಅದು ನಿಮ್ಮನ್ನ ಕರೆಯುವ ಅಕ್ಷರವಾಗಿರುತ್ತೆ.

2.      In 27 Nakshatra, Ashwini is the first Nakshatra. If name starts with cha, che, cho and la, those are all belonging to Ashwini Nakshatra. If any Ashwini fellow keeps Yogesha, then it is not Ashwini Nakshtra’s Name, It is belonging to Mula Nakshatr’s name!

3.      ಅಶ್ವಿನಿಯೂ ಕೇತುವಿನ ನಕ್ಷತ್ರವೇ. ಇಡೀ ನಕ್ಷತ್ರ ಮಂಡಲದಲ್ಲಿರುವ ೨೮ ನಾವುಗಳು ಉಪಯೋಗಿಸುವಂತಹ ನಕ್ಷತ್ರಗಳಿದ್ದು, ಅವುಗಳನ್ನ ೯ ಭಾಗವಾಗಿ ವಿಂಗಡಿಸಿರುತ್ತಾರೆ. ಮೂರು ನಕ್ಷತ್ರಗಳ ಒಂದೊಂದು ಗುಂಪಿನ ಒಡೆಯನಾಗಿ, ಕೇತು, ಶುಕ್ರ, ರವಿ,ಚಂದ್ರ, ಕುಜ, ರಾಹು, ಶನಿ, ಬುಧ ಹೀಗೆ ವಿಂಶೋತ್ತರೀ ದಶಾದಲ್ಲಿ ಬರುವಂತಹ ಕ್ರಮದಲ್ಲಿ ವಿಂಗಡಿಸಿರುತ್ತಾರೆ. ೨೮ ನೇ ನಕ್ಷತ್ರ ಅಭಿಜಿನ್ ಅಂತ ಕರೆಯುತ್ತಾರೆ. ಆದರೆ ಈ ನಕ್ಷತ್ರವು ಭೂಮಂಡಲದಿಂದ ಬಹು ದೂರವಿರುವುದರಿಂದ, ನಾವುಗಳು ಅದನ್ನ ಮುಹೂರ್ತ ಮಾತ್ರದಲ್ಲಿ ಉಪಯೋಗಿಸಿಕೊಳ್ಳುತ್ತೇವೆ. ನಾವು ಹೇಳುವ ಕೊನೆಯ ನಕ್ಷತ್ರವು ರೇವತಿಯಾಗಿರುತ್ತದೆ.ಈ ಕೇತುವಿನಡಿಯಲ್ಲಿ ಬರುವ ಮೂರು ನಕ್ಷತ್ರಗಳು, ಅಶ್ವಿನಿ, ಮಖ ಹಾಗೂ ಮೂಲವಾಗಿರುತ್ತದೆ.

4.      Ashwini Nakshatra belongs to Ketu’s. There are 28 Naksharas in our Zodiac and 28th Nakshatra is Abhijin and is very far off from our Earth. Hence we are using that Nakshatra for muhurthas only. All other 27 Nakshatras are dividing into 9 parts and put under Ketu, Sun, Mon, Mars, Rahu, Jupiter, Saturn and Mercury in the same order of Vimshottari Dasha system.

5.      ಇವರು ಮೂಲತಹ ಸ್ವಾಭಿಮಾನಿಗಳಾಗಿರುತ್ತಾರೆ. ಇವರ ಪಂಗಡಕ್ಕೆ ಸೇರಿದವರು ರೇವತಿ ನಕ್ಷತ್ರದವರೂ ಸಹ. ಇವರದ್ದು ಮೊದಲ ನಕ್ಷತ್ರವಾದರೆ, ರೇವತಿಯದ್ದು ಕೊನೆಯ ನಕ್ಷತ್ರದವರು. ರೇವತಿ ನಕ್ಷತ್ರದವರಷ್ಟು ಭಂಡರು ಬೇರಾವ ನಕ್ಷತ್ರವರಿಲ್ಲಾ ಅನ್ನಿ! ಅಶ್ವಿನಿ ನಕ್ಷತ್ರದವರು ಮೊದಲ ನಕ್ಷತ್ರವಾಗಿ, ಮೋಕ್ಷದ ಗ್ರಹದಡಿಯಲ್ಲಿದ್ದು ಮೋಕ್ಷಕರ ಕೆಲಸಗಳನ್ನ ಮಾಡುವುದು ಸ್ವಲ್ಪಜಾಸ್ತಿಯಾಗಿರುತ್ತೇ ಅನ್ನಿ! ಆದರೆ ರೇವತಿಯವರು ಸಿಕ್ಕಾಪಟ್ಟೆ ಅಹಂಕಾರಿಗಳಾಗಿದ್ದು ಕೂಡ, ಅವರುಗಳು  ಕೂಡ ಮೋಕ್ಷಕರ ಕೆಲಸಗಳಾದ ಸಹಾಯವನ್ನ(ಹೆಲ್ಪಿಂಗ್ )ಬೇರವರಿಗೆ ಮಾಡುವುದು ಜಾಸ್ತಿಯೇ ಇರುತ್ತೆ.
6.      These Ashwini Nkashatra fellows are very self-prestige people! To this group, even Revati Star is also joined. They are also equally adamant people. Ashwini is the starting star of 27 Nakshatras in Zodiac system and Revati is the last star of Zodiac system. Hence both are belonging to Moksha category. Revati people are always helping others and thereby they may take Moksha!

7.      ರಾಜಕೀಯಕ್ಕೆ ನಿಂತರೆ ಇವರುಗಳು, ಅರ್ಥಾತ್ ಅಶ್ವಿನಿ ನಕ್ಷತ್ರದವರು ಗೆಲ್ಲುವುದು ನೂರಕ್ಕೆ ೧೦೦ ಸತ್ಯ! ಕಾರಣ ಇವರು ಎಲ್ಲರಿಗೂ ಬೇಕೆನಿಸಿಕೊಂಡಿರುತ್ತಾರೆ. ಉದಾಹರಣೆಗೆ ಲಾಲ್  ಕೃಷ್ಣ ಅದ್ವಾನೀಜೀ, ಲಾಲೂ ಪ್ರಸಾದ ಯಾದವ್ಜೀ ಈ ನಕ್ಷತ್ರದಡಿಯಲ್ಲಿ ಬರುತ್ತಾರೆನ್ನಿ.

8.      Ashwini Nakshatra is the political star. These Nakshatras are always on winning mode of ೧00%. To this category our great BJP leader, sri Lalkrishna Advaniji and Lalu Prasad Yadavji are coming.

9.      ಅಶ್ವಿನಿಯ ಆಕಾರ ಅಶ್ವದ ಆಕಾರವಾಗಿರುತ್ತೆ ನಭೋಮಂಡಲದಲ್ಲಿ. ಬರೇ ಮೂರು ನಕ್ಷತ್ರಗಳ ಒಂದು ಗುಂಪಾಗಿ, ನೀವುಗಳು ನಭೋಮಂಡಲದಲ್ಲಿ ನೀಲಿ ಆಕಾಶದಲ್ಲಿ ನೋಡಬಹುದು.

10. The shape of Ashvini is like horse made up of three stars in the Zodiac.

11. ಅಶ್ವಿನಿ ನಕ್ಷತ್ರಕ್ಕೆ ಅಧಿದೇವತೆ ಅಶ್ವಿನಿಕುಮಾರರು. ಇದರ ಅಧಿಪತಿ ಕೇತುವಿದ್ದ ಕಾರಣ, ಬಾಲ್ಯದಲ್ಲಿ ಬಾಲಾರಿಷ್ಠದಿಂದ ನರಳುವ ಸಾಧ್ಯತೆ ಜಾಸ್ತಿ. ಆದ್ದರಿಂದ ಇವರ ತಂದೆ ತಾಯಂದಿರು ಇವರಿಗಾಗಿ ಡಾಕ್ಟರಗಿರಿ ಮಾಡಿರುವುದು ಜಾಸ್ತಿ ಇರುತ್ತೆ.

12. Ashwini Nakshatra’s Adhidevata is Ashvini Kumar. Since Ketu is the lord of this Nakshatra, in the childhood, they are suffering from Balarishta. Hence their parents must have gone to the doctors very frequently.

13. ಇದು ನಮ್ಮಜೋಡಿಯಾಕಿನಲ್ಲಿ ೧೨ ರಾಶಿಗಳಲ್ಲಿ ಮೇಶದಲ್ಲಿ ಬರುತ್ತೆ. ಇವರುಗಳು, ಕಾಲಪುರುಷನ ಮುಖವಾಗಿ ಹೊರಹೊಮ್ಮುತ್ತಾರೆ. ಇವರುಗಳು ಬಹಳ ಬುಧ್ಧಿವಂತರು. ಎಲ್ಲಾ ಕೆಲಸಗಳನ್ನ ಇವರು ತಲೆಯನ್ನೇ ಉಪಯೋಗಿಸಿ ಮಾಡುತ್ತಾರೆ. ಅಂದರೆ ಬೇರೆ ನಕ್ಷತ್ರದವರಿಗೆ ಮಂಡೆ ಇಲ್ಲವೋ ಅಂತ ಕೇಳಬಹುದು ನೀವುಗಳು. ಹಾಗಲ್ಲ. ಇವರು ಬುಧ್ಧಿಯನ್ನ ಸರ್ವ ಪ್ರಥಮವಾಗಿ ಉಪಯೋಗಿಸುವುದು ಎಲ್ಲರಿಗಿಂತಲೂ ಜಾಸ್ತಿ. ಆದ್ದರಿಂದ ಇವರ ಕೆಲಸಗಳಲ್ಲಿಒಂದು ರೀತಿಯ ನಾಜೂಕು ಇರುತ್ತೆ. ಆದ್ದರಿಂದಲೇ ಶಾಭಾಸ್ಗಿರಿಯನ್ನ ಇವರುಗಳು ಎಲ್ಲರಿಂದಲೂ ತೆಗೆದುಕೊಳ್ಳುತ್ತಾರೆ. ಇವರುಗಳ ಕೈಯಲ್ಲಿ ನೀವು ಒಂದು ಕೆಲಸವನ್ನ ಕೊಟ್ಟು ನಿದ್ದೆ ಮಾಡಬಹುದು. ಇಷ್ಟು ನಿಮಗೆ ನಾನು ಕಿವಿ ಉಪದೇಶ ಮಾಡಬಲ್ಲೆ. ಹಾಗೆ ಮಾಡಿದರೆ ನೀವು ನಿಮ್ಮ ಕೆಲಸದಲ್ಲಿ ಗೆದ್ದಿರೀ ಅಂತ ತಿಳಿಯಿರಿ. ಕಾರಣ ಇವರು ಮಾಡುವ ಕೆಲಸವೇ ಹಾಗೆ. ಬಹಳ ಚೊಕ್ಕ ಹಾಗೂ ಖುಷಿ ಬೇರವರಿಗೆ ಬರುತ್ತೆ. ಹಣಕಾಸಿನ ವ್ಯವಹಾರದಲ್ಲಂತೂ ಒಂದೂ ಹೇರಾಫೇರಿ ಇವರುಗಳು ಮಾಡೋಲ್ಲ. ಆದ್ದರಿಂದಲೇ ಇವರೊಡನೆ ನೀವು ಹಣಕಾಸಿನ ಬಗ್ಗೆ ಲೆಕ್ಕ ಕೇಳದಿದ್ದರಂತೂ ನೀವುಗಳು ಜಾಣರಾಗಿರುತ್ತೀರಾ ವಿನಹ ಅವರಲ್ಲ. ಅವರುಗಳು ಹುಟ್ಟು ಜಾಣರು.

14. In zodiac, Mesha Rashi becomes the face of Kalapurusha in our Zodiac. Hence these persons are working through their brain! They use their intelligence first. If you give any responsibility to these Ashwini Nakshatra people, you may sleep well. That is the nature of Ashwini People! They are getting appreciation for doing sincerely their duties. These persons never do Hera Ferry in their work. Even if you are not asking for accounts, they themselves will give back accounts after finishing their job.

15. ಇನ್ನು ಅಶ್ವಿನಿಯ ಒಂದನೇ ಪಾದ ಮೇಶದಲ್ಲೇ ಬರುತ್ತೆ. ಒಟ್ಟಿಗೆ ಒಂದು ನಕ್ಷತ್ರಕ್ಕೆ ೧೩.೨೦ ಡಿಗ್ರೀ ಇರುತ್ತೆ ಅನ್ನಿ. ಅವುಗಳಲ್ಲಿ ಪ್ರತೀ ಪಾದಕ್ಕೆ ೩.೨೦ ಡಿಗ್ರೀ ಇರುತ್ತೆ. ಹಾಗೆಂದು ಒಂದು ರಾಶಿಗೆ ೩೦ ಡಿಗ್ರೀ. ಆದ್ದರಿಂದ ೨ ೧/೪ ನಕ್ಷತ್ರಗಳು ಒಂದು ರಾಶಿಗೆ ಬರುತ್ತವೇ ಅನ್ನಿ. ಈ ಅಶ್ವಿನಿಯ ೨ನೇ ಪಾದವು ವೃಷಭ ರಾಶಿಗೆ ಬರುತ್ತೆ. ಇದರ ಮೂರನೇ ಪಾದವು ಮಿಥುನಕ್ಕೆ ಬರುತ್ತೆ. ಅಶ್ವಿನಿಯ ನಾಲ್ಕನೇ ಪಾದವು ಕರ್ಕ ರಾಶಿಗೆ ಬರುತ್ತೆ. ಅಂದರೆ ಏನಂತ ವಿವರಿಸಿ ಹೇಳುತ್ತೀರಾ?
16. Ashwini-1 Pada falls 
into Aries itself. If one entire Nakshatra is of 13*20’, then one Navamsha will be 3*20’ and hence in one Rashi there are 2 1/4th Nakshatras. Means totally 9 padas of 2 ¼ Nakshatras are ther in a rashi and totally 108 Padas are there from 27 Nakshatras.

17. ಭಲ್ಲಿರೇನಯ್ಯಾ? ಇರುವಂತಹ ಸ್ಥಳ, ಬೆಂಗಳೂರು. ಹಾಗಾದರೆ ನಿಮ್ಮ ಭಾಷೆ ನಮ್ಮ ಉಡುಪಿಯ ಭಾಷೆ ಇದ್ದ ಹಾಗಿದೆಯಲ್ಲಾ? ನೀವು ಕೂಡ ಉಡುಪಿಯವರೋ? ಹೌದು ಹೌದು. ನಾನು ಪಾರಂಪಳ್ಳೀ ಗ್ರಾಮದಲ್ಲಿ ಹುಟ್ಟಿ ಬೆಳೆದು, ಬೆಂಗಳೂರಿಗೆ ವಲಸೆ ಬಂದು ನನ್ನ ಸರ್ವ ವಿದ್ಯಾಭಾಸಗಳನ್ನ ಈ ಅಶ್ವಿನಿ ನಕ್ಷತ್ರದವರೇ ಆದಂತಹ ನನ್ನ ಅಣ್ಣನಾದ  ಶ್ರೀ ಯೋಗೀಶ ಉಪಾಧ್ಯರ ಮನೆಯಲ್ಲಿಯೇ ಮಾಡಿ, ಅವರೇ ನನ್ನ ಮನೆ (ಎರಡು ಮಹಡಿಗಳನ್ನ) ಕಟ್ಟಿಸಿ, ಎರಡೂ ಹೆಣ್ಣು ಮಕ್ಕಳ ಮದುವೆಯನ್ನೂ ಮಾಡಿಸಿ , ನಾನೀಗ ಡಾಕ್ಟರೇಟ ಡಿಗ್ರೀಯನ್ನ ಮಾಡುವಂತೆ ಮಾಡಿಸಿದ್ದಾರೆ. ನನ್ನನ್ನ ಒಂದು ರೀತಿಯಲ್ಲಿ ಮೌಲ್ಡ್ ಮಾಡಿದ್ದಾರೆಂದರೂ ತಪ್ಪಾಗಲಿಕ್ಕಿಲ್ಲ.ಇದಕ್ಕೆ ಕಾರಣ ಅವರದ್ದು ಅಶ್ವಿನೀ ನಕ್ಷತ್ರ. ನನ್ನದು? ರೋಹಿಣೀ ನಕ್ಷತ್ರ. ತೆಗೊಳ್ಳಿ ಇಲ್ಲಿದೆ ನೋಡಿ ಮಜಾ. ಎರಡೂ ನಕ್ಷತ್ರಗಳು ಚಂದ್ರನ ಅಡಿ ಬರುತ್ತೆ. ಕೇತುವಿನದ್ದು ಸಂಖೆ ೭ ಆದರೆ, ಚಂದ್ರನದ್ದು ಸಂಖೆ ೨. ಆದ್ದರಿಂದಲೇ ನನ್ನ ಎಲ್ಲಾ ಕೆಲಸಗಳನ್ನ ಅಶ್ವಿನಿಯವರು ಬಹಳ ನಾಜೂಕಿನಿಂದ ಮಾಡಿದ್ದಾರೆ ಹಾಗೂ ಇನ್ನೂ ಕೂಡ ಅವರುಗಳು ಮಾಡುತ್ತಾರೆನ್ನುವ ಭರವಸೆ ನನಗುಂಟು!. ಇದು ಅಶ್ವಿನಿಯವರ ಎನೆರ್ಜೀ ಲವೆಲ್! ಯಾಕೆ ಇಲ್ಲಿ ಪ್ರಸ್ತಾಪನೇ ಮಾಡಿದ್ದೇನೆಂದರೆ, ಸುಮ್ಮನೆ ನೀವುಗಳು ತಿಕ್ಕಾಟವಾಡಬೇಡೀ ಅಂತ. ಅದಕ್ಕೆ ಜ್ಯೋತಿಷ್ಯದ ತಿಳುವಳಿಕೆ ಇದ್ದರಂತೂ ಬಹಳ ಉತ್ತಮ.

18. Ashvini Nakshatra since comes under the planet Ketu, in numerology, ketu got number 7 which is positive Moon. In numerology, Rohini star is also coming under Moon and its number is 2. Hence if Rohini and Ashwini together with, then Ashwini people will always help Rohini well.

19. ಆದರೆ ಅಶ್ವಿನಿ ನಕ್ಷತ್ರದವರಲ್ಲಿ ಒಂದು ಕೊರತೆ ಉಂಟು. ಅವರಿಗೆ ತಮಗಿಂತ ಬೇರೊಬ್ಬರು ಮೇಲೆ ಬರಬಾರದೆಂಬ ಸಣ್ಣ ತರಹದ ಹೊಟ್ಟೇ ಕಿಚ್ಚು  ಉಂಟು. ಇದನ್ನ ಮಾತ್ರ ನೀವು ಮರೆಯಬೇಕಷ್ಟೆಮತ್ತು ಸಹಿಸಬೇಕಷ್ಟೆ. ಈ ಮೇಶ ರಾಶಿಯಲ್ಲಿ ಈ ನಕ್ಷತ್ರ ಬರುವುದರಿಂದ, ಇವರಿಗೆ ಕೋಪ ಬರುತ್ತೆ. ಆದರೆ ಅದನ್ನ ಇವರುಗಳು ಸಕತ್ ಸಹಿಸಿಕೊಳ್ಳುತ್ತಾರೆ. ಇದಕ್ಕೆ ಕಾರಣ ಮೇಶವು ಅಗ್ನಿ ತತ್ವದ ರಾಶಿ. ಇವರಿಗೆ ಜಠರಾಗ್ನಿಯ ತೊಂದರೆಯೂ ಜಾಸ್ತಿ. ಹೊಟ್ಟೇ ಉರಿ, ಅಜೀರ್ಣ ಇತ್ಯಾದಿಗಳು ಇವರಿಗೆ ಬರುತ್ತವೆ. ಅಗ್ನಿ ಸರ್ಪವೂ ಇವರನ್ನ ಬಿಡೋಲ್ಲ!  ಅಗ್ನಿ ತತ್ವದ ರಾಶಿ ಯಾದುದರಿಂದಲೇ ಇವರುಗಳಿಗೆ ಪಿತ್ಥ ಸಂಬಂಧಿತ ಕಾಹಿಲೆಗಳು ಜಾಸ್ತಿ. ತಲೆಗೆ ಸಂಬಂಧಿಸಿದ ರೋಗ ಬರಬಹುದು, ಕಾರಣ ಕಾಲಪುರುಷನ ತಲೆಯೇ ಇವರ ದೇಹದ ಅಂಗ ತೋರಿಸುತ್ತೆ ಈ ರಾಶಿ. ಇವರ ಅಂತಿಮ ಘಟ್ಟದಲ್ಲಿ,  ಇವರ ಮಂಡೆ ಓಡದೇ ಹೋಗಬಹುದು! ಜಾಗ್ರತೆ.

20. Ashwini Nakshatra has one deficiency. That is they cannot tolerate a person coming up above their level. Some sorts of Jealousy is prevailing in Ashwini Nakshatra people. The get angry but controls a lot! They get problems related to Heat in the body as Mars is Agni or Fiery planet. They may get indigestion problems, ulcer and fistula and piles very frequently. They should avoid spicy food. They may get later onwards brain related problems. It may happen that in their old age, their brain may not work! They may suffer from Alzheimer or dementia diseases.

21. ಅದೇ ಅಶ್ವಿನಿಯ ಪಾದ -೨ ವೃಷಭಕ್ಕೆ ಬರುವುದರಿಂದ, ಅವರುಗಳು ಸ್ವಲ್ಪ ಎಮ್ಮೇ ಹಾಲನ್ನ ಕುಡಿದವರೆಂದರೆ ನೀವುಗಳು ಬಯ್ಯಲಿಕ್ಕಿಲ್ಲಾ ಎನ್ನಿ. ವೃಷಭ ರಾಶಿಯ ಸಿಂಬಲ್ಲೇ ಗೂಳಿ ಅನ್ನಿ. ಇವರುಗಳು ಸಮಾ ಉಟ ಮಾಡಿ ನಿದ್ದೆ ಹೋಗುವುದೆಂದರೆ ಇವರುಗಳಿಗೆ ಪಂಚ ಪ್ರಾಣ.

22. Ashwini -2nd Pada falls in Tarus Rashi, they are like buffalo milk eaters. Slow in everything. They are very fond of eating food and take rest for two days like lion used to do always, since the symbol of Vrishabha Rashi is buffalo!

23. ಅದೇ ಅಶ್ವಿನಿಯ ಮೂರನೇ ಪಾದವು ಮಿಥುನಕ್ಕೆ ಬರುವುದರಿಂದ, ಮಿಥುನ ರಾಶಿಯು ವಾಯುತತವದ ರಾಶಿಯಾದುದರಿಂದ, ಅಗ್ನಿ ಮತ್ತು ವಾಯು ಸೇರಿದರೆ ಬೆಂಕಿ ಭುಗಿಲೆಂದು ಮೇಲಕ್ಕೆ ಹಾರುತ್ತೆ. ಆದ್ದರಿಂದ ಯಾವಾಗಲೂ ಇವರ ಸಂಗಡ ಮಿಥುನ ರಾಶಿ ಅಥವಾ ಲಗ್ನದವರ ಜೊತೆ ಆಯಿತೆಂದರೆ ಅಲ್ಲಿ ಬೆಂಕೆ ಆಕಾಶದ ಕಡೆ ಹತ್ತಿತೆಂತಲೇ ಅರ್ಥ! ವಾಯು ತತ್ವದವರು ಮಾತನಾಡುವ ಸ್ವಭಾವದವರು ಹಾಗೂ ಬಹಳ ಬುಧ್ಧಿವಂತರೂ ಕೂಡ. ಅವರುಗಳು ಲಾಜಿಕ್ನಿಂದಲೇ ಮಾತನಾಡುವ  ಸ್ವಭಾವದವರು. ಮಿಥುನದವರು ಲಾಯರ್ ಆಗಲು ಲಾಯಕ್ಕಾದಂತಹ ವ್ಯಕ್ತಿಗಳು. ಅವರುಗಳ ಜೊತೆಯಲ್ಲಿ ಈ ಮೇಶದವರೆಲ್ಲಿಯಾದರೂ ಸಿಕ್ಕಿಬಿಟ್ಟರೆಂದರೆ, ಒಳ್ಳೆಯದಕ್ಕ್ಕೆ ಒಳ್ಳೆಯದ್ದೇ. ಆದರೆ ಅಶ್ವಿನಿಯವರೆಲ್ಲಿಯಾದರೂ ಕೆಟ್ಟದನ್ನ ಮಾಡಲು ಹೋದಲ್ಲಿ, ಆಗ ಮಿಥುನದವರು ಆ ಬೆಂಕಿಯನ್ನ ಆಕಾಶದತ್ತ ಗಾಳಿಯಿಂದ ತೆಗೆದುಕೊಂಡು ಹೋಗದಿದ್ದರೆ, ಅವರು ಮಿಥುನದವರೇ ಅಲ್ಲಾ ಅನ್ನಿ!

24. Ashwini-3rd Pada falls into Gemini, which is Vayu tatwa rashi. Hence if these two different Tatwas are together with, i.e. Air and Fire, then there will be definitely big Fire, which will reach up to the sky. Hence these two persons should avoid hating each other!

25. ಇನ್ನು ಅಶ್ವಿನಿಯ ನಾಲ್ಕನೇ ಪಾದ ಕರ್ಕ ರಾಶಿಗೆ ಬರುತ್ತೆ. ಕರ್ಕ ರಾಶಿಯು ಜಲ ತತ್ವದ ರಾಶಿ. ಇಲ್ಲಿ ಅಗ್ನಿ ಟುಸ್ಸಾಗಿ ಬಿಡುತ್ತೆ. ಇವರುಗಳು ಜಲತತ್ವ ಇರುವವರಲ್ಲಿ ಕಪ್ಪ ಕೊಡುತ್ತಾರೆ. ಅದಕ್ಕಾಗಿ ಮೇಶದವರಿಗೆ ವೃಷಭ ರಾಶಿ ಇಲ್ಲಾ ಕರ್ಕ ರಾಶಿ, ಕನ್ಯಾ ರಾಶಿ ಅಥವಾ ಮಕರ ರಾಶಿ ಹಾಗೂ ಕುಂಭ ರಾಶಿಯವರು ಜೋಡಿಯಾಗಿ ಬರಲು ಲಾಯಕ್ಕಾಗಿರುತ್ತಾರೆನ್ನಿ.

26. Ashwini-4th Pada falls into Karka Rashi, which is Jal Rashi. Here Ashwini people will become TUSS! That is why, Mesha people should marry Taurus, Cancer, Virgo, Capricorn and Aquarius go good match!

ಡಾಕ್ಟರ್ ಸುರೇಂದ್ರ ಉಪಾಧ್ಯರು. ಎಮ್.ಎಸ್.ಸಿ, ಪಿ.ಹೆಚ್.ಡಿ (ಜ್ಯೋತಿಷ)
೨೫/೦೭/೨೦೧೭


Comments

Popular Posts